ಎನ್‌ಸಿಬಿಯಿಂದ ಮೂರು ಸಮೀರ್ ವಾಂಖೇಡೆ ವಿಚಾರಣೆ; ಅವರೇ ಕ್ರೂಸ್ ಡ್ರಗ್ಸ್‌ ಪ್ರಕರಣದ ತನಿಖೆ ಮುಂದುವರೆಸುತ್ತಾರೆ’ ಎಂದ ಎನ್​ಸಿಬಿ

ನವದೆಹಲಿ: ಮುಂಬೈ ಕ್ರೂಸ್ ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ತನಿಖಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಆರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಡೆಪ್ಯೂಟಿ ಡಿಜಿ ಜ್ಞಾನೇಶ್ವರ್ ಸಿಂಗ್ ಬುಧವಾರ ಹೇಳಿದ್ದಾರೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.
ವಾಂಖೇಟೆ ಅವರು ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಗಮನಾರ್ಹ ಮತ್ತು ವಿಶ್ವಾಸಾರ್ಹ ದಾಖಲೆಗಳು ಲಭ್ಯವಾಗುವವರೆಗೂ ಈ ಪ್ರಕರಣದ ತನಿಖೆಯನ್ನು ಅವರೇ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಮೀರ್‌ ವಾಂಖೇಡೆ ಅವರ ವಿರುದ್ಧದ ಆರೋಪಗಳ ಬಗ್ಗೆ ಎನ್‌ಸಿಬಿ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿತು ಮತ್ತು ಅವರು 7 ಪುಟಗಳ ಉತ್ತರವನ್ನು ಸಲ್ಲಿಸಿದರು, ಮತ್ತು ಅವರ ಕುಟುಂಬವನ್ನು ಬೆಂಬಲಿಸಿದರು. ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಅವರು ನಿರಾಕರಿಸಿದರು ಎಂದು ಮೂಲಗಳು ತಿಳಿಸಿವೆ. ಎನ್‌ಸಿಬಿ ಕೋರಿರುವ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರು ಸಲ್ಲಿಸಿದ್ದು, ಸಾಕ್ಷಿಗಳಾದ ಪ್ರಭಾಕರ್ ಸೈಲ್ ಮತ್ತು ಕೆ.ಪಿ. ಗೋಸಾವಿ ಅವರಿಗೂ ನೋಟಿಸ್ ನೀಡುವಂತೆ ಸಂಸ್ಥೆ ಕೋರಿದೆ.
ವಾಂಖೇಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಎನ್​ಸಿಬಿ ಜಾಗೃತ ದಳದ ಐವರು ಸದಸ್ಯರ ತಂಡ ಮುಂಬೈಗೆ ಬುಧವಾರ ತಲುಪಿದ್ದು, ಎನ್​ಸಿಬಿಯ ಮುಂಬೈ ಕಚೇರಿಯಿಂದ ಹಲವು ದಾಖಲೆಗಳು ಮತ್ತು ರೆಕಾರ್ಡಿಂಗ್​ಗಳನ್ನು ಸಂಗ್ರಹಿಸಿದೆ. ವಾಂಖೇಡೆ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಎಲ್ಲ ವಿಚಾರಗಳನ್ನೂ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಆಗುವುದಿಲ್ಲ ಎಂದು ಜ್ಞಾನೇಶ್ವರ ಸಿಂಗ್ ತಿಳಿಸಿದ್ದಾರೆ.
ಎನ್‌ಸಿಬಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಮುತಾ ಅಶೋಕ್ ಜೈನ್, “ವಿಜಿಲೆನ್ಸ್ ತಂಡವು ಸಮೀರ್ ವಾಂಖೇಡೆ ಹೇಳಿಕೆಯನ್ನು ತೆಗೆದುಕೊಳ್ಳುತ್ತಿದೆ, ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಇದು ಬೇರೆ ಸ್ಥಳದಲ್ಲಿ ನಡೆಯುತ್ತಿದೆ” ಎಂದು ಹೇಳಿದರು. ತನಿಖೆಯನ್ನು ರಾಜಕೀಯಗೊಳಿಸಲಾಗುತ್ತಿದೆಯೇ ಎಂದು ಕೇಳಿದಾಗ, ಅವರು “ನೋ ಕಾಮೆಂಟ್ಸ್” ಎಂದು ಹೇಳಿದರು.
ಮಾದಕ ವಸ್ತು ದಾಸ್ತಾನು, ಸೇವನೆಗೆ ಸಂಬಂಧಿಸಿದಂತೆ ಖ್ಯಾನ ನಟ ಶಾರೂಖ್​ ಖಾನ್ ಮಗ ಆರ್ಯನ್ ಖಾನ್ ವಿರುದ್ಧ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನಿಂದ ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಳ್ಳಲಾಯಿತು ಎಂದು ಪ್ರಭಾಕರ್ ಸೈಲ್ ಎಂಬ ಸಾಕ್ಷಿ ಆರೋಪ ಮಾಡಿದ್ದರು. ಎನ್​ಸಿಬಿಯ ಕೆಲ ಅಧಿಕಾರಿಗಳು ₹ 25 ಕೋಟಿ ಲಂಚ ಪಡೆಯಲು ಬೇಡಿಕೆಯಿಟ್ಟಿದ್ದರು. ಇದರಲ್ಲಿ ಒಂದಿಷ್ಟು ಮೊತ್ತವನ್ನು ವಾಂಖೇಡೆ ಅವರಿಗೆ ಹೋಗುವುದರ ಬಗ್ಗೆ ಗೋಸಾವಿ ಮತ್ತಿತರರು ಮಾತಾಡಿಕೊಳ್ಳುತ್ತಿದ್ದಾಗ ಈ ವಿಚಾರ ನನ್ನ ಕಿವಿಗೆ ಬಿದ್ದಿತ್ತು ಎಂದು ಪ್ರಭಾಕರ್ ಸೈಲ್ ಹೇಳಿದ್ದರು. ಇದರ ಜೊತೆಗೆ ಮಹಾರಾಷ್ಟ್ರ ಸಚಿವ ನವಾಬ್‌ ಮಲ್ಲಿಕ್‌ ಸಹ ವಾಂಖೇಡೆ ಕುಟುಂದ ಬಗ್ಗೆ ವೈಯಕ್ತಿಕ ಆರೋಪ ಮಾಡಿದ್ದರು.
ಹೈಪ್ರೊಫೈಲ್ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೇಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ವಾಂಖೇಡೆ ಹೇಳಿಕೆ ಪಡೆದಿದ್ದೇವೆ ಎಂದು ಎನ್​ಸಿಬಿ ಜಾಗೃತ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸುದೀರ್ಘ ನಾಲ್ಕು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ್ದೇವೆ ಅಗತ್ಯಬಿದ್ದರೆ ಅವ​​​ರನ್ನು ಮತ್ತೆ ವಿಚಾರಣೆಗೆ ಕರೆಯಲಾಗುತ್ತದೆ ಎಂದು ಎನ್​ಸಿಬಿ ಡಿಡಿಜಿ ಜ್ಞಾನೇಶ್ವರ ಸಿಂಗ್​ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement