ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ; ಮೊದಲ ಶ್ರೇಣಿ ಹಂಚಿಕೊಂಡ ಮೂವರು, ಅಭ್ಯರ್ಥಿಗಳ ನೋಂದಾಯಿತ ಇಮೇಲ್‌ಗೆ ಫಲಿತಾಂಶ

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿದೆ. ವೈದ್ಯಕೀಯ ಕೋರ್ಸ್​ಗೆ ಪ್ರವೇಶಕ್ಕಾಗಿ ನಡೆಯುವ ನೀಟ್​ ಪರೀಕ್ಷೆಯ ಫಲಿತಾಂಶ ಇಂದು (ನವೆಂಬರ್ 1) ಪ್ರಕಟವಾಗಿದೆ. ನೀಟ್ ಪದವಿ ಕೋರ್ಸ್​ ಫಲಿತಾಂಶ ಘೋಷಣೆಗೆ ಸುಪ್ರೀಂಕೋರ್ಟ್ ಈ ಮೊದಲು ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗ ಫಲಿತಾಂಶ ಪ್ರಕಟವಾಗಿದೆ.
ನೀಟ್‌ (NEET) ಫಲಿತಾಂಶವನ್ನು ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಇಮೇಲ್ ವಿಳಾಸಗಳಿಗೆ ಕಳುಹಿಸಲಾಗುತ್ತಿದೆ. ನೀಟ್‌ (NEET) ಸ್ಕೋರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳು ತಮ್ಮ ಇಮೇಲ್ ಐಡಿಗೆ ಲಾಗಿನ್ ಆಗಬೇಕು. ಎನ್‌ ಟಿಎ (NTA) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಟ್‌ ಸ್ಕೋರ್ ಕಾರ್ಡ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಎನ್‌ ಟಿಎ (NTA) ಹೇಳಿದೆ. ಅಭ್ಯರ್ಥಿಗಳು NTA, NEET ನ ಅಧಿಕೃತ ಸೈಟ್‌ನಲ್ಲಿ neet.nta.nic.in (NTA Website) ನಲ್ಲಿ ಫಲಿತಾಂಶ ಮತ್ತು ಫೈನಲ್ ಅನ್ಸರ್ ಕೀ ಎರಡನ್ನೂ ಪರಿಶೀಲಿಸಬಹುದು.
ತೆಲಂಗಾಣದ ಮೃಣಾಲ್ ಕುಟ್ಟೇರಿ, ದೆಹಲಿಯ ತನ್ಮಯ ಗುಪ್ತಾ ಹಾಗೂ ಮಹಾರಾಷ್ಟ್ರದ ಕಾರ್ತಿಕ್ ಜಿ. ನಾಯರ್​ ಅವರಿಗೆ ಟಾಪ್ ಶ್ರೇಣಿ ಲಭ್ಯವಾಗಿದೆ. ಈ ವರ್ಷವೂ ಉನ್ನತ ಶ್ರೇಣಿಯನ್ನು ಹೊಂದಿರುವವರು ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ವಾಸ್ತವವಾಗಿ ಮೊದಲ ಮೂರು ರ್ಯಾಂಕ್ ಹೊಂದಿರುವವರು 720 ರಲ್ಲಿ 720 ಅಂಕಗಳನ್ನು ಪಡೆದಿದ್ದಾರೆ. ಹೈದರಾಬಾದ್‌ನ ಮೃಣಾಲ್ ಕುಟ್ಟೇರಿ ಅವರು ಅಖಿಲ ಭಾರತ 1 ನೇ ಸ್ಥಾನವನ್ನು ಪಡೆದಿದ್ದಾರೆ, ನಂತರ ದೆಹಲಿಯ ತನ್ಮಯ್ ಗುಪ್ತಾ 2 ನೇ ಶ್ರೇಯಾಂಕವನ್ನು ಪಡೆದರು, ಮತ್ತು ಮುಂಬೈನ ಕಾರ್ತಿಕಾ ಜಿ ನಾಯರ್ ಭಾರತದಲ್ಲಿ 3ರಲ್ಲಿದ್ದಾರೆ. ಕಾರ್ತಿಕಾ ಮಹಿಳೆಯರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೂವರು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ವೇಳೆ ಟೈ ಬ್ರೇಕಿಂಗ್​ ಫಾರ್ಮುಲಾ ಬಳಸಿ ಶ್ರೇಣಿ ಹಂಚಿಕೆ ಮಾಡಲಾಗಿದೆ.
ನೀಟ್ ಯುಜಿಸಿ 2021 ಪರೀಕ್ಷೆಯಲ್ಲಿ ಒಟ್ಟು 15,44,275 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ 8,70,074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ವರ್ಷವೂ ಉನ್ನತ ಶ್ರೇಣಿಯನ್ನು ಹೊಂದಿರುವವರು ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ವಾಸ್ತವವಾಗಿ ಮೊದಲ ಮೂರು ರ್ಯಾಂಕ್ ಹೊಂದಿರುವವರು 720 ರಲ್ಲಿ 720 ಅಂಕಗಳನ್ನು ಪಡೆದಿದ್ದಾರೆ. ಹೈದರಾಬಾದ್‌ನ ಮೃಣಾಲ್ ಕುಟ್ಟೇರಿ ಅವರು ಅಖಿಲ ಭಾರತ 1 ನೇ ಸ್ಥಾನವನ್ನು ಪಡೆದಿದ್ದಾರೆ, ನಂತರ ದೆಹಲಿಯ ತನ್ಮಯ್ ಗುಪ್ತಾ 2 ನೇ ಶ್ರೇಯಾಂಕವನ್ನು ಪಡೆದರು, ಮತ್ತು ಮುಂಬೈನ ಕಾರ್ತಿಕಾ ಜಿ ನಾಯರ್ ಭಾರತದಲ್ಲಿ 3ರಲ್ಲಿದ್ದಾರೆ. ಕಾರ್ತಿಕಾ ಮಹಿಳೆಯರಲ್ಲಿ ಅಗ್ರಸ್ಥಾನದಲ್ಲಿದ್ದಾರೆ

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ನೀಟ್ ಫಲಿತಾಂಶವನ್ನು ಡೌನ್‌ಲೋಡ್ ಮಾಡುವುದು ಹೇಗೆ?

– ನೀಟ್ ಪರೀಕ್ಷೆ ಪರೀಕ್ಷಿಸಲು ಎನ್​ಟಿಎಯ ಅಧಿಕೃತ ವೆಬ್‌ಸೈಟ್ ntaneet.nic.in ಗೆ ಭೇಟಿ ನೀಡಿ.
– ವೆಬ್​ಸೈಟ್​ನ ಹೋಂ ಪೇಜ್​ನಲ್ಲಿ NEET ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
– ನಿಮ್ಮ ರಿಜಿಸ್ಟರ್ ಸಂಖ್ಯೆ ಮುಂತಾದ ವಿವರಗಳನ್ನು ನಮೂದಿಸಿ, ಲಾಗಿನ್ ಮಾಡಿ.
– ಆಗ ನಿಮ್ಮ ಫಲಿತಾಂಶ ಸ್ಕ್ರೀನ್ ಮೇಲೆ ಗೋಚರಿಸುತ್ತದೆ.
– ಅದನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement