ಪುನೀತ್​ ರಾಜಕುಮಾರ 2 ಕಣ್ಣುಗಳು 4 ಜನರಿಗೆ ಅವಳವಡಿಕೆ: ಹೇಗೆಂದು ವೈದ್ಯರಿಂದ ಮಾಹಿತಿ

ಬೆಂಗಳೂರು: ಬದುಕಿದ್ದಾಗ ಅನೇಕರಿಗೆ ಸಹಾಯ ಹಸ್ತ ಚಾಚಿದ್ದ ಪುನೀತ್​ ರಾಜ್​ಕುಮಾರ್​ ಸಾವಿನ ನಂತರವೂ ಅವರು ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ಅವರ ಎರಡು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಲಾಗಿದೆ.
ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಡಾ. ರಾಜ್​ಕುಮಾರ್ ಕೂಡ ಕಣ್ಣುಗಳನ್ನು ದಾನ ಮಾಡಿದ್ದರು. ಅವರ ಹಾದಿಯಲ್ಲಿಯೇ ಪುನೀತ್​ ಕೂಡ ನೇತ್ರದಾನ ಮಾಡಿದ್ದಾರೆ. ನಾಲ್ಕು ಜನರ ಬಾಳಿಗೆ ಬೆಳಕು ನೀಡಿದ್ದಾರೆ. ಎರಡು ಕಣ್ಣನ್ನು ನಾಲ್ಕು ಜನರಿಗೆ ಜೋಡಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಏಕಕಾಲಕ್ಕೆ ಒಬ್ಬರ ಕಣ್ಣನ್ನು ನಾಲ್ಕು ಮಂದಿಗೆ ಒಂದೇ ದಿನದಲ್ಲಿ ಜೋಡಿಸಿದ್ದು ಇದೇ ಮೊದಲು. ಇದನ್ನು ಸಾಧ್ಯವಾಗಿಸಿದ ನಮ್ಮ ವೈದ್ಯರ ತಂಡಕ್ಕೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.
‘ದಾನ ಮಾಡಲಾದ 2 ಕಣ್ಣುಗಳು ತುಂಬ ಆರೋಗ್ಯವಾಗಿದ್ದರೆ ಕಾರ್ನಿಯಾವನ್ನು ನಾವು ನಾಲ್ಕು ಭಾಗ ಮಾಡಬಹುದು. ಕಾರ್ನಿಯಾವನ್ನು ಒಂದು ಗ್ಲಾಸ್​ ಎಂದು ಊಹಿಸಿದರೆ ಅದರಲ್ಲಿ ಮುಂಭಾಗ ಮತ್ತು ಹಿಂಭಾಗ ಇರುತ್ತದೆ. ಮುಂಭಾಗದ ಕಾರ್ನಿಯಾ ತೊಂದರೆ ಇರುವವರಿಗೆ ದಾನ ಪಡೆದ ಕಣ್ಣಿನ ಮುಂಭಾಗವನ್ನು ಅಳವಡಿಸುತ್ತೇವೆ. ಹಿಂಭಾಗದ ತೊಂದರೆ ಇರುವವರಿಗೆ ಹಿಂಭಾಗದ ಕಾರ್ನಿಯಾವನ್ನು ಅಳವಡಿಸುತ್ತೇನೆ’ ಎಂದು ಡಾ. ಭುಜಂಗ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಮೊದಲೆಲ್ಲ ನಾವು ಪೂರ್ತಿ ಕಾರ್ನಿಯಾವನ್ನು ಬದಲಾಯಿಸುತ್ತಿದ್ದೆವು. ಆದರೆ ಈಗ ತಂತ್ರಜ್ಞಾನ ಮುಂದುವರಿದಿದೆ. ಕಣ್ಣುಗಳನ್ನು ಪದರದ ರೀತಿ ಭಾಗ ಮಾಡಲು ಸಾಧ್ಯ ಇರುವುದರಿಂದ ಎರಡು ಕಣ್ಣನ್ನು ನಾಲ್ಕು ಜನರಿಗೆ ಜೋಡಿಸಿದ್ದೇವೆ. ಕಣ್ಣುಗಳನ್ನು ದಾನ ಪಡೆದವರು ಯಾರು ಎಂಬುದನ್ನು ಬಹಿರಂಗಪಡಿಸುವಂತಿಲ್ಲ. ಆ ಕಾರಣಕ್ಕಾಗಿ ಪುನೀತ್‌ ಅವರ ಕಣ್ಣು ಪಡೆದವರು ಯಾರು ಎಂಬುದನ್ನು ಗೌಪ್ಯವಾಗಿಯೇ ಇಡಲಾಗಿದೆ. ಅಷ್ಟೇ ಅಲ್ಲ, ಕಣ್ಣು ಪಡೆದ ವ್ಯಕ್ತಿಗೂ ಕೂಡ ತಾವು ಪಡೆದಿರುವುದು ಪುನೀತ್​ ಅವರ ಕಣ್ಣು ಎಂಬುದು ಗೊತ್ತಾಗುವುದಿಲ್ಲ. ಕಾನೂನಿನ ಅನ್ವಯ ಆ ಮಾಹಿತಿಯನ್ನು ಗೌಪ್ಯವಾಗಿಯೇ ಇಡಲಾಗುತ್ತದೆ ಎಂದು ಅವರು ಹೇಳಿದರು. . ಒಟ್ಟಿನಲ್ಲಿ, ಪುನೀತ್​ ಅವರು ನಿಧನದ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ನಾಲ್ಕು ಜನರ ಬಾಳಿಗೆ ಬೆಳಕಾಗುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement