ಮಹಿಳೆ, ನವಜಾತ ಶಿಶು ರಕ್ಷಿಸಲು ವಾಪಸ್‌ ಬಂದ ರೈಲು…! ರೈಲ್ವೆ ಕಾರ್ಯಕ್ಕೆ ಭಾರೀ ಪ್ರಶಂಸೆ…

ಟಾಟಾನಗರ (ಜಾರ್ಖಂಡ್): ರೈಲು ಹೊರಟ ಕೆಲವೇ ಕ್ಷಣಗಳಲ್ಲಿ ರೈಲಿನಲ್ಲಿದ್ದ ಗರ್ಭಿಣಿಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮಹಿಳೆ ಮತ್ತು ವಜಾತ ಶಿಶು ಕಾಪಾಡಿದ  ಘಟನೆ ಜಾರ್ಖಂಡ್‌ನ ಟಾಟಾನಗರದಲ್ಲಿ ನಡೆದಿದೆ. ಈ ಕಾರ್ಯಕ್ಕೆ ರೈಲ್ವೆ ಇಲಾಖೆಗೆ ಬಾರೀ ಪ್ರಶಂಸೆ ವ್ಯಕ್ತವಾಗಿದೆ.
ಗರ್ಭಿಣಿ ಮಹಿಳೆಗೆ ಹೆರಿಗೆ ಇನ್ನೂ ದಿನಗಳು ಇದ್ದುದರಿಂದ ಅವಳು ರೈಲು ಪ್ರಯಾಣ ಮಾಡಲು ನಿರ್ಧರಿಸಿದ್ದಳು. ರಾಣು ದಾಸ್ ಎಂಬ ಮಹಿಳೆ ಒಡಿಶಾಕ್ಕೆ ಹೋಗಲು ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ಏರಿದ್ದಳು. ಆದರೆ ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ಬೆಳೀಗ್ಗೆ 4.10ಕ್ಕೆ ಜೆಮ್‌ಶೆಡ್‌ಪುರ ಬಳಿಯ ಟಾಟಾನಗರದಿಂದ ರೈಲು ಹೊರಟಿತ್ತು. ಎರಡೂವರೆ ಕಿಲೋಮೀಟರ್‌ನಷ್ಟು ರೈಲು ಹೋಗುವಷ್ಟರಲ್ಲಿ ಈ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯ ಕುಟುಂಬಸ್ಥರು ರೈಲಿನ ತುರ್ತು ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ನಂತರ ರೈಲಿನಲ್ಲಿಯೇ ಹೆರಿಗೆ ಮಾಡಿಸಲಾಗಿದೆ.
ರೈಲು ನಿಂತಿರುವುದಕ್ಕೆ ಆರ್‌ಪಿಎಫ್ ಪೊಲೀಸ್‌ ತಕ್ಷಣವೇ ಟಾಟಾನಗರ ರೈಲ್ವೆ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ರೈಲು ಹೊರಟರೆ ಮುಂದಿನ ನಿಲ್ದಾಣ ತಲುಪಲು ಕನಿಷ್ಠ ಎರಡೂವರೆ ಗಂಟೆ ಬೇಕಾಗಿತ್ತು. ವಾಪಸ್‌ ಹೋಗಲು ಕೇವಲ ಎರಡೂವರೆ ಕಿಮೀ ಕ್ರಮಿಸಬೇಕಾಗಿತ್ತು. ಎರಡೂವರೆ ತಾಸು ಪ್ರಯಾಣ ಮಾಡಿದರೆ ಮಹಿಳೆ ಆರೋಗ್ಯ ಸ್ಥಿತಿ ಹದಗೆಡಬಹುದು ಎಂದು ರೈಲ್ವೆ ಅಧಿಕಾರಿಗಳು ವಿಚಾರ ಮಾಡಿ ರೈಲನ್ನು ವಾಪಸ್‌ ಚಲಿಸುವಂತೆ ಮಾಡಿದ್ದಾರೆ. ರೈಲನ್ನು ಟಾಟಾನಗರ ನಿಲ್ದಾಣಕ್ಕೆ ವಾಪಸ್‌ ಬಂದಿದೆ.
ನಂತರ ತಾಯಿ ಮತ್ತು ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಿದ್ದೆ ಮಂಪರಿನಲ್ಲಿದ್ದ ಬಹುತೇಕ ಪ್ರಯಾಣಿಕರಿಗೆ ಪ್ರಯಾಣಿಕರಿಗೆ ಏನು ನಡೆಯಿತೆಂದು ತಿಳಿಯಲಿಲ್ಲ. ಕೊನೆಗೆ ವಿಷಯ ತಿಳಿದು ಹಲವರು ಅಧಿಕಾರಿಗಳ ಕ್ರಮಕ್ಕೆ ಶ್ಲಾಘನೆ ವ್ಯಕ್ತ‍‍ಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement