ಭಾರತದಿಂದ 5000-ಕಿಮೀ ವ್ಯಾಪ್ತಿ ಪರಮಾಣು ಸಾಮರ್ಥ್ಯದ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ನವದೆಹಲಿ: ಭಾರತ ಬುಧವಾರ ಒಡಿಶಾ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ರಾತ್ರಿ 7.50ಕ್ಕೆ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು.
ಮೂರು-ಹಂತದ ಘನ-ಇಂಧನ ಎಂಜಿನ್ ಅನ್ನು ಬಳಸುವ ಕ್ಷಿಪಣಿಯು 5,000-ಕಿಮೀ ವ್ಯಾಪ್ತಿಯವರೆಗಿನ ಗುರಿಗಳನ್ನು ಅತ್ಯಂತ ಹೆಚ್ಚಿನ ನಿಖರತೆಯೊಂದಿಗೆ ತಲುಪಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಮಿಸಿದ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯು ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ದೀರ್ಘಕಾಲದ ಗಡಿ ಬಿಕ್ಕಟ್ಟಿನ ಮಧ್ಯೆ ಬಂದಿದೆ. ಆದರೂ ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ಈ ಹಿಂದಿನ ನಿರ್ಧಾರಕ್ಕೆ ಇಂದಿಗೂ ಭಾರತ ಬದ್ಧವಾಗಿದೆ.
ಟ್ರಕ್ ಮೇಲೆ ಲೋಡ್​ ಮಾಡಿ ಅಗ್ನಿ-5 ಕ್ಷಿಪಣಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಬಹುದಾಗಿದೆ. ಭಾರತದ ಬಳಿ ಇಂಥ ಮಹತ್ವದ ಕ್ಷಿಪಣಿಗಳು ಇದೆ ಎನ್ನುವುದು ಇತರ ದೇಶಗಳು ಭಾರತದ ವಿರುದ್ಧ ಯುದ್ಧ ಘೋಷಿಸಲು ಹತ್ತು ಸಲ ಯೋಚಿಸುವಂತೆ ಮಾಡುತ್ತವೆ.
ಈ ಕ್ಷಿಪಣಿಯು ಏಷ್ಯಾವನ್ನು ಇಡಿಯಾಗಿ, ಯೂರೋಪ್ ಮತ್ತು ಆಫ್ರಿಕಾದ ಕೆಲ ಭಾಗಗಳನ್ನು ಗುರಿಯಾಗಿಸಬಲ್ಲದು. ಈ ಕ್ಷಿಪಣಿಯು ಬಳಸುವ ಎಂಜಿನ್ ಸಹ ವೈಶಿಷ್ಟ್ಯಪೂರ್ಣವಾದುದು. ಎಂಐಆರ್​ವಿ (Multiple Independently Targetable Re-entry Vehicles – MIRV) ತಂತ್ರಜ್ಞಾನದ ಈ ಎಂಜಿನ್​ ಬಳಸಿ ಉಡಾಯಿಸಿದ ಕ್ಷಿಪಣಿಯು ಹಲವು ಗುರಿಗಳನ್ನು ಏಕಕಾಲಕ್ಕೆ ಧ್ವಂಸ ಮಾಡಬಲ್ಲದು.
ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ಏಪ್ರಿಲ್ 2012 ರಲ್ಲಿ ನಡೆಸಲಾಯಿತು ಮತ್ತು ಹಿಂದಿನದನ್ನು ಸುಮಾರು ಮೂರು ವರ್ಷಗಳ ಹಿಂದೆ ನಡೆಸಲಾಯಿತು ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement