ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಒಂದು ವಾರ ಕಳೆದಿದೆ. ಆದರೆ ಕಲಾವಿದರ ಕಣ್ಣಲ್ಲಿ, ಕೈಗಳಲ್ಲಿ ಅಪ್ಪು ಇನ್ನೂ ಜೀವಂತವಾಗಿದ್ದಾರೆ. ಈಗ ಕಲಾವಿದ ಕರಣ ಆಚಾರ್ಯ ಬಿಡಿಸಿದ ಚಿತ್ರಗಳು ಈಗ ಅಪ್ಪು ಅಭಿಮಾನಿಗಳನ್ನು ಸೆಳೆದಿದೆ.
ಇಹಲೋಕ ತ್ಯಜಿಸಿರುವ ಅಪ್ಪು ತಮ್ಮ ತಂದೆ ಡಾ.ರಾಜಕುಮಾರ ಹಾಗೂ ತಾಯಿ ಪಾರ್ವತಮ್ಮ ಅವರೊಂದಿಗೆ ಸ್ವರ್ಗದಲ್ಲಿ ಸುಂದರವಾಗಿ ಸಮಯ ಕಳೆಯುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರನಟ ಡಾ. ರಾಜ್ ಕುಮಾರ್ಅವರಂತೆಯೇ ಪುನೀತ್ ಕೂಡ ಚಂದನವನದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಸ್ವರ್ಗದಲ್ಲಿ ಪುನೀತ್ ತಂದೆಯೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಕನ್ನಡ ಸಿನಿಮಾರಂಗದಲ್ಲಿ ಪೋಸ್ಟರ್ ಡಿಸೈನರ್ ಆಗಿರುವ ಕರಣ್ ಆಚಾರ್ಯ ಅವರು, ಸ್ವರ್ಗದಲ್ಲಿ ಪುನೀತ್, ಅಪ್ಪಾಜಿ ಅವರ ಕಣ್ಣನ್ನು ಹಿಂದಿನಿಂದ ಮುಚ್ಚಿ, ನಾನು ಯಾರು ಎಂದು ಕೇಳುತ್ತಿರುವಂತೆ ಕಲ್ಪಿಸಿಕೊಂಡು ಚಿತ್ರಬಿಡಿಸಿದ್ದಕ್ಕೆ ಈಗ ಭಾರೀ ಪ್ರಶಂಸೆ ವ್ಯಕ್ತವಾಗಿದೆ.ವಿಶೇಷವೆಂದರೆ ಈ ಫೋಟೋದಲ್ಲಿ ಪುನೀತ್ ಅವರ ಹೆಗಲ ಮೇಲೆ ಪರಿವಾಳ ಕುಳಿತುಕೊಂಡಿರುವುದನ್ನು ಕಾಣಬಹುದುದಾಗಿದೆ. ಈ ಮುನ್ನ ಪುನೀತ್ ಅಭಿನಯಿಸಿದ್ದ ರಾಜಕುಮಾರ ಸಿನಿಮಾದ ವೇಳೆ ಕೂಡ ಪುನೀತ್ ಹೆಗಲ ಮೇಲೆ ಪರಿವಾಳ ಕೂರಿಸಿ ಫೋಟೋ ಶೂಟ್ ಮಾಡಿಸಲಾಗಿತ್ತು. ಡಾ. ರಾಜ್ ಕುಮಾರ್ ಅವರು ಅಭಿನಯಿಸಿರುವ ಸೂಪರ್ ಹಿಟ್ ಸಿನಿಮಾ ಕಸ್ತೂರಿ ನಿವಾಸದಲ್ಲಿ ಡಾ.ರಾಜ್ ಕುಮಾರ್ ಜೊತೆ ಪಾರಿವಾಳಕ್ಕೂ ನಿರ್ದೇಶಕರು ಮಹತ್ವ ನೀಡಿದ್ದರು.
ಈ ಫಟೋ ಜೊತೆ ಕರಣ ಆಚಾರ್ಯ ಅವರು ಸ್ವರ್ಗದ ಬಾಗಿಲು ತೆರೆದು ಅಪ್ಪುವನ್ನು ಅಪ್ಪಾಜಿ ಅವರು ಸ್ವಾಗತಿಸುತ್ತಿರುವ ರೀತಿಯ ಫೋಟೋ ಹಾಗೂ ಸ್ವರ್ಗಕ್ಕೆ ಬಂದ ಮಗನನ್ನು ಪ್ರೀತಿಯಿಂದ ಚುಂಬಿಸಿ ಅಪ್ಪಾಜಿ ಹಾಗೂ ಪಾರ್ವತಮ್ಮನವರು ಸ್ವಾಗತಿಸುತ್ತಿರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಕಲಾವಿದನ ಕಲ್ಪನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ