ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ವಿರುದ್ಧ ಎಫ್‌ಐಆರ್ ಕೋರಿ ದೆಹಲಿ ಸೈಬರ್ ಕ್ರೈಂ ವಿಭಾಗಕ್ಕೆ ನೋಟಿಸ್ ಜಾರಿ ಮಾಡಿದ ದೆಹಲಿ ಡಿಸಿಡಬ್ಲ್ಯು

ನವದೆಹಲಿ: ಭಾರತ-ಪಾಕಿಸ್ತಾನ ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರ 9 ತಿಂಗಳ ಮಗಳಿಗೆ ಆನ್‌ಲೈನಿನಲ್ಲಿ ಅತ್ಯಾಚಾರ ಬೆದರಿಕೆಗಳ ವರದಿಗಳ ಕುರಿತು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಈ ಸಂಬಂಧ ವಿದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಮಂಗಳವಾರ ದೆಹಲಿ ಪೊಲೀಸ್‌ ಸೈಬರ್ ಕ್ರೈಂ ವಿಭಾಗಕ್ಕೆ ನೋಟಿಸ್ ಜಾರಿ ಮಾಡಿದೆ.
ಎಫ್‌ಐಆರ್‌ನ ಪ್ರತಿ, ಆರೋಪಿಗಳನ್ನು ಗುರುತಿಸಿ ಬಂಧಿಸಿದ ವಿವರಗಳು ಮತ್ತು ನವೆಂಬರ್ 8 ರೊಳಗೆ ಕ್ರಮ ಕೈಗೊಂಡ ವಿವರವಾದ ವರದಿಯನ್ನು ನೀಡುವಂತೆ ಡಿಸಿಡಬ್ಲ್ಯು ದೆಹಲಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅವರಿಗೆ ನೋಟಿಸ್‌ ನೀಡಿದೆ.
ದುಬೈನಲ್ಲಿ ಭಾರತೀಯ ಕ್ರಿಕೆಟ್ ತಂಡದ ಸೋಲಿನ ನಂತರ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮಗಳಿಗೆ ಆನ್‌ಲೈನ್ ಟ್ರೋಲ್ ಬೆದರಿಕೆ ಹಾಕಲಾಗಿದೆ.
ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ನಾಚಿಕೆಗೇಡಿನ ಕೃತ್ಯವನ್ನು ಖಂಡಿಸಿದ್ದಾರೆ ಹಾಗೂ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ಇದು ನಮ್ಮ ತಂಡದ ಹಿಂದೆ ನಿಲ್ಲುವ ಸಮಯ, ಅವರ ವಿರುದ್ಧ ಅಲ್ಲ. ಭಾರತವು ಪಾಕಿಸ್ತಾನಕ್ಕೆ ಸೋತರೂ ಆಟಗಾರರು ಮತ್ತು ಅವರ ಕುಟುಂಬಗಳು ದ್ವೇಷಕ್ಕೆ ಅರ್ಹರಲ್ಲ ವಿರಾಟ್ ಕೊಹ್ಲಿಯ 9 ತಿಂಗಳ ಹೆಣ್ಣು ಮಗುವಿಗೆ ಆನ್‌ಲೈನ್ ಅತ್ಯಾಚಾರದ ಬೆದರಿಕೆಗಳು ಬರುತ್ತಿರುವುದನ್ನು ಗಮನಿಸಲು ನಾನು ತುಂಬಾ ಅಸಹ್ಯಪಡುತ್ತೇನೆ! ಈ ವಿಷಯದಲ್ಲಿ ತಕ್ಷಣದ ಎಫ್‌ಐಆರ್‌ ನೋಂದಣಿ ಮತ್ತು ಬಂಧನಗಳನ್ನು ನಾನು ನಿರೀಕ್ಷಿಸುತ್ತೇನೆ. ಇಂಥವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಬರೆದಿದ್ದಾರೆ.
ಅಕ್ಟೋಬರ್ 24 ರಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಸೋತ ನಂತರ, ಆನ್‌ಲೈನ್ ಟ್ರೋಲ್‌ಗಳು ಬೌಲರ್ ಮೊಹಮ್ಮದ್ ಶಮಿಗೆ ಬೆದರಿಕೆ ಮತ್ತು ನಿಂದನೆಯನ್ನು ಪ್ರಾರಂಭಿಸಿದವು.
ಆದಾಗ್ಯೂ, ಕೊಹ್ಲಿ ಬಹಿರಂಗವಾಗಿ ಶಮಿಯನ್ನು ಬೆಂಬಲಿಸಿದರು ಮತ್ತು ಅವರ ತಂಡದ ಸದಸ್ಯರ ವಿರುದ್ಧ ಧಾರ್ಮಿಕ ತಾರತಮ್ಯ ಮತ್ತು ಪಕ್ಷಪಾತದ ಟ್ರೋಲ್‌ಗಳನ್ನು ಖಂಡಿಸಿದರು. ಶಮಿಯನ್ನು ಬೆಂಬಲಿಸಿ ಕೊಹ್ಲಿ ನೀಡಿದ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಟ್ರೋಲ್‌ಗಳು ಭಾರತೀಯ ನಾಯಕನನ್ನು ಕಟುವಾಗಿ ಟ್ರೋಲ್ ಮಾಡಿದ್ದಾರೆ ಮತ್ತು ಅವರ 9 ತಿಂಗಳ ಮಗಳನ್ನು ಅತ್ಯಾಚಾರ ಬೆದರಿಕೆಗಳನ್ನು ಹಾಕಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement