ಯೂ ಟ್ಯೂಬ್​​ ವಿಡಿಯೊ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ…!; ತಂದೆ-ತಾಯಿಗೆ ಮಗಳು ಗರ್ಭಿಣಿಯಾಗಿದ್ದೇ ಗೊತ್ತಿಲ್ಲ..!

ತಿರುವನಂತಪುರಂ: 17 ವರ್ಷದ ಹುಡುಗಿ ಯೂ ಟ್ಯೂಬ್​​ನಲ್ಲಿ ವಿಡಿಯೋ ನೋಡಿ, ಮಗುವಿಗೆ ಜನನ ನೀಡಿದ ಘಟನೆ ಕೇರಳದಲ್ಲಿ ನಡೆದ ಬಗ್ಗೆ ವರದಿಯಾಗಿದೆ…!
ವಿಶೇಷವೆಂದರೆ ಮಗಳು ಗರ್ಭಿಣಿ ಎಂಬುದು ತಂದೆ-ತಾಯಿಯವರಿಗೇ ಗೊತ್ತಿರಲಿಲ್ಲ.
ಈಕೆ ತನ್ನ ಕೋಣೆಯನ್ನು ಲಾಕ್‌​​ ಮಾಡಿಕೊಂಡು, ಯೂಟ್ಯೂಬ್‌ನಲ್ಲಿ ಮಗುವನ್ನು ಹೆರುವ ವಿಧಾನವನ್ನು ನೋಡುತ್ತಿದ್ದಳಂತೆ. ಅದನ್ನು ನೋಡಿ ನೋಡಿ ಅವಳು ಮಗುವನ್ನು ಹೆತ್ತಿದ್ದಾಳೆ. ಹಾಗೆಯೇ, ಹೆರಿಗೆಯಾದ ಮೇಲೆ ಕೂಡು ಮೂರು ದಿನ ಕೋಣೆಯಲ್ಲೇ ಇದ್ದಳು.
ಈ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಕ್ಟೋಬರ್​ 24ರಂದು ಈ ಘಟನೆ ನಡೆದಿದೆ. ತಂದೆ-ತಾಯಿಗೆ ಗೊತ್ತಿಲ್ಲದಂತೆ ತಾನೇ ಹೆರಿಗೆ ಮಾಡಿಕೊಂಡ ನಂತರ ಹುಡುಗಿ ಲಾಕ್‌ ಮಾಡಿಕೊಂಡಿದ್ದಾಳೆ. ಅಕ್ಟೋಬರ್ 24 ರಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಮಗುವಿಗೆ ಜನ್ಮ ನೀಡಿದ ಹಲವು ದಿನಗಳ ನಂತರವೇ ಆಕೆಯ ಅಸ್ವಸ್ಥ ತಾಯಿಗೆ ಮಗುವಿನ ಕೂಗು ಕೇಳಿದ ನಂತರ ವಿಷಯ ತಿಳಿದಿದೆ.  ಆಗ ಹುಡುಗಿಯ ತಾಯಿ ಬಾಗಿಲು ಬಡಿದಿದ್ದಾರೆ. ಕೋಣೆ ಬಾಗಿಲು ತೆರೆಯುತ್ತಿದ್ದಂತೆ ತಂದೆ-ತಾಯಿ ಇಬ್ಬರೂ ಶಾಕ್​ ಆಗಿದ್ದಾರೆ. ತಕ್ಷಣವೇ ಬಾಲಕಿ ಮತ್ತು ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆರಿಗೆಯಾದ ಮೂರು ದಿನಗಳ ಕಾಲ ಬಾಲಕಿ ತನ್ನ ಕೋಣೆಯನ್ನು ಲಾಕ್‌ ಮಾಡಿಕೊಂಡಿದ್ದಳು.
ಈಕೆ 17ವರ್ಷದವಳಾಗಿದ್ದರಿಂದ ಅವಳು ಅಪ್ರಾಪ್ತೆಯೆಂದೇ ಪರಿಗಣಿಸಲ್ಪಡುವುದರಿಂದ ಆಸ್ಪತ್ರೆಯವರು ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿ (CWC)ಗೆ ತಿಳಿಸಿದ್ದಾರೆ. ಸಮಿತಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ವಿಚಾರಣೆ ಮಾಡಿದಾಗ ಯುವತಿಯು ಪಕ್ಕದ ಮನೆಯ 21ವರ್ಷದ ಯುವಕನೇ ತನ್ನ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಯೂಟ್ಯೂಬ್​ ನೋಡಿ ಮಗುವಿಗೆ ಜನ್ಮ ನೀಡು. ಹೊಕ್ಕುಳಬಳ್ಳಿಯನ್ನು ಕತ್ತರಿಸುವ ವಿಧಾನವೂ ಅದರಲ್ಲೇ ಇರುತ್ತದೆ ಎಂದೂ ತನಗೆ ಹೇಳಿದ್ದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಹುಡುಗಿ ನೀಡಿದ ಮಾಹಿತಿ ಮೇರೆಗೆ ಯುವಕನನ್ನು ಈಗ ಬಂಧಿಸಿರುವ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಯುವತಿ ಮತ್ತು ಪಕ್ಕದ ಮನೆಯ ಯುವಕನಿಗೆ ಸಂಬಂಧವಿತ್ತು. ಈ ಬಗ್ಗೆ ಅವರ ಕುಟುಂಬದವರಿಗೂ ಗೊತ್ತಿತ್ತು. ಆದರೆ ಹುಡುಗಿ ಗರ್ಭಿಣಿಯಾಗಿದ್ದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಹುಡುಗಿ ತಾನು ಗರ್ಭಿಣಿಯಾದಾಗಿನಿಂದಲೂ ದಿನದ ಬಹುತೇಕ ಸಮಯ ತನ್ನ ಕೋಣೆಯಲ್ಲೇ ಇರುತ್ತಿದ್ದಳು. ಕೇಳಿದರೆ ನನಗೆ ಆನ್​ಲೈನ್​ ಕ್ಲಾಸ್​ ಇದೆ ಎಂದು ಕಾರಣ ನೀಡುತ್ತಿದ್ದಳು ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ಕೂಡ ಅಚ್ಚರಿ ವ್ಯಕ್ತಪಡಿಸಿದೆ. ಈ ಹುಡುಗಿ ಗರ್ಭಿಣಿಯಾಗಿದ್ದು ಆಕೆಯ ತಾಯಿಗೂ ಗೊತ್ತಾಗದೆ ಇರುವುದು ವಿಚಿತ್ರ ಎಂದು ಹೇಳಿದೆ. ಆದರೆ ಯುವತಿಯ ತಾಯಿಗೆ ದೃಷ್ಟಿ ದೋಷ ಇರುವ ಕಾರಣ ಮಗಳ ಬಗ್ಗೆ ಅರಿವು ಉಂಟಾಗಲಿಲ್ಲ. ಅವಳ ತಂದೆ ಸೆಕ್ಯೂರಿಟಿ ಗಾರ್ಡ್​ ಆಗಿದ್ದು ರಾತ್ರಿಯೆಲ್ಲ ಮನೆಗೆ ಬರುವುದಿಲ್. ಯುವಕ ಇದರ ಲಾಭ ಪಡೆದುಕೊಂಡಿದ್ದಾನೆ ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement