ಬದುಕಿನ ಪಯಣ ಮುಗಿಸಿದ ಎಲ್ಲರ ಪ್ರೀತಿಯ ಅಪ್ಪು.. ಬಾಲದಲ್ಲೇ ನಟನೆಗೆ ರಾಷ್ಟ್ರ ಪ್ರಶಸ್ತಿ..ಸಿನೆಮಾ ಸಂಭಾವನೆ ಒಂದು ಭಾಗ ಅನಾಥಾಶ್ರಮ, ಗೋಶಾಲೆಗಳಿಗೆ

ಬೆಂಗಳೂರು: ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳಿಗೆ ಪ್ರೀತಿಯ ಅಪ್ಪು. 46 ವರ್ಷದ ನಟನಿಗೆ ಇಂದು ಬೆಳಿಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಬೆಳಿಗ್ಗೆ 11:30ಕ್ಕೆ ಪುನೀತ್​ ಅವರಿಗೆ ಹೃದಯಾಘಾತವಾಗಿದ್ದು, ಮೊದಲು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಇಸಿಜಿ ಮಾಡಿದ ನಂತರ ಅವರನ್ನು ತಕ್ಷಣವೇ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಪತ್ನಿ ಅಶ್ವಿನಿ, ಮಕ್ಕಳಾದ ವಂದಿತಾ, ಧ್ರುತಿ , ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಶಾಲೆಗೆ ಹೋಗುವ ವಯಸ್ಸಿನಲ್ಲೇ 1985ರಲ್ಲಿ ಬೆಟ್ಟದ ಹೂವು ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಅವರು ಡಾ.ರಾಜಕುಮಾರ ಅವರ ಐವರು ಮಕ್ಕಳಲ್ಲಿ ಕಿರಿಯರು. ಅವರಿಗೆ ಇಬ್ಬರು ಅಣ್ಣಂದಿರು ಹಾಗೂ ಅಕ್ಕಂದಿರು.

ಎಲ್ಲರಿಗೂ ಪ್ರೀತಿಯ ಅಪ್ಪು..:
ವರನಟ ಡಾ. ರಾಜಕುಮಾರ ಹಿರಿಯ ಪುತ್ರ ಶಿವರಾಜಕುಮಾರ ಹಾಗೂ ಕಿರಿಯ ಪುತ್ರ ಪುನೀತನಿಗೂ 13 ವರ್ಷ ವಯಸ್ಸಿನ ಅಂತರ. ಶಿವಣ್ಣನ ನಂತರ ಲಕ್ಷ್ಮಿ, ರಾಘವೇಂದ್ರ ರಾಜ್ ಕುಮಾರ್, ಪೂರ್ಣಿಮಾ ನಂತರ ಪುನೀತರಾಜಕುಮಾರ (ಅಪ್ಪು) ಕೊನೆಯವರು.
ಶಿವರಾಜಕುಮಾರ್ ಅನೇಕ ಟಿವಿ ಶೋಗಳಲ್ಲಿ ಹೇಳಿಕೊಂಡಂತೆ ಪುನೀತ್ ತನ್ನ ಕಣ್ಣ ಮುಂದೆ ಜನಿಸಿದ ಮಗು.ಆತ ನನಗೆ ಮಗನೇ ಎಂದು,
ರಾಘವೇಂದ್ರ ರಾಜ್ ಕುಮಾರ್ ಆರೋಗ್ಯ ಸಮಸ್ಯೆ ಎದುರಾದಗೆಲ್ಲಾ ಬೆನ್ನೆಲುಬಾಗಿ ನಿಲ್ಲುತ್ತಿದ್ದರು ಪುನೀತ್. ರಾಘವೇಂದ್ರ ರಾಜ್ ಕುಮಾರ್ ಅವರೇ ಒಮ್ಮೆ ಹೇಳಿಕೊಂಡಂತೆ ಅಪ್ಪಾಜಿ ಇಲ್ಲವಾದ ಬಳಿಕ ಶಿವಣ್ಣನೇ ನಮಗೆ ತಂದೆ ಸಮಾನ. ಪುನೀತ್ ನನಗೆ ತಮ್ಮನಲ್ಲ ನನ್ನ ಮೊದಲ ಮಗ ಎಂದು ಹೇಳಿದ್ದರು.ಅಕ್ಕಂದಿರು ಎಂದರು ಪುನೀತ್ ಗೆ ಬಲುಪ್ರೀತಿ. ಲಕ್ಷ್ಮೀ, ಪೂರ್ಣಿಮಾರ ಮುದ್ದಿನ ತಮ್ಮನಾಗಿದ್ದ.

ಪುನೀತರಾಜಕುಮಾರ ಸಿನಿ ಪಯಣ..

ಪ್ರಮುಖ ಸುದ್ದಿ :-   ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ : ಶೇ.95.6 ಅಂಕ ಗಳಿಸಿ ಅದ್ಭುತ ಸಾಧನೆ ಮಾಡಿದ ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿನಿ..
              ಪತ್ನಿ ಜೊತೆ

46 ವರ್ಷದ ನಟ ಪುನೀತ್​ ರಾಜ್​ಕುಮಾರ್​ ಪುನೀತ್​ ಒಂಭತ್ತು ತಿಂಗಳ ಮಗುವಾಗಿರುವಾಗಲೇ ರಾಜ್​ಕುಮಾರ್​ ಅವರ ಅಭಿನಯದ ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಅಭಿನಯಿಸಿದ್ದರು. 1975 ಮಾರ್ಚ್​ 17ರಂದು ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ, 1976 ಫೆಬ್ರವರಿ 28ರಂದು ತೆರೆಕಂಡಿತ್ತು. ವಿ. ಸೋಮಶೇಖರ್​ ನಿರ್ದೇಶನದ ಈ ಸಿನಿಮಾದಲ್ಲಿ ಆರತಿ, ಜಯಮಾಲ ಅಭಿನಯಿಸಿದ್ದರು.
ಈ ಸಿನಿಮಾದಲ್ಲಿ ಪುನೀತ್​ಗೆ ಅವಕಾಶ ವಿಚಿತ್ರ ಸನ್ನಿವೇಶದಲ್ಲಿ. ಈ ಸಿನಿಮಾದಲ್ಲಿ ರಾಜಣ್ಣನ ಮಗುವಾಗಿ ಅಭಿನಯಿಸಲು ಮಕ್ಕಳನ್ನು ಕರೆತರಲಾಗಿತ್ತು. ಆದರೆ ಚಿತ್ರೀಕರಣ ಆರಂಭವಾದರೂ ಮಕ್ಕಳು ಅಳು ನಿಲ್ಲಿಸುತ್ತಿರಲಿಲ್ಲವಂತೆ. ಇದರಿಂದಾಗಿ ಸೆಟ್​ನಲ್ಲೇ ಇದ್ದ ಪಾರ್ವತಮ್ಮ ಅವರ ಬಳಿಯಿದ್ದ ಪುನೀತರನ್ನೇ ತೆಗೆದುಕೊಂಡು ಪ್ರಯತ್ನಿಸೋಣ ಎಂದು ಹೇಳಿದ್ದರಂತೆ. ಇಲ್ಲಿಂದ ಪುನೀತ್‌ ಅವರ ಸಿನೆಮಾ ಪಯಣ ಆರಂಭವಾಯಿತು.
ಪುನೀತ್​ ನಿಜವಾದ ಹೆಸರು ಲೋಹಿತ್. ಡಾ. ರಾಜ್​ ಅಭಿನಯದ ‘ಪರಶುರಾಮ’ ಸಿನಿಮಾದಲ್ಲಿ ಅಭಿನಯಿಸುವಾಗ ಹೆಸರನ್ನು ಪುನೀತ್​ ಎಂದು ಬದಲಾಯಿಸಲಾಯಿತು.
ಅಪ್ಪು ಎಂಬುದು ಅವರನ್ನು ಮನೆಯಲ್ಲಿ ಕರೆಯುವ ಹೆಸರು. ಅದೇ ಹೆಸರನ್ನು ಅವರು ನಾಯಕನಾಗಿ ಅಭನಯಿಸಿದ . 2002ರಲ್ಲಿ ತೆರೆಕಂಡ ಮೊದಲ ಚಿತ್ರದ ಹೆಸರು ಅಪ್ಪು. ಸುಮಾರು 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪುನೀತ್​ ನಟಿಸಿದ್ದಾರೆ. ಅಭಿ ಸಿನಿಮಾದಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ‘ಬಿಂದಾಸ್​’, ‘ರಾಜಕುಮಾರ’, ‘ದೊಡ್ಮನೆ ಹುಡ್ಗ’, ‘ಹುಡುಗರು’, ‘ಜಾಕಿ’, ‘ನಿನ್ನಿಂದಲೇ’, ‘ನಟಸಾರ್ವಭೌಮ’ ಸೇರಿದಂತೆ ಸಾಕಷ್ಟು ಸಿನಿಮಾಗಳು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟವು.
ಕಿರುತೆರೆಯಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಕರಾಗಿಯೂ ಅದನ್ನು ಅತ್ಯಂತ ಜನಪ್ರಿಯ ಕಾರ್ಯಕ್ರಮವನ್ನಾಗಿಸಿದ್ದರು.

ಸಿನೆಮಾ ಸಂಭಾವನೆ ಒಂದು ಭಾಗ ಅನಾಥಾಶ್ರಮಗಳಿಗೆ ಕೊಡುತ್ತಿದ್ದ ಪುನೀತ್..
ವೃದ್ಧ ಜೀವಗಳನ್ನು ಕಾಪಾಡುವ ಅನಾಥಾಶ್ರಮಕ್ಕೆ ಅಪಾರ ಹಣ ನೀಡುತ್ತಿದ್ದರು.ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜೊತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಹಣ ನೀಡುತ್ತಿದ್ದರು.
ಪುನೀತ್ ನಟನೆ ಮಾಡಿದ್ದ ಸಿನಿಮಾ ಹವೃದ್ಧಾಶ್ರಮಗಳಗೆ ಕಳಿಸಬಾರದು ಎಂಬ ಸಂದೇಶವಿದ್ದ ರಾಜಕುಮಾರ ಸಿನಿಮಾ ಅಪಾರ ಯಶಸು ಕಂಡಿತ್ತು. ಅವರು ನಿಜ ಜೀವನದಲ್ಲಿಯೂ ಅದನ್ನು ಮುಂದುವರಿಸಿದರು. ಪುನೀತ್ ರಾಜಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು. ಮಾತ್ರವಲ್ಲದೇ ಸುಮಾರು 45ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಅನೇಕ ವೃದ್ಧಾಶ್ರಮಗಳನ್ನು ದತ್ತು ಪಡೆದು ಪೋಷಣೆ ಮಾಡಿದರು. ಶಕ್ತಿಧಾಮದ ಮೂಲಕ ನೂರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಪುನೀತ್ ತನ್ನ ಸಾರ್ವಜಿಕ ಸೇವೆಯನ್ನು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ.
ವರನಟ ಡಾ. ರಾಜಕುಮಾರ ಹಿರಿಯ ಪುತ್ರ ಶಿವರಾಜಕುಮಾರ ಹಾಗೂ ಕಿರಿಯ ಪುತ್ರ ಪುನೀತನಿಗೂ 13 ವರ್ಷ ವಯಸ್ಸಿನ ಅಂತರ. ಶಿವಣ್ಣನ ನಂತರ ಲಕ್ಷ್ಮಿ, ರಾಘವೇಂದ್ರ ರಾಜ್ ಕುಮಾರ್, ಪೂರ್ಣಿಮಾ ನಂತರ ಪುನೀತರಾಜಕುಮಾರ (ಅಪ್ಪು) ಕೊನೆಯವರು.
ಶಿವರಾಜಕುಮಾರ್ ಅನೇಕ ಟಿವಿ ಶೋಗಳಲ್ಲಿ ಹೇಳಿಕೊಂಡಂತೆ ಪುನೀತ್ ತನ್ನ ಕಣ್ಣ ಮುಂದೆ ಜನಿಸಿದ ಮಗು.ಆತ ನನಗೆ ಮಗನೇ ಎಂದು,
ರಾಘವೇಂದ್ರ ರಾಜ್ ಕುಮಾರ್ ಆರೋಗ್ಯ ಸಮಸ್ಯೆ ಎದುರಾದಗೆಲ್ಲಾ ಬೆನ್ನೆಲುಬಾಗಿ ನಿಲ್ಲುತ್ತಿದ್ದರು ಪುನೀತ್. ರಾಘವೇಂದ್ರ ರಾಜ್ ಕುಮಾರ್ ಅವರೇ ಒಮ್ಮೆ ಹೇಳಿಕೊಂಡಂತೆ ಅಪ್ಪಾಜಿ ಇಲ್ಲವಾದ ಬಳಿಕ ಶಿವಣ್ಣನೇ ನಮಗೆ ತಂದೆ ಸಮಾನ. ಪುನೀತ್ ನನಗೆ ತಮ್ಮನಲ್ಲ ನನ್ನ ಮೊದಲ ಮಗ ಎಂದು ಹೇಳಿದ್ದರು.
ಅಕ್ಕಂದಿರು ಎಂದರು ಪುನೀತ್ ಗೆ ಬಲುಪ್ರೀತಿ. ಲಕ್ಷ್ಮೀ, ಪೂರ್ಣಿಮಾರ ಮುದ್ದಿನ ತಮ್ಮನಾಗಿದ್ದ.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement