ಬೈಕ್​ನಲ್ಲಿ ತೆರಳುತ್ತಿದ್ದಾಗ ಸ್ಫೋಟಗೊಂಡ ಪಟಾಕಿ: ಅಪ್ಪ-ಮಗನ ದೇಹಗಳು ಛಿದ್ರ…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪುದುಚೇರಿ: ಪುಚೇರಿ ಸಮೀಪ ದೀಪಾವಳಿಯಂದು ನಡೆದ ಭೀಕರ ಘಟನೆಯಲ್ಲಿ ಗುರುವಾರ ಪಟಾಕಿ ತುಂಬಿದ್ದ ಸ್ಕೂಟರ್ ಸ್ಫೋಟಗೊಂಡಿದ್ದರಿಂದ ಒಬ್ಬ ವ್ಯಕ್ತಿ ಮತ್ತು ಆತನ ಏಳು ವರ್ಷದ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದು ತಮಿಳುನಾಡಿನ ಕೊಟ್ಟಕುಪ್ಪಂ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಲೈನೇಸನ್ ಮತ್ತು ಅವರ ಮಗ ಪ್ರದೀಪ್ ಕೂನಿಮೇಡು ಗ್ರಾಮಕ್ಕೆ ಸ್ಕೂಟರಿನಲ್ಲಿ ಪಟಾಕಿ ತೆಗೆದುಕೊಂಡು ಪ್ರಯಾಣಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ.

ಸ್ಫೋಟದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಕಲೈನೇಸನ್ ಪಟಾಕಿ ಚೀಲವನ್ನು ಹಿಡಿದುಕೊಂಡು ತನ್ನ ಸ್ಕೂಟರ್ ಅನ್ನು ಓಡಿಸುತ್ತಿರುವುದನ್ನು ಕಾಣಬಹುದು. ನಂತರ ವಾಹನ ಸ್ಫೋಟಗೊಂಡು ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸ್ಫೋಟದಿಂದ ಅಪ್ಪ ಹಾಗೂ ಮಗನ ದೇಹಗಳು ಛಿದ್ರಗೊಂಡಿವೆ ಎಂದು ವರದಿಯಾಗಿದೆ,

ಈ ಘಟನೆಯಲ್ಲಿ ಇತರ ಮೂವರು ಕೂಡ ಗಾಯಗೊಂಡಿದ್ದಾರೆ. ಅವರಿಗೆ ಪುದುಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಲ್ಲುಪುರಂ ಪೊಲೀಸ್ ಸೂಪರಿಂಟೆಂಡೆಂಟ್ ಎನ್ ಶ್ರೀನಾಥ ಅವರು ಕಲೈನೇಸನ್ ಅವರು ಖರೀದಿಸಿದ ಪಟಾಕಿಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಕಲೈನೇಸನ್ ಅವರು ನವೆಂಬರ್ 3 ರಂದು ಪುದುಚೇರಿಯಿಂದ “ನಾಟ್ಟು ಪಟ್ಟಾಸು” ಎಂಬ ವೈವಿಧ್ಯಮಯ ಪಟಾಕಿಗಳ ಎರಡು ಚೀಲಗಳನ್ನು ಖರೀದಿಸಿದ್ದಾರೆ ಮತ್ತು ಅದನ್ನು ಅವರ ಅತ್ತೆಯ ಮನೆಯಲ್ಲಿ ಇರಿಸಿದ್ದರು ಎಂದು ಶ್ರೀನಾಥ ಹೇಳಿದರು.ಅವರು ಕೂನಿಮೇಡು ಗ್ರಾಮದಿಂದ ಪಟಾಕಿ ಚೀಲವನ್ನು ತೆಗೆದುಕೊಂಡು ಪುದುಚೇರಿ ಕಡೆಗೆ ಹೋಗುತ್ತಿದ್ದರು. ಪಾಟಿಕಿ ಚೀಲವನ್ನು ಸ್ಕೂಟರಿಗೆ ನೇತುಹಾಕಿದ್ದರು.  ಹೀಗಾಗಿ ಘರಷ್ಣೆಯಿಂದ ಉಂಟಾದ ಶಾಖದಿಂದಾಗಿ ಪಟಾಕಿಗಳು ಸ್ಫೋಟಗೊಂಡಿರಬಹುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೂನಿಮೇಡು ಗ್ರಾಮದಲ್ಲಿ ಪೊಲೀಸರು ಗೋಣಿ ಚೀಲವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement