ಅಪ್ಪ ಡಾ.ರಾಜ್‌ ಹಾದಿಯಲ್ಲಿ ಸಾಗಿದ ಮಗ, ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್

ಬೆಂಗಳೂರು : ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರೊಬ್ಬರಲ್ಲಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರು ತಮ್ಮ ತಂದೆ ವರನಟ ಡಾ.ರಾಜಕುಮಾರ ಅವರ ಹಾದಿ ಅನುಸರಿಸಿದ್ದು, , ತಂದೆಯಂತೆ  ನೇತ್ರದಾನ ಮಾಡಿದ್ದಾರೆ.

46 ರ ಹರೆಯದ ಅಭಿಮಾನಿಗಳ ಪ್ರೀತಿಯ ಅಪ್ಪು ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನೇತ್ರದಾನದ ಮೂಲಕ ತಮ್ಮ ಎರಡೂ ಕಣ್ಣುಗಳನ್ನು ಇನ್ನಿಬ್ಬರಿಗೆ ನೀಡಿದ್ದು ಇಬ್ಬರ ಬದುಕಿಗೆ ಬೆಳಕಾಗಿದ್ದಾರೆ. ಅವರ ಆಸೆಯಂತೆ ಕಣ್ಣುಗಳನ್ನುತೆಗೆದು ಸಂರಕ್ಷಿಸಿಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಅಭಿಮಾನಿಗಳು ಕಣ್ಣೀರ ಕೊಡಿ ಹರಿಸುತ್ತಿದ್ದು, ಸಂಪೂರ್ಣ ಚಿತ್ರ ರಂಗ ಬರ ಸಿಡಿಲು ಎರಗಿದ ಸ್ಥಿತಿಗೆ ಜಾರಿದೆ

0 / 5. 0

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

ನಿಮ್ಮ ಕಾಮೆಂಟ್ ಬರೆಯಿರಿ

advertisement