ವ್ಯಾಟ್ ದರ ಇಳಿಕೆ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ : ಕಡಿಮೆಯಾಗಲಿದೆ ಪೆಟ್ರೋಲ್‌ ದರ 13.30 ರೂ, ಡೀಸೆಲ್ ದರ 19.47 ರೂ.

ಬೆಂಗಳೂರು:  ಕರ್ನಾಟಕ ಸರ್ಕಾರವು ಪೆಟ್ರೋಲ್ ಮತ್ತು ಪೆಟ್ರೋಲ್ ದರವನ್ನು 7 ರೂ.ಗಳಷ್ಟು ಕಡಿಮೆ ಮಾಡುವ ಅಧಿಸೂಚನೆ ಹೊರಡಿಸಿದೆ.
ಅದೇ ರೀತಿ ಸರ್ಕಾರವು ಕ್ರಮವಾಗಿ‌ ಪೆಟ್ರೋಲ್‌ ಹಾಗೂ ಡೀಸೆಲ್‌ಗೆ ಕ್ರಮವಾಗಿ 5 ಮತ್ತು 10 ರೂ.ಗಳನ್ನು ಕಡಿಮೆ ಮಾಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿಮೆ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು,
ಪೆಟ್ರೋಲ್ 113.93 ರೂ.ಗಳಿದ್ದಿದ್ದು 100.63 ಕ್ಕೆ ಇಳಿಕೆಯಾಗಿದೆ. ಅಂದರೆ 13.30 ರೂ.ಗಳಷ್ಟು ಕಡಿತವಾಗಿದೆ. ಡೀಸೆಲ್ ಬೆಲೆ 104.50 ರೂ.ಗಳು ಇದ್ದಿದ್ದು 85.03 ರೂ.ಗಳಿಗೆ ಇಳಿಕೆಯಾಗಿದೆ.ಅಂದರೆ 19.47 ರೂ. ಕಡಿತವಾಗಿದೆ. ಎಂದು ಸರ್ಕಾರ ತಿಳಿಸಿದೆ.
ಇಂದಿನ (ಗುರುವಾರದ) ಅಧಿಸೂಚನೆಯಿಂದಾಗಿ ಪೆಟ್ರೋಲ್ ಮೇಲಿನ KST ಯ ಕರ್ನಾಟಕದ ಪಾಲು 35% ರಿಂದ 25.9% ಕ್ಕೆ ಮತ್ತು ಡೀಸೆಲ್ ಮೇಲೆ 24% ರಿಂದ 14.34% ಕ್ಕೆ ಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement