ಭಾರತೀಯ ಮೂಲದ ಅನಿತಾ ಆನಂದ್ ಕೆನಡಾದ ರಕ್ಷಣಾ ಸಚಿವರಾಗಿ ನೇಮಕ

ಟೊರಂಟೊ,: ಕೆನಡಾದ ನೂತನ ರಕ್ಷಣಾ ಸಚಿವರಾಗಿ ಭಾರತೀಯ ಮೂಲದ ಕೆನಡಾ ರಾಜಕಾರಣಿ ಅನಿತಾ ಆನಂದ್‌ ಅವರು ನೇಮಕವಾಗಿದ್ದಾರೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಅವರ ಲಿಬರಲ್ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರ ನಡೆಸಲು ಜನಾದೇಶ ಪಡೆದ ಸುಮಾರು 1 ತಿಂಗಳ ಬಳಿಕ ಸಚಿವ ಸಂಪುಟವನ್ನು ರಚಿಸಲಾಗಿದೆ. ಸುದೀರ್ಘಾವಧಿಯಿಂದ ರಕ್ಷಣಾ ಸಚಿವರಾಗಿದ್ದ , ಭಾರತೀಯ ಮೂಲದ ಹರ್ಜೀತ್ ಸಜ್ಜನ್‌ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆ ಸಚಿವರನ್ನಾಗಿ ನೇಮಿಸಲಾಗಿದೆ. ರಕ್ಷಣಾ ಪಡೆಯಲ್ಲಿ ಲೈಂಗಿಕ ಹಗರಣದ ಕುರಿತ ಆರೋಪವನ್ನು ಸೂಕ್ತವಾಗಿ ನಿರ್ವಹಿಸಲು ವಿಫಲವಾದ ಹಿನ್ನೆಲೆಯಲ್ಲಿ ಸಜ್ಜನ್‌ ಅವರನ್ನು ರಕ್ಷಣಾ ಇಲಾಖೆಯಿಂದ ವರ್ಗಾಯಿಸಲಾಗಿದೆ.
ಇವರ ಸ್ಥಾನದಲ್ಲಿ ಅನಿತಾರನ್ನು ನೇಮಿಸುವ ಮೂಲಕ ಲೈಂಗಿಕ ಹಗರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸರ್ಕಾರ ಸಂದೇಶ ನೀಡಿದೆ..
2019ರಲ್ಲಿ ಪ್ರಥಮ ಬಾರಿಗೆ ಸಂಸದೆಯಾಗಿ ಆಯ್ಕೆಗೊಂಡಿದ್ದ ಅನಿತಾ ಆನಂದ್, ಈ ಬಾರಿಯ ಚುನಾವಣೆಯಲ್ಲಿ ಓಕ್‌ವಿಲ್ಲೆ ಕ್ಷೇತ್ರದಿಂದ ಸುಮಾರು 46% ಮತ ಪಡೆದು ಗೆಲುವು ಸಾಧಿಸಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಸಾರ್ವಜನಿಕ ಸೇವೆ ಮತ್ತು ಖರೀದಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಕೊರೋನ ಸೋಂಕಿನ ಸಂದರ್ಭದಲ್ಲಿ ತಮ್ಮ ಅತ್ಯುತ್ತಮ ನಿರ್ವಹಣೆಯಿಂದ ವ್ಯಾಪಕ ಪ್ರಶಂಸೆಗಳಿಸಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ಲಿಂಗ ಸಮತೋಲನ ಕಾಯ್ದುಕೊಳ್ಳಲಾಗಿದೆ ಮತ್ತು 38 ಸಚಿವರನ್ನು ಹೊಂದಿದೆ ಎಂದು ಮೂಲಗಳನ್ನು ಉದ್ದೇಶಿಸಿ ಮಾಧ್ಯಮಗಳು ವರದಿ ಮಾಡಿವೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement