ನವದೆಹಲಿ: ಮಕ್ಕಳನ್ನು ಬೈಕಿನ ಹಿಂಬದಿಗೆ ಕೂಡ್ರಿಸಿಕೊಂಡು ಹೋಗಲು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರಲಿದೆ.
ಈ ಹೊಸ ನಿಯಮದ ಪ್ರಕಾರ 9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳನ್ನು ಬೈಕಿನಲ್ಲಿ ಕೂಡ್ರಿಸಿಕೊಂಡು ಹೋಗುವುದಾದರೆ ಕ್ರ್ಯಾಶ್ ಹೆಲ್ಮೆಟ್ ಧರಿಸಬೇಕು ಎಂದು ನಿಯಮ ಸೂಚಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್‌ಟಿಎಚ್), ಸಣ್ಣ ಮಕ್ಕಳನ್ನು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರಿಗೆ ಹೊಸ ಸುರಕ್ಷತಾ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಸಚಿವಾಲಯ ಹೊರಡಿಸಿದ ಕರಡು ಅಧಿಸೂಚನೆಯ ಪ್ರಕಾರ, 4 ವರ್ಷದೊಳಗಿನ ಮಗುವನ್ನು ಮೋಟಾರ್ ಸೈಕಲ್‌ನಲ್ಲಿ ಕೂಡ್ರಿಸಿಕೊಂಡು ಹೋಗುವಾಗ ಬೈಕಿನ ವೇಗವು 40 ಕಿ.ಮೀಗಿಂತ ಹೆಚ್ಚಿರಬಾರದು. ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಮಗುವನ್ನು ಸವಾರನೊಂದಿಗೆ ಕೂಡ್ರಿಸುವ ಮಗುವಿಗೆ ಸುರಕ್ಷತಾ ಬೆಲ್ಟ್ ಹಾಕಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹೊಸ ನಿಯಮಾವಳಿಗಳು ಹೇಳುತ್ತವೆ. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳಿದ್ದಲ್ಲಿ, ಅದನ್ನು ನೀಡಬೇಕು ಎಂದು ಎಂಒಆರ್‌ಟಿಎಚ್ ಕೇಳಿದೆ.
4 ವರ್ಷದೊಳಗಿನ ಮಕ್ಕಳೊಂದಿಗೆ ಬೈಕ್ ಅಥವಾ ಸ್ಕೂಟರ್ ರೈಡ್ ಹೋಗುವಾಗ ಮಕ್ಕಳು ಹೆಲ್ಮೆಟ್ ಖಡ್ಡಾಯವಾಗಿ ಧರಿಸಬೇಕು. ಈ ಹೆಲ್ಮೆಟ್ ASTM 1447 ಅಥವಾ ಯುರೋಪಿಯನ್ (CEN) BS EN 1080/BS EN 1078 ಸ್ಟಾಂಡರ್ಡ್ ಹೆಲ್ಮೆಟ್ ಆಗಿರಬೇಕು. 9 ತಿಂಗಳಿಂದ ರಿಂದ 4 ವರ್ಷದೊಳಗಿನ ಮಕ್ಕಳ ಸೈಕಲ್ ಹೆಲ್ಮೆಟ್ ರೀತಿಯ ಸ್ಟಾಂಡರ್ಡ್ ಹೆಲ್ಮೆಟನ್ನು ಮಕ್ಕಳಿಗೂ ಹಾಕಬೇಕು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 2019ರಲ್ಲಿ 11,168 ಮಕ್ಕಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸರಾಸರಿ ನೋಡಿದರೆ 31 ಮಕ್ಕಳು ಪ್ರತಿ ದಿನ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಕೇಂದ್ರ ದಿಟ್ಟ ನಿರ್ಧಾರಕ್ಕೆ ಮುಂದಾಗಿದೆ.
ರಕ್ಷಣೆಗಾಗಿ, ಚಾಲಕನ ಸೊಂಟದ ಬೆಲ್ಟ್ ಸುತ್ತಲೂ ಪಟ್ಟಿಗಳನ್ನು ಹೊಂದಿರುವ ಲೈಫ್ ಜಾಕೆಟ್ ತರಹದ ಜಾಕೆಟ್ ಅನ್ನು ಧರಿಸಲು ಮಕ್ಕಳಿಗೆ ಸಲಹೆ ನೀಡಲಾಗುತ್ತದೆ. ರೈಡಿಂಗ್ ಗೇರ್ ಅಂದರೆ ವಯಸ್ಕರು ಹಾಕಿಕೊಳ್ಳುವ ನೀ ಪ್ಯಾಡ್ ಸೇರಿದಂತೆ ಮಕ್ಕಳ ಸುರಕ್ಷತಾ ಸಾಧನಗಳು ಇರಬೇಕು.
ಹಲವು ಪ್ರಕರಣಗಳು ಸಾವಿನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ವಯಸ್ಕರ ಪ್ರಯಾಣ ಸುರಕ್ಷತೆ ಜೊತೆಗೆ ಮಕ್ಕಳ ಪ್ರಯಾಣದ ಸುರಕ್ಷತೆ ಹೆಚ್ಚಿಸಲು ಕೇಂದ್ರ ಮೋಟಾರು ವಾಹನ ಕಾಯ್ದಿ ತಿದ್ದುಪಡಿ ಮಾಡಿದೆ.
ತಿದ್ದುಪಡಿಯಲ್ಲಿ ಮತ್ತೊಂದು ನಿಯಮವನ್ನು ಜಾರಿ ಮಾಡಲಾಗಿದೆ. ನೂತನ ನಿಯಮ ಪ್ರಕಾರ ಬೈಕ್ ಸವಾರ ಹಾಗೂ ಹಿಂಬದಿಯ ಮಗುವಿಗೆ ಸುರಕ್ಷತಾ ಸಾಧನವೊಂದು ಇರಬೇಕು. ಮಗುವನ್ನು ಬೈಕ್ ಸವಾರನ ಜೊತೆ ಕಟ್ಟುವ ಬೆಲ್ಟ್ ರೀತಿಯ ಸುರಕ್ಷತಾ ಸಾಧನ ಇರಬೇಕು ಎಂದು ಹೇಳಿದೆ.
ಈ ಸುರಕ್ಷ ಸಾಧನದಿಂದ ಮಗುವಿಗೆ ಬೆಲ್ಟ್ ರೀತಿಯಲ್ಲಿ ಹಾಕಿ ಈ ಬೆಲ್ಟನ್ನು ಬೈಕ್ ಸವಾರನ ಶೋಲ್ಡರ್ ಲೂಪ್‌ಗೆ ಜೋಡಿಸುವಂತಿರಬೇಕು. ಇದು ಹೊಂದಾಣಿಕೆ ಮಾಡುವಂತಿರಬೇಕು, ಸೊಂಟಪಟ್ಟಿ ಹಾಗೂ ಭುಜಕ್ಕೆ ಜೋಡಿಸುವ ಎರಡು ಪಟ್ಟಿಗಳನ್ನು ಹೊಂದಿರಬೇಕು.ಈ ಸುರಕ್ಷತಾ ಸಾಧನದಿಂದ ಮಗುವಿನ ದೇಹ ಬೈಕ್ ಸವಾರನ ಜೊತೆ ಭದ್ರವಾಗಿ ಅಂಟಿಕೊಳ್ಳಬೇಕು. ಮಗು ಕೈಬಿಟ್ಟರೂ, ನಿದ್ರಿಸಿದರೂ ಬೈಕ್ ಸವಾರನ ಬೆನ್ನಿಗೆ ಹೊಂದಿಕೊಂಡು ಭದ್ರವಾಗಿರಬೇಕು.
ರಕ್ಷಣಾತ್ಮಕ ಗೇರ್, ಹೊಂದಾಣಿಕೆ, ಜಲನಿರೋಧಕ ಮತ್ತು ಬಾಳಿಕೆ ಬರುವಂತಿರಬೇಕು. ಇದನ್ನು ಭಾರಿ ನೈಲಾನ್ ಅಥವಾ ಮಲ್ಟಿಫಿಲಮೆಂಟ್ ನೈಲಾನ್ ವಸ್ತುಗಳಿಂದ ಮಾಡಿರಬೇಕು ಮತ್ತು ಹೆಚ್ಚಿನ ಸಾಂದ್ರತೆಯ ಫೋಮ್ ಅನ್ನು ಹೊಂದಿರಬೇಕು ಮತ್ತು 30 ಕೆಜಿಯಷ್ಟು ತೂಕ ಹಿಡಿದಿಡಲು ವಿನ್ಯಾಸಗೊಳಿಸಬೇಕು. ಈ ಪ್ರಸ್ತಾಪಗಳ ಕುರಿತು ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ. ಷರತ್ತುಗಳನ್ನು ಅಂತಿಮಗೊಳಿಸಿದ ನಂತರ ಈ ನಿಯಮಗಳು ಜಾರಿಗೆ ಬರಲಿದೆ.ಈ ನಿಯಮಗಳನ್ನು ಜಾರಿಗೆ ತರಲು ಒಂದು ವರ್ಷ ಹಿಡಿಯುತ್ತದೆ ಎಂದು ಸಚಿವಾಲಯವು ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ