ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲು; ಸಂಭ್ರಮಿಸಿದ ಶಿಕ್ಷಕಿ ಅಮಾನತು

ಜೈಪುರ: : ಭಾರತ ಮತ್ತು ಪಾಕಿಸ್ತಾನದ (India vs Pakistan) ವಿರುದ್ಧದ ವಿಶ್ವಕಪ್​ನ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸೋಲನ್ನು ಸಂಭ್ರಮಿಸಿ ವಾಟ್ಸಾಪ್​ ಪೋಸ್ಟ್​ ಹಾಕಿದ್ದ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ತಾನ (Rajastan) ಉದಯಪುರದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಜೊತೆಗೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉದಯಪುರದ ನೀರಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟ್ಟಾರಿ ಅವರು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಚಿತ್ರವನ್ನು ಹಾಕಿ ಜೀತ್ ಗಯೀ… ನಾವು ಗೆದ್ದಿದ್ದೇವೆ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.
ಶಿಕ್ಷಕಿ ನಫೀಸಾ ಅಟ್ಟಾರಿ ಅವರ ವಾಟ್ಸಾಪ್ ಸ್ಟೇಟಸ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಶಾಲೆಯ ಆಡಳಿತ ಮಂಡಳಿ ಅವರನ್ನು ವಜಾಗೊಳಿಸಿದೆ. “ನಾವು ಶಿಕ್ಷಕಿಯನ್ನು ವಜಾಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ” ಎಂದು ಸೋಜಾಟಿಯಾ ಚಾರಿಟೇಬಲ್ ಟ್ರಸ್ಟ್‌ನ ಸಭೆಯ ಬಳಿಕ ಶಾಲೆಯ ಅಧ್ಯಕ್ಷ ಮಹೇಂದ್ರ ಸೋಜಾಟಿಯಾ ದೃಢಪಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ) ಅಡಿಯಲ್ಲಿ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಂಬಾ ಮಾತಾ ಪೊಲೀಸ್ ಠಾಣೆ ಎಸ್‌ಎಚ್‌ಒ ನರ್ಪತ್ ಸಿಂಗ್ ಹೇಳಿದ್ದಾರೆ.
ಘಟನೆ ತೀವ್ರ ಸ್ಪರೂಪ ಪಡೆದುಕೊಂಡ ಬಳಿಕ ಪೋಸ್ಟ್‌ಗಾಗಿ ಕ್ಷಮೆಯಾಚಿಸುವ ವೀಡಿಯೊ ಹೇಳಿಕೆಯನ್ನು ಶಿಕ್ಷಕಿ ಬಿಡುಗಡೆ ಮಾಡಿ, ಯಾರ ಭಾವನೆಯನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದರು.
ಶಿಕ್ಷಕಿ ಹೇಳಿದ್ದೇನು?:
ಯಾರೋ ನನಗೆ ಸಂದೇಶ ಕಳುಹಿಸಿ ‘ನೀವು ಪಾಕಿಸ್ತಾನವನ್ನು ಬೆಂಬಲಿಸುತ್ತೀರಾ’ ಎಂದು ಕೇಳಿದರು. ಸಂದೇಶವು ಎಮೋಜಿಗಳನ್ನು ಹೊಂದಿದ್ದು ತಮಾಷೆಯಾಗಿತ್ತು ಅದಕ್ಕೆ, ನಾನು ‘ಹೌದು’ ಎಂದು ಉತ್ತರಿಸಿದೆ. ಆದರೆ, ಇದರರ್ಥ ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಎಂದಲ್ಲ. ನಾನು ಭಾರತೀಯಳು. ನಾನು ಭಾರತವನ್ನು ಪ್ರೀತಿಸುತ್ತೇನೆ. ನಾನು ತಪ್ಪು ಮಾಡಿದ್ದೇನೆ ಎಂದು ತಿಳಿದುಕೊಂಡ ತಕ್ಷಣ, ನಾನು ಸ್ಟೇಟಸ್ ಅಳಿಸಿದ್ದೇನೆ. ಯಾರ ಭಾವನೆಗಳನ್ನೆನಾದರೂ ನೋಯಿಸಿದ್ದರೆ ಕ್ಷಮಿಸಿ ಎಂದು ಶಿಕ್ಷಕಿ ತಮ್ಮ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement