ನೀರಜ್, ಛೆಟ್ರಿ, ಮಿಥಾಲಿ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

ನವದೆಹಲಿ: ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ , ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಭಾರತದ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 12 ಕ್ರೀಡಾಪಟುಗಳನ್ನು ಈ ಬಾರಿಯ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನೀರಜ್ ಚೋಪ್ರಾ ಅವರನ್ನು ಅಥ್ಲೆಟಿಕ್ಸ್ ವಿಭಾಗದಿಂದ ಆಯ್ಕೆ ಮಾಡಲಾದರೆ, ರವಿಕುಮಾರ್ (ಕುಸ್ತಿ), ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್) ಮತ್ತು ಶ್ರೀಜೇಶ್ ಪಿಆರ್ (ಹಾಕಿ), ಸುನಿಲ್ ಛೆಟ್ರಿ (ಫುಟ್ಬಾಲ್), ಮಿಥಾಲಿ ರಾಜ್(ಕ್ರಿಕೆಟ್) ಪ್ರಮೋದ್ ಭಗತ್(ಬ್ಯಾಡ್ಮಿಂಟನ್), ಸುಮಿತ್ ಆಂಟಿಲ್(ಜಾವ್ಲಿನ್), ಅವನಿ ಲೇಖಾರಾ (ಶೂಟಿಂಗ್) ಹಾಗೂ ಬ್ಯಾಡ್ಮಿಂಟನ್ ವಿಭಾಗದಿಂದ ಕೃಷ್ಣ ನಗರ್ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನವೆಂಬರ್ 13 ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಆಯ್ಕೆಯಾದ ಕ್ರೀಡಾಪಟುಗಳ ಪಟ್ಟಿ ಹೀಗಿದೆ:
ನೀರಜ್ ಚೋಪ್ರಾ(ಅಥ್ಲೆಟಿಕ್ಸ್)
ರವಿ ದಹಿಯಾ(ಕುಸ್ತಿ)
ಪಿ.ಆರ್​ ಶ್ರೀಜೇಶ್(ಹಾಕಿ)
ಲೊವ್ಲಿನಾ ಬೊರ್ಗೊಹೈ(ಬಾಕ್ಸಿಂಗ್)
ಸುನಿಲ್ ಚೆಟ್ರಿ (ಫುಟ್ಬಾಲ್)
ಮಿಥಾಲಿ ರಾಜ್(ಕ್ರಿಕೆಟ್)
ಪ್ರಮೋದ್ ಭಗತ್(ಬ್ಯಾಡ್ಮಿಂಟನ್)
ಸುಮಿತ್ ಆಂಟಿಲ್(ಜಾವ್ಲಿನ್)
ಅವನಿ ಲೇಖರ(ಶೂಟಿಂಗ್)
ಕೃಷ್ಣ ನಗರ್(ಬ್ಯಾಡ್ಮಿಂಟನ್)
ನರ್ವಾಲ್(ಶೂಟಿಂಗ್)
ಮನ್‌ಪ್ರೀತ್‌ ಸಿಂಗ್‌(ಹಾಕಿ)

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ