ಡೆಂಗ್ಯೂ ಪ್ರಕರಣಗಳ ಹೆಚ್ಚಳ: 9 ರಾಜ್ಯಗಳಿಗೆ ಕೇಂದ್ರದಿಂದ ತಜ್ಞರ ತಂಡ ನಿಯೋಜನೆ

ನವದೆಹಲಿ :ಡೆಂಗ್ಯೂ ಪ್ರಕರಣಗಳು ಹಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವುದರಿಂದ ಡೆಂಗ್ಯೂ ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಈಗ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ತಜ್ಞರ ತಂಡಗಳನ್ನು ನಿಯೋಜಿಸಿದೆ.
ಈ 9 ರಾಜ್ಯಗಳಲ್ಲಿ ಅಕ್ಟೋಬರ್ 31ರ ವರೆಗೆ ದೇಶದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ 86% ರಷ್ಟು ವರದಿಯಾಗಿವೆ. ದೆಹಲಿಯಲ್ಲಿ ಡೆಂಗ್ಯೂ ಪರಿಸ್ಥಿತಿಯ ಅವಲೋಕನದ ಸಂದರ್ಭದಲ್ಲಿ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಸೂಚಿಸಿದ್ದು, ಹೆಚ್ಚಿನ ಸಕ್ರಿಯ ಡೆಂಗ್ಯೂ ಪ್ರಕರಣಗಳಿರುವ ರಾಜ್ಯಗಳಿಗೆ ತಜ್ಞರ ತಂಡಗಳನ್ನು ಗುರುತಿಸಿ ಕಳುಹಿಸಲು ಸೂಚಿಸಿದ ನಂತರ ತಜ್ಞರ ತಂಡ ನಿಯೋಜಿಸಲಾಗಿದೆ.
ದೆಹಲಿ, ಉತ್ತರ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಹರಿಯಾಣ, ಪಂಜಾಬ್, ಕೇರಳ, ರಾಜಸ್ಥಾನ, ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲಿ ಅಧಿಕ ಸಂಖ್ಯೆಯ ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಹೀಗಾಗಿ ಕೇಂದ್ರ ತಜ್ಞರ ತಂಡ ಈ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಸಾರ್ವಜನಿಕ ಆರೋಗ್ಯ ಕ್ರಮಗಳು, ಡೆಂಗ್ಯೂಗೆ ಕಾರಣವಾದ ಅಂಶಗಳ ಬಗ್ಗೆ ತಿಳಿದುಕೊಂಡುಅದರ ನಿಯಂತ್ರಣಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡಲಿದೆ.
ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ನ್ಯಾಷನಲ್ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂ ಅಧಿಕಾರಿಗಳು ತಜ್ಞರ ತಂಡಗಳ ಭಾಗವಾಗಿದ್ದಾರೆ. ಡೆಂಗ್ಯೂ ಹರಡುವಿಕೆಯನ್ನು ನಿಯಂತ್ರಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳು ಸೇರಿದಂತೆ ತಾಂತ್ರಿಕ ಮಾರ್ಗದರ್ಶನವನ್ನು ನೀಡುವ ಮೂಲಕ ರಾಜ್ಯ ಸರ್ಕಾರಗಳಿಗೆ ಸಹಕರಿಸಲು ಕೇಂದ್ರ ನಿರ್ಧರಿಸಿದ ನಂತರ ಈ ಕ್ರಮ ಬಂದಿದೆ.
ವೆಕ್ಟರ್ ನಿಯಂತ್ರಣದ ಸ್ಥಿತಿ, ಕಿಟ್‌ಗಳು ಮತ್ತು ಔಷಧಿಗಳ ಲಭ್ಯತೆ, ಆರಂಭಿಕ ಪತ್ತೆ ಕುರಿತು ವರದಿ ಮಾಡಲು ತಂಡಗಳಗೆ ಸೂಚಿಸಲಾಗಿದೆ. ಕೀಟನಾಶಕಗಳ ಲಭ್ಯತೆ ಮತ್ತು ಬಳಕೆ, ಲಾರ್ವಾ- ವಿರೋಧಿ ಮತ್ತು ವಯಸ್ಕ ವಾಹಕಗಳ ನಿಯಂತ್ರಣ ಕ್ರಮಗಳ ಸ್ಥಿತಿ ಇತ್ಯಾದಿಗಳ ಬಗ್ಗೆ ಅವರು ತಮ್ಮ ಅವಲೋಕನಗಳ ಬಗ್ಗೆ ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ತಿಳಿಸುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement