ಜನಪ್ರಿಯ ನಟ ಪುನೀತ್ ರಾಜಕುಮಾರ ಸಾವಿನ ನಂತರ ಹೃದಯ ತಪಾಸಣೆಗೆ ಮುಗಿಬಿದ್ದ ಬೆಂಗಳೂರು-ಮೈಸೂರು ಜನ..!

ಬೆಂಗಳೂರು : ಜನಪ್ರಿಯ ನಟ ಪುನೀತ್ ರಾಜ್‍ಕುಮಾರ್ ಎಳೆಯ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾದ ಬಳಿಕ ಜನರಲ್ಲಿ ತಮ್ಮ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ಬೆಂಗಳೂರು ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ಹೃದಯ ಸಂಬಂಧಿ ತಪಾಸಣೆಗೆ ಶೇಕಡಾ 25 ರಷ್ಟು ಜನರು ಬರುವುದು ಹೆಚ್ಚಾಗಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರಾ ಡಾ|| ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪುನೀತ್ ರಾಜ್‍ಕುಮಾರ್ ಮೃತಪಟ್ಟ ಘಟನೆಯಿಂದ ಹೆಚ್ಚಿನ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಈ ಹಿಂದೆ ಕನ್ನಡ ಚಿತ್ರ ರಂಗದ ಇನ್ನೊಬ್ಬ ಯುವನಟ ಚಿರಂಜೀವಿ ಸರ್ಜ ಕೂಡ ಹೃದಯಾಘಾತದಿಂದ ನಿಧನರಾಗಿದ್ದರು ಇವರಿಬ್ಬರು ಯಾವ ಮುನ್ಸೂಚನೆಯೂ ಇಲ್ಲದೇ ಹೃದಯಾಘಾತದಿಂದ ನಿಧನನರಾಗಿದ್ದಾರೆ. ಇದು ಯುವ ಸಮೂಹದಲ್ಲಿ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು ಹೀಗಾಗಿ ಹೃದಯದ ಕುರಿತು ತಪಾಸಣೆಗಾಗಿ ಆಸ್ಪತ್ರೆಗೆ ಬರುವವರು ಸಂಖ್ಯೆ ಹೆಚ್ಚಾಗಿದೆ. ಈಗ ದಿನಕ್ಕೆ 1500 ರಷ್ಟು ಮಂದಿ ಬರುತ್ತಿದ್ದಾರೆ. ಹೃದಯ ಸಂಬಂಧಿ ತಪಾಸಣೆಗೆ ಶೇಕಡಾ 25 ರಷ್ಟು ಜನರು ಬರುವುದು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಇವರಿಬ್ಬರ ಸಾವು ಹೆಚ್ಚಿನ ಜನರನ್ನು ಭಯದ ರೂಪದಲ್ಲಿ ಕಾಡುತ್ತಿದೆ ಇದರಿಂದಲೇ ಹೆಚ್ಚಿನ ಜನರು ಆಸ್ಪತ್ರೆಗೆ ದಾವಿಸಿ ಹೃದಯಕ್ಕೆ ಸಂಭಂದಿಸಿದ ಹೆಚ್ಚಿನ ಚೆಕಪ್ ಗಳನ್ನು ಮಾಡಿಸುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಕುಟುಂಬಸ್ತರು ತಮ್ಮ ಮನೆಯವರನ್ನು ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲು ಒತ್ತಾಯಿಸುತ್ತಿದ್ದಾರೆ. ಇದರಿಂದ ಬೆಂಗಳೂರು ಹಾಗೂ ಮೈಸೂರು ನಗರದ ಹಲವು ಆಸ್ಪತ್ರೆಗಳಲ್ಲಿ ಹೃದಯ ಸಂಭಂದಿ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement