ಪುನೀತ್​ ರಾಜ್​ಕುಮಾರ್ ನಿಧನಕ್ಕೆ ಪ್ರಧಾನಿ ಸಂತಾಪ, ಪುನೀತ ಜೊತೆ ತಮ್ಮ ಹಳೇ ಫೋಟೋ ಟ್ವೀಟ್​​ ಮಾಡಿದ ಮೋದಿ

ಬೆಂಗಳೂರು: ಸ್ಯಾಂಡಲ್​ವುಡ್ಡಿನ ಖ್ಯಾತ ನಟ ಪುನೀತ್ ರಾಜ್​ಕುಮಾರ್ (Puneeth Rajkumar)​ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಏರ್​ಪೋರ್ಟ್​ವೊಂದರಲ್ಲಿ ಪುನೀತ್​ ರಾಜಕುಮಾರ್​ ದಂಪತಿಯೊಟ್ಟಿಗೆ ಇರುವ ಫೋಟೋ ಶೇರ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಪ್ರತಿಭಾವಂತ ನಟ ಪುನೀತ್​ ರಾಜ್​ಕುಮಾರ್​ ಅವರದ್ದು ಅವರದ್ದು ಸಾಯುವ ವಯಸ್ಸಲ್ಲ. ಆದರೆ ವಿಧಿಯ ಕ್ರೂರ ತಿರುವೊಂದು ಅವರನ್ನು ನಮ್ಮಿಂದ ಕಿತ್ತುಕೊಂಡಿದೆ. ಪುನೀತ್​ ಅವರನ್ನು ಮುಂಬರುವ ಪೀಳಿಗೆ ಸದಾ ನೆನಪಲ್ಲಿಟ್ಟುಕೊಳ್ಳುತ್ತದೆ. ಅಂಥ ಅದ್ಭುತ ಕೆಲಸಗಳನ್ನು ಅವರು ಮಾಡಿದ್ದಾರೆ. ನಿಜಕ್ಕೂ ಅವರದ್ದು ಅದ್ಭುತ ವ್ಯಕ್ತಿತ್ವ. ಪುನೀತ್ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ. ಓಂ ಶಾಂತಿ ಎಂದು ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ನಟ ಪುನೀತ್​ ರಾಜ್​ಕುಮಾರ್ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. 2019ರ ಲೋಕಸಭೆ ಚುನಾವಣೆ ಪೂರ್ವ 2018ರ ಮೇ ತಿಂಗಳಲ್ಲಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ, ಮೂರು ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನಿ ಮೋದಿಯವರನ್ನು ಪುನೀತ್ ರಾಜ್​ಕುಮಾರ್ ಭೇಟಿಯಾಗಿದ್ದರು. ತಂದೆ ನಟ ರಾಜ್​ಕುಮಾರ್​ ಅವರ ಬಗ್ಗೆ ತಾವು ಬರೆದ ಪುಸ್ತಕವನ್ನು ಪ್ರಧಾನಿಯವರಿಗೆ ನೀಡಿದ್ದರು. ಈ ವೇಳೆ ಪತ್ನಿ ಅಶ್ವಿನಿ ಕೂಡ ಜತೆಗಿದ್ದರು. ನಂತರ ಫೋಟೋ ಟ್ವೀಟ್ ಮಾಡಿದ್ದ ಪುನೀತ್ ರಾಜ್​ಕುಮಾರ್​, ನಮ್ಮ ಕ್ರಿಯಾಶೀಲ ಪ್ರಧಾನಮಂತ್ರಿಯವರನ್ನು ಭೇಟಿಯಾಗುವ ಅದ್ಭುತ ಅವಕಾಶ ನನಗೆ ಸಿಕ್ಕಿತ್ತು. ನಾನು ನನ್ನ ಅಪ್ಪಾಜಿಯವರ ಬಗ್ಗೆ ಬರೆದ ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ ಎಂಬ ಪುಸ್ತಕವನ್ನು ಅವರಿಗೆ ನೀಡಿದೆ. ಅವರದನ್ನು ತುಂಬ ಪ್ರೀತಿಯಿಂದ ಸ್ವೀಕರಿಸಿದರು. ನಮ್ಮ ಇಡೀ ಕುಟುಂಬಕ್ಕೆ ಶುಭ ಹಾರೈಸಿದರು ಎಂದು ಹೇಳಿಕೊಂಡಿದ್ದರು. ಇಂದು ಪ್ರಧಾನಿ ಮೋದಿ ಅದೇ ಫೋಟೋವನ್ನು ಶೇರ್ ಮಾಡಿ ಪುನೀತ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement