ಸಾಗರ: ಬಾಳೆಹಳ್ಳಿಯಲ್ಲಿ ಮನೆಯಂಗಳಕ್ಕೇ ಬಂದ ಭಾರೀ ಗಾತ್ರದ ಕಾಡುಕೋಣ..ವಿಡಿಯೊದಲ್ಲಿ ಸೆರೆ…

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಹಳ್ಳಿ ಸಮೀಪದ ಬಾಳೆಹಳ್ಳಿಯಲ್ಲಿ ಮನೆ ಅಂಗಳಕ್ಕೇ ಕಾಡುಕೋಣ ಬಂದಿತ್ತು.
ಬಾಳೆಹಳ್ಳಿಯ ರವೀಂದ್ರಮೂರ್ತಿ ಅವರ ಅವರ ಮನೆ ಅಂಗಳಕ್ಕೆ ಗುರುವಾರ ಬೆಳ್ಳಂಬೆಳಿಗ್ಗೆ ಕಾಡೆಮ್ಮೆಗಳ ಗುಂಪು ಕಾಣಿಸಿಕೊಂಡಿವೆ. ಒಂದು ಗುಂಪು ಮೊದಲು ಕಾಣಿಸಿಕೊಂಡರೆ ಸ್ವಲ್ಪ ಹೊತ್ತಿನ ನಂತರ ಭಾರೀ ಗಾತ್ರದ ಮತ್ತೊಂದು ಕಾಡುಕೋಣ ಕಾಣಸಿಕೊಂಡಿದೆ. ಮನೆಯವರು ಚಿಕ್ಕಮಕ್ಕಳೊಂದಿಗೆ ಅಂಗಳದಲ್ಲಿ ಕುಳಿತಿದ್ದಾಗ ಈ ಕಾಡುಕೋಣಗಳು ಕಾಣಿಸಿಕೊಂಡಿವೆ.

ಆರು ಕಾಡೆಮ್ಮೆಗಳು ಅಂಗಳದ ಸಮೀಪವೇ ಹಾದು ನಂತರ ಅವರ ಮನೆಯ ಹಿಂದನ ಬೇಣಕ್ಕೆ ಹೋಗಿವೆ. ಸ್ವಲ್ಪ ಹೊತ್ತಿನ ನಂತರ ಬಂದ ಒಂಟಿ ಕಾಡುಕೋಣ ಸೀದಾ ಅಂಗಳಕ್ಕೇ ಬಂದಿದೆ. ಈ ಭಾರೀ ಕಾಡುಕೋಣ ವಿಡಿಯೊದಲ್ಲಿ ಸೆರೆಯಾಗಿದ್ದು ನಂತರ ಮನೆಯವರು ಬೆದರಿಸಿದ್ದಕ್ಕೆ ತೋಟದ ಕಡೆಗೆ ಹೋಗಿ ರಾತ್ರಿಯಿಡೀ ಅಲ್ಲಿಯೇ ಇದ್ದು ಬೆಳಿಗ್ಗೆ ಹೋಗಿದೆ. ಹಿಂಡಿನಲ್ಲಿ ಕಾಣಿಸಿಕೊಂಡ ಕಾಡೆಮ್ಮೆಗಳ ಗುಂಪಪಿನಲ್ಲಿ ಮರಿಗಳು ಇವೆ ಎಂದು ಮನೆಯ ಸಚಿನ್‌ ಬಿ.ಆರ್‌. ತಿಳಿಸಿದ್ದಾರೆ. ಇಲ್ಲಿ ಕಾಡುಕೋಣ- ಕಾಡೆಮ್ಮೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಆದರೆ ಇಷ್ಟುದೊಡ್ಡ ಕಾಡುಕೋಣ ಈ ರೀತಿ ಮನೆಯಂಗಳಕ್ಕೇ ಬಂದಿದ್ದು ಈಗಲೇ. ಆದರೆ ಅದು ಏನೂ ಮಾಡಲಿಲ್ಲ. ಕಳೆದ ಆರೇಳು ತಿಂಗಳಿಂದ ಈ ಒಂಟಿ ಕಾಡುಕೋಣ ಕಾಣಿಸಿಕೊಳ್ಳುತ್ತಿದೆ. ಆದರೆ ಮನೆ ಅಂಗಳಕ್ಕೆ ಬಂದಿರಲಿಲ್ಲ. ಆದರೆ ಗುರುವಾರ (ನವೆಂಬರ್‌ ೪ರಂದು)ಮನೆಯಂಗಳಕ್ಕೆ ಬಂದಿತ್ತು ಎಂದು ಸಚಿನ್‌ ತಿಳಿಸಿದರು.ಇಂದು (ಶುಕ್ರವಾರ) ಬೆಳಿಗ್ಗೆ ಅವರ ಗದ್ದೆಗೆ ದೀಪಾವಳಿಯಂದು ನಾವು ಪೂಜೆಗೆ ಹೋದಾಗಲೂ ಕಾಡೆಮ್ಮೆಗಳ ಹಿಂಡು ಕಾಣಿಸಿಕೊಂಡಿದೆ. ಅದನ್ನು ನೋಡಿದ ನಂತರ ಹಾಗೆಯೇ ಹಿಂತಿರುಗಿದೆವು ಎಂದು ಸಚಿನ್‌ ತಿಳಿಸಿದರು.

ಪ್ರಮುಖ ಸುದ್ದಿ :-   ತುಮಕೂರು : ಲಾಡ್ಜ್‌ನಲ್ಲಿ ದಾವಣಗೆರೆ ಪಿಎಸ್ಐ ಆತ್ಮಹತ್ಯೆ

5 / 5. 5

ನಿಮ್ಮ ಕಾಮೆಂಟ್ ಬರೆಯಿರಿ

advertisement