ದಟ್ಟ ಕಾನನದ ಅಕ್ಷರ ಗೊತ್ತಿಲ್ಲದ ಕುಣಬಿ ಸಮುದಾಯದ ಜಾನಪದ ಭಂಡಾರ ಮಹಾದೇವ ವೇಳಿಪಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕಾರ್ಟೋಳಿಯ ಮಹಾದೇವ ಬುಧೊ ವೇಳಿಪ   (೯೨ ವರ್ಷ) ಜಿಲ್ಲೆಯ ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಣಬಿ ಸಮುದಾಯದ ಜಾನಪದ ಭಂಡಾರ.

ಅಕ್ಷರವೇ ಗೊತ್ತಿರದಿದ್ದರೂ ಅಪಾರವಾದ ಜನಪದದ ಭಂಡಾರವಿದೆ. ಅರಣ್ಯವೇ ಅವರ ಬದುಕು. ಇಂದು ಅಗತ್ಯವಿರುವ
ಬೆಳೆದು ಉಣ್ಣುವವರು. ಜೊಯಿಡಾದಿಂದ ಹದಿನೈದು ದೂರವಿರುವ ಕಾರ್ಟೋಳಿ ಎಂಬ ಹಳ್ಳಿಯಲ್ಲಿ ತಮ್ಮ
ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ.
ಸುಮಾರು 60 ವರ್ಷಗಳಿಂದ ಜಾನಪದ ಕಲಾವಿದರಾಗಿದ್ದು, ಕುಣಬಿ ಸಾಂಪ್ರದಾಯಿಕ ಕುಣಿತ, ಕಾಡು, ಪ್ರಾಣಿ, ಮತ್ತು ಪ್ರಕೃತಿಗೆ ಸಂಬಂಧಿಸಿದ ಅನೇಕ ಕಥೆಗಳು, ತುಳಸಿ ಪದ, ರಾಮಾಯಯಣ ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಹಾಡುಗಳನ್ನು ಇವರು ಹಾಡಬಲ್ಲರು. ಕುಣಬಿಗಳ ಶ್ರಮ ಸಂಸ್ಕೃತಿಯನ್ನು ಬಿಂಬಿಸುವಂತಹ ಅನೇಕ ಹಾಡುಗಳನ್ನು ಇವರು ಹಾಡುತ್ತಾರೆ. ಕುಣಬಿಗಳ ಶಿಗ್ಮೋ ಖೇಳ ಹಾಡುಗಳು, ಉತ್ತರ ಕನ್ನಡ ಜಿಲ್ಲೆಯ ಜೀವ ನದಿಯಾದ ಕಾಳಿ ನದಿಯ ಉಗಮಕ್ಕೆ ಸಂಬಂಧಿಸಿದ ಹಾಡುಗಳು, ಮಳೆಗಾಗಿ ಪ್ರಾರ್ಥಿಸುವ ಹಾಡುಗಳು, ಕಾಡುಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ಹಾಡುಗಳು, ಕುಂಬ್ರಿ (ರಾಗಿ) ಬೇಸಾಯ ಪದ್ಧತಿಗೆ ಸಂಬಂಧಿಸಿದ ಹಾಡುಗಳು ಇಂದಿಗೂ ಕೂಡ ನೆನಪಿಟ್ಟುಕೋಂಡು ಅವರು ಹಾಡುತ್ತಾರೆ. ಅವರು ಚಿಕ್ಕವರಿದ್ದಾಗ ತಮ್ಮ ಹಿರಿಯರ ಜೊತೆ ಹಾಡು ಹೇಳಲು ಕಲಿತವರು.ತಲಾಂತರದಿಂದ ಬಾಯಿಂದ ಬಾಯಿಗೆ ವರ್ಗಾವಣೆಗೊಂಡ ಅನೇಕ ಹಾಡುಗಳನ್ನು ಅವರು ಗಂಟೆ ಗಟ್ಟಲೆ ಹಾಡುತ್ತಾರೆ.ಇವರು ಸತತ ೪೮ ಗಂಟೆಗಳ ಕಾಲ ಹಾಡಬಲ್ಲರು. ಕಾಡಿನ ರಕ್ಷಣೆಯಲ್ಲಿ ಜೇಣು ಹುಳುವಿನ ಮಹತ್ವ ಕೂಡ ಅವರು ಬಲ್ಲರು. ಜೇನು ಹುಳುಗಳು ಹಾಗೂ ಗೂಡುಗಳ ವಿವಿಧ ಹಾಡುಗಳನ್ನು ಅವರು ಹಾಡುಬಲ್ಲರು.
ಒಂದಕ್ಷರ ಕಲಿಯದಿದ್ದರೂ ದಟ್ಟ ಕಾನನದ ಕಾರ್ಟೋಳಿಗೆ ಕನ್ನಡ ಶಾಲೆ ತರುವಲ್ಲಿ ಇವರ ಹೋರಾಟದ ದೊಡ್ಡದು. ‘ತಾವು ಶಾಲೆಗೆ
ಹೋಗಲಿಲ್ಲ. ಆದರೆ ತಮ್ಮ ಮಕ್ಕಳಾದರೂ ಶಾಲೆಗೆ ಹೋಗಲಿ. ಕುಣಬಿ ಜನಾಂಗದ ಮಕ್ಕಳು ಹೆಚ್ಚು ವಿದ್ಯಾವಂತರಾಗಲಿ’ ಎಂಬ ಆಶಯ ಇವರದ್ದು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಇವರು ಖ್ಯಾತ ನಾಟಿ ವೈದ್ಯ ಕೂಡ ಹೌದು. ಜೊಯಿಡಾದ ದಟ್ಟ ಅರಣ್ಯ ಪ್ರದೇಶದಲ್ಲಿ ಸಿಗುವಂತಹ ಗಿಡಮೂಲಿಕೆಗಳನ್ನು ತಂದು ಮನೆಯಲ್ಲಿಯೇ ಔಷಧಗಳನ್ನು ತಯಾರಿಸಿ ಅನಾರೋಗ್ಯ ಪೀಡಿತರಿಗೆ ಉಚಿತವಾಗಿ ಇವರು ನೀಡುತ್ತಾರೆ. ಇತ್ತಿಚಿಗೆ ಕುಣಬಿ ಸಮುದಾಯಕ್ಕೆ ಸಂಬಂಧಿಸಿದಂತೆ ಒಂದು ಕಿರುಚಿತ್ರ ಡಿಡಿ ಚಂದನವಾಹಿನಿಲ್ಲಿ ಪ್ರಸಾರವಾಗಿತ್ತು. ಈ ಕಿರುಚಿತ್ರದಲ್ಲಿ ಮಹಾದೇವ ವೇಳಿಪ ಅವರು ಇಳಿವಯಸ್ಸಿನಲ್ಲಿಯೂ ಜಾನಪದ, ಕಾಡು ನಾಡು ಗೆಡ್ಡೆ ಗೆಣಸು ಹಾಗೂ ನಾಟಿ ವೈದ್ಯ ಪದ್ಧತಿ ಕುರಿತು ವಿವರವಾಗಿ ತಿಳಿಸಿದ್ದರು, ಕಲ್ಲು, ಮಣ್ಣು, ಮರವನ್ನು ಪೂಜಿಸುವ ಕಾಡಿನ ಮರಗಿಡಗಳಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ಅವುಗಳನ್ನೆಲ್ಲ ರಕ್ಷಿಸಿ, ಬೆಳಸುವ ಕಾರ್ಯ ಮಾಡುತ್ತಿದ್ದಾರೆ.ಕಾಡಿನಲ್ಲಿರುವ ಅನೇಕ ಗಡ್ಡೆ-ಗೆಣಸುಗಳ ಪರಿಚಯವೂ ಇವರಿಗಿದೆ. ಗಡ್ಡೆ -ಗೆಣಸುಗಳ ಸುಮಾರು ೩೮ ಜಾತಿಯ ಗಡ್ಡೆಗಳನ್ನು ಅವರು ಗುರುತಿಸಿ ವಿವರಣೆ ಕೊಡಬಲ್ಲರು.
ಕಾಡಿನಲ್ಲಿ ಆಯಾ ಕಾಲಕ್ಕೆ ಆಗುವ ಸುಮಾರು ೨೨ ಜಾತಿಯ ಹಣ್ಣುಗಳ ಬಗ್ಗೆ ಇವರಿಗೆ ಸಂಪೂರ್ಣ ಮಾಹಿತಿ ಇದೆ.

ಮಹಾದೇವ ವೇಳಿಪ ಅವರ ಇನ್ನೊಂದು ವಿಶೇಷವೆಂದರೆ ಇವರು ಬೆಂಕಿ ಪೆಟ್ಟಿಗೆಯಿಲ್ಲದೆ ಕಲ್ಲು ಹಾಗೂ ಮಾಡಿ ಮರದ ತೊಗಟೆಯ ಸಹಾಯದಿಂದ ಬೆಂಕಿ ಹಚ್ಚಿ ದಿನ ಬಳಕೆಗೆ ಬೆಂಕಿ ಉಪಯೋಗಿಸುತ್ತಾರೆ. ಅನೇಕ ಹಳ್ಳಿಗಳಲ್ಲಿ ಯುವಕ/ಯುವತಿಯರಿಗೆ ಜಾನಪದ ಕಲೆ ಕಲಿಸಿ ಅರಣ್ಯವಾಸಿ ಕುಣಬಿ ಸಮುದಾಯದ ಜನಪದ ಕಲೆ ಇಂದಿಗೂ ಪ್ರೋತ್ಸಾಹಿಸುತಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement