ನವೆಂಬರ್ 8 ರಿಂದ ಭಾರತದ ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಅಮೆರಿಕ ಪ್ರವೇಶಕ್ಕೆ ಅನುಮತಿ

ನವದೆಹಲಿ: ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ ಕೋವಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತುರ್ತು ಬಳಕೆ ಅನುಮೋದನೆ ನೀಡಿದ ಒಂದು ದಿನದ ನಂತರ, ನವೆಂಬರ್ 8 ರಿಂದ ಕೋವಾಕ್ಸಿನ್ ಲಸಿಕೆ ಪಡೆದವರಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ
ಇದು ಎಫ್‌ ಡಿಎ ಅನುಮೋದಿತ ಅಥವಾ ಅಧಿಕೃತ ಮತ್ತು ಡಬ್ಲ್ಯುಎಚ್‌ಒ (WHO) ತುರ್ತು ಬಳಕೆಯ ಪಟ್ಟಿ ಲಸಿಕೆಗಳಿಗೆ ಅನ್ವಯಿಸುತ್ತದೆ.
ಅಮೆರಿಕ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಅಥವಾ ಡಬ್ಲ್ಯುಎಚ್‌ಒ ತುರ್ತು ಬಳಕೆಗಾಗಿ ಅನುಮೋದಿಸಲಾದ ಲಸಿಕೆಯನ್ನು ಸ್ವೀಕರಿಸಿದ ವಿದೇಶಿ ಪ್ರಯಾಣಿಕರಿಗೆ ಅಮೆರಿಕ ತನ್ನ ಹೊಸ ಪ್ರಯಾಣ ವ್ಯವಸ್ಥೆಯನ್ನು ಪ್ರಾರಂಭಿಸುವ ಒಂದು ವಾರದ ಮೊದಲು ಕೊನೆಯ ನಿಮಿಷದ ಸೇರ್ಪಡೆ ಮಾಡಲಾಗಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಭಾರತದ ಸ್ಥಳೀಯ ಲಸಿಕೆ ಕೋವಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತುರ್ತು ಬಳಕೆಯ ಅನುಮೋದನೆ (ಇಯುಎಲ್) ನೀಡಿರುವುದನ್ನು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಬುಧವಾರ ಒಪ್ಪಿಕೊಂಡಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ನ ಕೋವಿಡ್‌-19 ಲಸಿಕೆ ವಿರುದ್ಧ ರಕ್ಷಣೆಗಾಗಿ ಡಬ್ಲ್ಯುಎಚ್‌ಒ ಮಾನದಂಡಗಳನ್ನು ಪೂರೈಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಾಂತ್ರಿಕ ಸಲಹಾ ಸಮಿತಿ ನಿರ್ಧರಿಸಿದೆ ಎಂದು ಡಬ್ಲ್ಯುಎಚ್‌ಒ ಟ್ವೀಟ್‌ನಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement