ನಾಯಿಗೆ ಹಿಂಸೆ ನೀಡುತ್ತಿದ ವ್ಯಕ್ತಿ ಮೇಲೆ ದಾಳಿ ಮಾಡಿದ ಆಕಳು..ಅದರ ಕೋಪ ಹೇಗಿತ್ತೆಂದರೆ..!: ದೃಶ್ಯ ವಿಡಿಯೊದಲ್ಲಿ ಸೆರೆ

ಪ್ರಾಣಿಗಳು ಹೇಗೆ ಪ್ರೀತಿಗೆ ಸ್ಪಂದಿಸುತ್ತವೆಯೇ ಅದೇ ರೀತಿ ಹಿಂಸೆ ಮಾಡಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ, ತಮಗಷ್ಟೇ ಅಲ್ಲ, ಮತ್ತೊಂದು ಪ್ರಾಣಿಗೆ ಹಿಂಸೆ ಮಾಡುವುದನ್ನೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ಸಾಬೀತು ಪಡಿಸಿವೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.
ವ್ಯಕ್ತಿಯೊಬ್ಬ ನಾಯಿಗೆ ಕಿರುಕುಳ ನೀಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಯಿಯ ಕಿವಿಗಳನ್ನು ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿದ ಅಲ್ಲೇ ಸಮೀಪದಲ್ಲಿದ್ದ ಹಸು ಕೋಪಗೊಂಡು ವ್ಯಕ್ತಿಯನ್ನು ನೂಕಿ ನೆಲಕ್ಕೆ ಬೀಳಿಸಿದೆ. ಅಷ್ಟೇ ಅಲ್ಲದ, ತನ್ನ ಕೋಡಿನಿಂದ ವ್ಯಕ್ತಿಯನ್ನು ತಿವಿದಿದೆ.

ವ್ಯಕ್ತಿ ನಾಯಿಗೆ ಹಿಂದೆ ಕೊಟ್ಟಿದ್ದಕ್ಕೆ ಆಕಳು ಈ ವ್ಯಕ್ತಿಗೆ ನೀಡಿದ ಶಿಕ್ಷೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಕ್‌ ಆಗಿದೆ. ವ್ಯಕ್ತಿ ನಾಯಿಯ ಕಿವಿ ಹಿಡಿದು ತಿರುಚಿ ಹಿಂದೆ ನೀಡುತ್ತಿದ್ದಂತೆ ನೋವಿಗೆ ಆ ನಾಯಿ ಜೋರಾಗಿ ಅರಚುತ್ತಿತ್ತು, ಒದ್ದಾಡುತ್ತಿತ್ತು. ಅದನ್ನು ನೋಡಿದ ಸಮೀಪದಲ್ಲಿಯೇ ಇದ್ದ ಹಸು ನಾಐಇ ಸಹಾಯಕ್ಕೆ ಬಂದಿದೆ. ಕೋಪಗೊಂಡ ಆಕಳು ಕಿರುಕುಳ ನೀಡುತ್ತಿದ್ದ ವ್ಯಕ್ತಿ ಮೇಲೆ ಒಮ್ಮೆಲೇ ದಾಳಿ ಮಾಡಿ ತಲೆಯಿಂದ ಗುದ್ದಿದೆ. ಆತ ಕೆಳಕ್ಕೆ ಬಿದ್ದಿದ್ದಾನೆ.. ಆದರೂ ಬಿಡದೆ ಕೋಪದಿಂದ ತನ್ನ ಕೋಡಿನಿಂದ ನಾಐಇಗೆ ಹಿಂಸೆ ನೀಡಿದ ವ್ಯಕ್ತಿಗೆ ತಿವಿದಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದೆ.
ಈ ದೃಶ್ಯವನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕರ್ಮ ಎಂದು ಶೀರ್ಷಿಕೆ ನೀಡುವ ಮೂಲಕ ಅವರು ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement