ನಟ ಪುನೀತ ರಾಜಕುಮಾರ ನಿಧನದ ಸುದ್ದಿ ವರದಿ ಮಾಡಿದ ಬಿಬಿಸಿ

ಸ್ಯಾಂಡಲ್‌ವುಡ್‌ ನಟ, ಪವರ್‌ ಸ್ಟಾರ್‌ ಪುನೀತ ರಾಜಕುಮಾರ ಅವರ ನಿಧನದ ಸುದ್ದಿಯನ್ನು ವಿದೇಶಿ ಮಾಧ್ಯಮಗಳೂ ಪ್ರಸಾರ ಮಾಡಿವೆ.
ಖ್ಯಾತ ಸುದ್ದಿವಾಹಿನಿ ಬಿಬಿಸಿ ಪುನೀತ ರಾಜಕುಮಾರ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ.
ಕನ್ನಡ ಚಿತ್ರರಂಗದ ತಾರೆ 29 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮತ್ತು ಅವರ ವೃತ್ತಿಜೀವನದ ಆರಂಭದಲ್ಲಿ “ಅತ್ಯುತ್ತಮ ಬಾಲ ಕಲಾವಿದ” ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಪುನೀತ ರಾಜ್‌ಕುಮಾರ್ ಶುಕ್ರವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ವ್ಯವಸ್ಥಾಪಕರು ಖಚಿತಪಡಿಸಿದ್ದಾರೆ ಎಂದು ವರದಿ ಮಾಡಿದೆ.

ಅವರ ಹಠಾತ್ ಸಾವಿನ ನಂತರ ನಗರದ ಅವರ ನಿವಾಸದ ಹೊರಗೆ ಜಮಾಯಿಸಿದ್ದ ಅವರ ಅಭಿಮಾನಿಗಳು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ ಎಂದು ಹೇಳಿದೆ.
ಜಿಮ್‌ಗೆ ಭೇಟಿ ನೀಡಿದ ನಂತರ ತೀವ್ರ ಆಯಾಸದಿಂದ ರಾಜ್‌ಕುಮಾರ್ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು ಎಂದು
ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.
ಕಂಠೀರವ ಸ್ಟೇಡಿಯಂನಲ್ಲಿ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳ ದರ್ಶನಕ್ಕೆ ಇಡಲಾಗಿದೆ. ಸಾವಿರಾರು ಜನರು ಅವರ ಅಂತಿಮ ದರ್ಶನ ಪಡೆಯಲು ಆಘಮಿಸುತ್ತಿದ್ದಾರೆ.
ಪುನೀತ ರಾಜ್‌ಕುಮಾರ್ ತಮ್ಮ ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದರು ಮತ್ತು ತಂದೆಯ ಗರಡಿಯಲ್ಲಿ ಬೆಳೆದ ಅವರು ಕೇಔಲ ನಟನೆಯಷ್ಟೇ ಅಲ್ಲ, ತಂದೆ ರಾಜ್‌ಕುಮಾರ್ ಅವರಂತೆ ಹಿನ್ನೆಲೆ ಗಾಯಕರಾಗಿದ್ದರು. ಅವರು ಕೇವಲ 10 ವರ್ಷದವರಾಗಿದ್ದಾಗ ಬೆಟ್ಟದು ಹೂವು” ಚಿತ್ರದಲ್ಲಿ ನಟಿಸಿ ಪ್ರಶಸ್ತಿ ಪಡೆದಿದ್ದರು.
ಒಂದು ದಶಕಗಳ ನಂತರ ನಂತರ, ಅವರು “ಅಪ್ಪು” ಸಿನೆಮಾದಲ್ಲಿ ಕಾಣಿಸಿಕೊಂಡರು. ನಂತರ ಚಲನಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದರು.ಅವರು ಕೇವಲ ನಟನೆಯಷ್ಟೇ ಅಲ್ಲ, ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದರು ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವಿಧಿಯ ಕ್ರೂರ ತಿರುವು ನಮ್ಮಿಂದ ಸಮೃದ್ಧ ಮತ್ತು ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕಿತ್ತುಕೊಂಡಿದೆ. ಇದು ಹೋಗಬೇಕಾದ ವಯಸ್ಸಾಗಿರಲಿಲ್ಲ” ಎಂದು ಮೋದಿ ಹೇಳಿದರು ಎಂದು ಬಿಬಿಸಿ ವರದಿ ಮಾಡಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement