ಬೀಜಿಂಗ್: 2020 ರ ಮಾರ್ಚ್‌ನಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲ ಕೇಂದ್ರಬಿಂದುವಾಗಿರುವ ವುಹಾನ್‌ಗೆ ಕಳುಹಿಸಲಾದ ಸಾರ್ವಜನಿಕ ಭದ್ರತೆಯ ಮಾಜಿ ಪ್ರಬಲ ಉಪ ಮಂತ್ರಿಯನ್ನು ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ರಾಜ್ಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ಮಧ್ಯ ಚೀನಾದ ನಗರದಲ್ಲಿ ಕೋವಿಡ್ -19 ಏಕಾಏಕಿ ಕಳೆದ ವರ್ಷ ವುಹಾನ್‌ಗೆ ಕಳುಹಿಸಲಾದ ಉನ್ನತ ಅಧಿಕಾರಿಗಳ ಗುಂಪಿನ ಭಾಗವಾಗಿದ್ದ ಸನ್ ಲಿಜುನ್ ಅವರನ್ನು ಸೆಪ್ಟೆಂಬರ್‌ನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಯಿಂದ ಹೊರಹಾಕಲಾಯಿತು.
ಈಗ ಕೊವಿಡ್ ನಿರ್ವಹಣೆಗಾಗಿ ಚೀನಾ ಸರ್ಕಾರವು ವುಹಾನ್ ನಗರಕ್ಕೆ ರವಾನಿಸಿದ್ದ ಅಧಿಕಾರಿಗಳ ತಂಡದಲ್ಲಿ ಸುನ್ ಲಿಜುನ್ ಸಹ ಇದ್ದರು. ಕೊವಿಡ್ ನಿರ್ವಹಣೆ ವೇಳೆ ಮಾಡಿದ ತಪ್ಪುಗಳಿಗಾಗಿ ಅವರನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈಗ ಅವರನ್ನು ಲಂಚ ಪಡೆದ ಆರೋಕ್ಕಾಗಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
2017ರಲ್ಲಿ ಹಾಗ್ಕಾಂಗ್ನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಹೋರಾಟಗಳನ್ನು ಹತ್ತಿಕ್ಕುವ ಕಾರ್ಯಾಚರಣೆಯ ಉಸ್ತುವಾರಿಯನ್ನೂ ಸುನ್ ನಿರ್ವಹಿಸಿದ್ದರು. ಸಾರ್ವಜನಿಕ ರಕ್ಷಣೆ ಇಲಾಖೆಯ ಉಪ-ಸಚಿವರಾಗಿದ್ದ ಸುನ್, ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ಶುಕ್ರವಾರ ಪ್ರಕಟಿಸಿರುವ ವರದಿಯಲ್ಲಿ ತಿಳಿಸಿದೆ. ಕಳೆದ ಒಂದು ವರ್ಷದಿಂದಲೂ ಸುನ್ ಅವರ ವಿರುದ್ಧ ವಿಚಾರಣೆ ನಡೆಯುತ್ತಿತ್ತು ಎಂದು ಸರ್ಕಾರಿ ಮಾಧ್ಯಮ ಹೇಳಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೊವಿಡ್-19 ಪಿಡುಗು ವ್ಯಾಪಿಸಿದಾಗ ಸುನ್ ತಮ್ಮ ಕೇಂದ್ರಸ್ಥಾನವನ್ನು ಬಿಟ್ಟು ಬಂದಿದ್ದರು. ಸರ್ಕಾರದ ಅನುಮತಿಯಿಲ್ಲದೆ ಗೌಪ್ಯ ಮಾಹಿತಿಯನ್ನು ತನ್ನೊಂದಿಗೆ ಹೊತ್ತೊಯ್ದಿದ್ದ ಸುನ್, ಹಲವು ಮೂಢನಂಬಿಕೆ ಆಧರಿಸಿದ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡಿದ್ದರು ಎಂದು ಸರ್ಕಾರಿ ಮಾಧ್ಯಮ ಹೇಳಿದೆ.
ವುಹಾನ್ನಿಂದ ಪಲಾಯನ ಮಾಡಿದ ಗಂಭೀರ ಆರೋಪವನ್ನು ಸುನ್ ಮೇಲೆ ಹೊರಿಸಲಾಗಿದೆ. ಆದರೆ ಈ ಆರೋಪಕ್ಕೆ ತಕ್ಕ ಪುರಾವೆಗಳನ್ನು ಚೀನಾ ಸರ್ಕಾರ ಈವರೆಗೆ ಒದಗಿಸಿಲ್ಲ. ಚೀನಾದ ಆಡಳಿತ ಸುನ್ ಮೇಲೆ ಈ ಮಟ್ಟಿಗಿನ ಸಿಟ್ಟು ತೋರಿಸಲು ಏನು ಕಾರಣ ಎನ್ನುವುದೂ ತಿಳಿದುಬಂದಿಲ್ಲ. ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತ ಮತ್ತು ಆದರ್ಶಗಳಿಗೆ ಅನುಗುಣವಾಗಿ ಸುನ್ ಎಂದಿಗೂ ವರ್ತಿಸಲಿಲ್ಲ. ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪ್ರದರ್ಶಿಸಿದ್ದಲ್ಲದೇ ರಾಜಕೀಯವಾಗಿ ಬದ್ಧತೆಯನ್ನೇ ಅವರು ಹೊಂದಿರಲಿಲ್ಲ. ರಾಜಕೀಯ ಗಾಳಿಸುದ್ದಿಗಳನ್ನೂ ಹರಡಿದ್ದರು ಎಂಬುದು ಚೀನಾ ಸರ್ಕಾರದ ಆರೋಪವಾಗಿದೆ.
ಆ ಸಂದರ್ಭಗಳು ನಿಜಕ್ಕೂ ಗಂಭೀರವಾಗಿದ್ದವು. ಪ್ರಕೃತಿ ನಮ್ಮ ವಿರುದ್ಧ ಮುನಿದಿತ್ತು. ವುಹಾನ್ ಕೊರೊನಾ ಅಟ್ಟಹಾಸದಿಂದ ತತ್ತರಿಸಿತ್ತು. ಇಂಥ ಸಂದರ್ಭವನ್ನು ಅವರು ಗಂಭೀರವಾಗಿ ನಿರ್ವಹಿಸಬೇಕಿತ್ತು. ಆದರೆ ಸುನ್ ಅವರು, ದೊಡ್ಡಮಟ್ಟದ ನಗದು ಮತ್ತು ಆಸ್ತಿ ರೂಪದಲ್ಲಿ ಲಂಚ ಪಡೆದದ್ದಲ್ಲದೆ, ಐಷಾರಾಮಿ ಮನರಂಜನೆ ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂಥ ಮನರಂಜನಾ ಕೂಟಗಳು ಅವರ ಹೊಣೆಗಾರಿಕೆ ನಿರ್ವಹಣೆಯ ಮೇಲೆ ಪರಿಣಾಮ ಬೀರಿದ್ದವು ಎಂದು ಸರ್ಕಾರಿ ತನಿಖಾ ಸಂಸ್ಥೆಗಳು ಹೇಳಿವೆ.
ನಿಮ್ಮ ಕಾಮೆಂಟ್ ಬರೆಯಿರಿ