ಡಿಯರ್‌ ಮೋದಿ, ನೀವು ಇಸ್ರೇಲ್ʼನಲ್ಲಿ ಜನಪ್ರಿಯ ವ್ಯಕ್ತಿ.. ನಮ್ಮ ಪಕ್ಷಕ್ಕೆ ಬನ್ನಿ ಪ್ಲೀಸ್..: ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಇಸ್ರೇಲ್ ಪ್ರಧಾನಿ…!: ವೀಕ್ಷಿಸಿ

ಗ್ಲಾಸ್ಗೊ: ಗ್ಲಾಸ್ಗೋದಲ್ಲಿ ನಡೆದ ಕೋಪ್‌ 26 ಶೃಂಗಸಭೆ(COP26 summit)ಯ ನೇಪಥ್ಯದಲ್ಲಿ ಮಂಗಳವಾರ (ನವೆಂಬರ್ 2) ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್( Naftali Bennett) ಅವರನ್ನ ಭೇಟಿ ಮಾಡಿದರು.
ಮೋದಿ ಮತ್ತು ಬೆನೆಟ್ ನಡುವಿನ ಭೇಟಿ ಬಹಳ ಸೌಹಾರ್ಯುತವಾಗಿತ್ತು ಎಂದು ಹೇಳಿರುವ ಪ್ರಧಾನಿ ಕಚೇರಿ (PMO) ಪೋಟೋಗಳನ್ನ ಟ್ವಿಟರ್ʼನಲ್ಲಿ ಹಂಚಿಕೊಂಡಿದೆ. ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು “ಫಲಪ್ರದ ಸಭೆ” ನಡೆಸಿದರು ಎಂದು ಪಿಎಂಒ ಹೇಳಿದೆ. ಈ ಸಭೆಯಲ್ಲಿ, ಬೆನೆಟ್ ಅವರು ನೀವು ನಮ್ಮ ಇಸ್ರೇಲಿನಲ್ಲಿ ಬಹಳ ಜನಪ್ರಿಯರಾಗಿದ್ದೀರಿ. ಹೀಗಾಗಿ ನೀವು ಇಸ್ರೇಲಿಗೆ ಬಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿ ಎಂದು ಪ್ರಧಾನಿ ಮೋದಿ ಅವರನ್ನು ಆಹ್ವಾನ ಮಾಡಿ ಆತ್ಮೀಯವಾಗಿ ಮಾತನಾಡಿದರು ಎಂದು ಪಿಎಂಒ ಹೇಳಿದೆ.

ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ನಡುವೆ ಸಹಜ ಮಾತುಕತೆಗಳನ್ನ ಹಂಚಿಕೊಂಡಿದ್ದು, ಇಸ್ರೇಲ್ ಪ್ರಧಾನಿ, “ನೀವು ಇಸ್ರೇಲ್ʼನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ” ಎಂದರು. ಇದಕ್ಕೆ ಪ್ರಧಾನಿ ಮೋದಿ “ಧನ್ಯವಾದಗಳು” ಎಂದು ಹೇಳಿದರು. ನಂತ್ರ ಬೆನೆಟ್ ಅವರು ಪ್ರಧಾನಿ ಮೋದಿ ಅವರಿಗೆ “ಬನ್ನಿ, ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ” ಎಂದು ಆಹ್ವಾನ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಪ್ರಧಾನಿ ಮೋದಿ, ಜೋರಾಗಿ ನಕ್ಕಿದ್ದಾರೆ.
ಎರಡೂ ದೇಶಗಳ ಜನರ ಅನುಕೂಲಕ್ಕಾಗಿ ಮೋದಿ ಮತ್ತು ಬೆನೆಟ್ ಅವರು “ಸಹಕಾರದ ವಿವಿಧ ಮಾರ್ಗಗಳ ಬಗ್ಗೆ ಸಂಬಂಧ ಗಟ್ಟಿಗೊಳಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ʼನಲ್ಲಿ ತಿಳಿಸಿದೆ. ಉನ್ನತ ತಂತ್ರಜ್ಞಾನ ಮತ್ತು ನಾವಿನ್ಯತೆಯ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಇನ್ನು ಈ ಸಭೆಯಲ್ಲಿ ಪ್ರಧಾನಮಂತ್ರಿಯವರು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಬೆನೆಟ್ ಅವರಿಗೆ ಆಹ್ವಾನ ನೀಡಿದ್ದಾರೆ.
ನನ್ನ ಹಿಂದಿನವರ ಜೊತೆ ನೀವು ಇರಿಸಿರುವ ಅದ್ಭುತ ಸಂಬಂಧವನ್ನು ಮುಂದುವರಿಸುವುದು ಮತ್ತು ಅದನ್ನು ಹೊಸ ಮಟ್ಟಕ್ಕೆ ತರುವುದು ನಮ್ಮ ಗುರಿಯಾಗಿದೆ, ಆದ್ದರಿಂದ ನಾವೀನ್ಯತೆ, ತಂತ್ರಜ್ಞಾನ, ಬಾಹ್ಯಾಕಾಶ, ಭದ್ರತೆ, ಕೃಷಿ, ಆಹಾರ ತಂತ್ರಜ್ಞಾನಗಳು ಮತ್ತು ಹವಾಮಾನ ಸಂಬಂಧಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಜವಾಗಿ ನಮ್ಮ ಎರಡು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದನ್ನು ನಾವು ಖಚಿತಪಡಿಸಿಕೊಳ್ಳಬಹುದು ಎಂದು ಬೆನೆಟ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement