ಧಾರವಾಡ: ಗರಗ ರಾಷ್ಟ್ರೋತ್ಥಾನ ಶಾಲೆಯಲ್ಲಿ ಅಕ್ಟೋಬರ್ 28ರಿಂದ ಆರ್‌ಎಸ್‌ಎಸ್‌ನ ಮೂರು ದಿನಗಳ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್

ಧಾರವಾಡ: ಧಾರವಾಡ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌ನ) ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್ ಅಕ್ಟೋಬರ್ 28, 29 ಹಾಗೂ 30 ರಂದು ನಡೆಯಲಿದೆ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಹೇಳಿದರು.
ಗರಗ ರಸ್ತೆಯಲ್ಲಿರುವ ಶಾಲೆಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಕಾರ್ಯಕಾರಿ ಬೈಠಕ್ ಮಾಡುತ್ತೇವೆ. 350 ಪ್ರಾಂತ ಪ್ರಮುಖರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಘದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಬೈಠಕ್ ನಡೆಯಲಿದೆ. ಕಾರ್ಯಕರ್ತರ ಬಗ್ಗೆ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು.
ಕೊರೊನಾ ಬಗ್ಗೆ ಎಲ್ಲ ಜಾಗೃತಿ ಹಾಗೂ ಮಾರ್ಗಸೂಚಿಗಳನ್ನು ಇಟ್ಟುಕೊಂಡೇ ಕಾರ್ಯಕ್ರಮ ನಡೆಯಲಿದೆ. ಜುಲೈನಲ್ಲೇ ಈ ಕಾರ್ಯಕ್ರಮದ ಯೋಜನೆ ಹಾಕಲಾಗಿತ್ತು ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿದೆ. ದೇವಾಲಯಗಳ ಮೇಲೆ‌ ದಾಳಿ ನಡೆದಿದೆ. ಈ ಬಗ್ಗೆ ಕೂಡಾ ಚರ್ಚೆ ನಡೆಯಲಿದೆ.
1925 ರಲ್ಲಿ ಸಂಘ ಸ್ಥಾಪನೆಯಾಗಿದೆ. ಅದಕ್ಕಾಗಿ 100 ವರ್ಷದ ಕಾರ್ಯಕ್ರಮ ಬಗ್ಗೆ ಕೂಡಾ ಚರ್ಚೆ ನಡೆಯಲಿದೆ. ಮೂರು ವರ್ಷದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ‌ ಮಾಡುತ್ತೇವೆ. ಎಲ್ಲಿ ನಾವು ತಲುಪಿಲ್ಲವೋ ಅಲ್ಲಿ ತಲುಪುವ ಬಗ್ಗೆ ಚರ್ಚೆಯಾಗಲಿದೆ ಎಂದ ಅವರು ಅಕ್ಟೋಬರ್‌ 28 ರಂದು ಬೆಳಿಗ್ಗೆ 9ಕ್ಕೆ ಸಂಘದ ಕಾರ್ಯಕಾರಿ ಆರಂಭವಾಗಲಿದೆ. ಯಾವುದೇ ಸಚಿವರು ಇದರಲ್ಲಿ ಭಾಗವಹಿಸುವುದಿಲ್ಲ. 350 ಪ್ರಾಂತ ಪ್ರಮುಖರು ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ಆರ್ ಎಸ್ ಎಸ್ ಬಗ್ಗೆ ವಾಗ್ದಾಳಿ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಘ ಸಮಾಜಮುಖಿಯಾಗಿ ತನ್ನ ಕೆಲಸ-ಕಾರ್ಯ ಮಾಡುತ್ತದೆ ಎಂದು ಉತ್ತರಿಸಿದರು.
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಾಕಿಸ್ತಾನದ ಪತ್ರಕರ್ತೆ ಜೊತೆ ಇರುವ ಪೋಟೊ ವೈರಲ್ ವಿಚಾರಣೆ ಪ್ರತಿಕ್ರಿಯಿಸಿದ ಅವರು, ಅದರ‌ ಬಗ್ಗೆ ಅಕ್ಟೋಬರ್‌ 30 ರಂದು ಮಾತನಾಡುತ್ತೇನೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟಿಗ ಮಹಮ್ಮದ್ ಶಮಿ ಟೀಕೆ ವಿಚಾರ ಕ್ರೀಡೆಯನ್ನ ಕ್ರೀಡಾ ಮನೋಭಾವನೆಯಿಂದ ನೋಡಬೇಕು ಎಂದು ಉತ್ತರಿಸಿದರು.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖರಾಧ ನರೇಂದ್ರ ಕುಮಾರ ಠಾಕೂರ್, ಆಲೋಕ ಕುಮಾರ್,‌ ಕ್ಷೇತ್ರ ಕಾರ್ಯವಾಹ ಎನ್. ತಿಪ್ಪೇಸ್ವಾಮಿ,
ಉಪಸ್ಥಿತರಿದ್ದರು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement