ಬೇನಾಮಿ ಆಸ್ತಿ ಪ್ರಕರಣ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ ನಂಟಿರುವ 1000 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಆದಾಯ ತೆರಿಗೆ ಇಲಾಖೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಆಪ್ತ ಸಹಾಯಕರೊಂದಿಗೆ ನಂಟು ಹೊಂದಿರುವ ಮಹಾರಾಷ್ಟ್ರ, ಗೋವಾ ಮತ್ತು ದೆಹಲಿಯಲ್ಲಿ ಆದಾಯ ತೆರಿಗೆ ಇಲಾಖೆಯು 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ ಇಂಡಿಯಾ ಟುಡೆ ವರದಿ ಮಾಡಿದೆ.
ವರದಿ ಪ್ರಕಾರ, ಆದಾಯ ತೆರಿಗೆ ಇಲಾಖೆಯ ಬೇನಾಮಿ ವಿಭಾಗವು ತಾತ್ಕಾಲಿಕ ಅಟ್ಯಾಚ್‌ಮೆಂಟ್ ಆದೇಶವನ್ನು ಹೊರಡಿಸಿದ್ದು, ಇದು ಮೂಲಗಳ ಪ್ರಕಾರ, ನಡೆಯುತ್ತಿರುವ ತನಿಖೆಯ ಭಾಗವಾಗಿದೆ.
ಮಹಾರಾಷ್ಟ್ರದ ಸತಾರಾದಲ್ಲಿರುವ ಜರಂದೇಶ್ವರ ಸಕ್ಕರೆ ಕಾರ್ಖಾನೆ, ಮುಂಬೈನ ಅಧಿಕೃತ ಸ್ಥಳ, ದೆಹಲಿಯ ಫ್ಲ್ಯಾಟ್, ಗೋವಾದಲ್ಲಿ ರೆಸಾರ್ಟ್ ಮತ್ತು ಮಹಾರಾಷ್ಟ್ರದ 27 ವಿವಿಧ ಸ್ಥಳಗಳಲ್ಲಿನ ಲ್ಯಾಂಡ್‌ ಪಾರ್ಸೆಲ್‌ಗಳು ಜಪ್ತಿ ಮಾಡಿರುವ ಆಸ್ತಿಗಳಲ್ಲಿ ಸೇರಿವೆ.
ಈ ಆಸ್ತಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವು ಸರಿಸುಮಾರು 1000 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.
ಈ ಯಾವುದೇ ಆಸ್ತಿ ಅಜಿತ್ ಪವಾರ್ ಅವರ ನೇರ ಒಡೆತನದಲ್ಲಿಲ್ಲ ಎಂದು ವರದಿ ತಿಳಿಸಿದೆ.
ಕಳೆದ ತಿಂಗಳು, ಆದಾಯ ತೆರಿಗೆ ಇಲಾಖೆಯು ಮುಂಬೈನಲ್ಲಿ ಎರಡು ರಿಯಲ್ ಎಸ್ಟೇಟ್ ವ್ಯವಹಾರ ಗುಂಪುಗಳು ಮತ್ತು ಅಜಿತ್ ಪವಾರ್ ಅವರ ಸಂಬಂಧಿಕರೊಂದಿಗೆ ಸಂಬಂಧ ಹೊಂದಿರುವ ಕೆಲವು ಸಂಸ್ಥೆಗಳ ಮೇಲೆ ದಾಳಿ ನಡೆಸಿದ ನಂತರ 184 ಕೋಟಿ ರೂ.ಗಳನ್ನು ವಶಕ್ಕೆ ತೆಗೆದುಕೊಂಡಿತ್ತು.
ಐಟಿ ಇಲಾಖೆಯು ಮುಂಬೈನ ಎರಡು ರಿಯಲ್ ಎಸ್ಟೇಟ್ ವ್ಯವಹಾರ ಗುಂಪುಗಳಾದ ಡಿಬಿ ರಿಯಾಲ್ಟಿ ಮತ್ತು ಶಿವಾಲಿಕ್ ಗ್ರೂಪ್ ಮತ್ತು ಅಜಿತ್ ಪವಾರ್ ಅವರ ಪುತ್ರ ಮತ್ತು ಸಹೋದರಿಯರೊಂದಿಗೆ ಸಂಬಂಧ ಹೊಂದಿರುವ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು.
ಅಕ್ಟೋಬರ್ 7 ರಂದು ಶೋಧ ಕಾರ್ಯಾಚರಣೆ ಪ್ರಾರಂಭವಾಯಿತು ಮತ್ತು ಮುಂಬೈ, ಪುಣೆ, ಬಾರಾಮತಿ, ಗೋವಾ ಮತ್ತು ಜೈಪುರದಲ್ಲಿ ಹರಡಿರುವ ಸುಮಾರು 70 ಕಡೆ ನಡೆಸಲಾಯಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement