12 ಸೆಂಮೀ ಉದ್ದದ ಬಾಲವಿರುವ ಮಗು ಜನನ, ಬೆರಗಾದ ವೈದ್ಯರು..!

ಬ್ರೆಜಿಲ್‌ನಲ್ಲಿ ಜನಿಸಿದ ಗಂಡು ಮಗುವಿಗೆ 12 ಸೆಂಮೀ ಉದ್ದದ ಬಾಲದ ತರಹವಿದ್ದು ತುದಿಯಲ್ಲಿ ಚೆಂಡಿನ ಆಕಾರವಿದೆ. ಇದು ‘ನಿಜವಾದ ಮಾನವ ಬಾಲ’ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ.
ನಾಲ್ಕರಿಂದ ಎಂಟು ವಾರಗಳ ಗರ್ಭಾವಸ್ಥೆಯ ಹಂತದಲ್ಲಿ, ಗರ್ಭದಲ್ಲಿರುವಾಗ ಮಾನವ ಶಿಶುಗಳು ಭ್ರೂಣದ ಬಾಲ ಬೆಳೆಯುತ್ತವೆ ಎಂಬುದು ಸತ್ಯ. ಆದರೆ ಬೆಳವಣಿಗೆಯು ಅಂತಿಮವಾಗಿ ಬಾಲ ಮೂಳೆಯ ರಚನೆಗೆ ಕಾರಣವಾಗುತ್ತದೆ. ಆದರೆ ಈ ಅಪರೂಪದ ಪ್ರಕರಣದಲ್ಲಿ, ಬಾಲವು ಬೆಳೆಯುತ್ತಲೇ ಇತ್ತು.
ಜರ್ನಲ್ ಆಫ್ ಪೀಡಿಯಾಟ್ರಿಕ್ ಸರ್ಜರಿ ಕೇಸ್ ವರದಿಯಲ್ಲಿ ಪ್ರಕಟವಾದ ಮಗುವಿನ ಚಿತ್ರಗಳು, ಸೊಂಟದ ಹಿಂಬದಿಗೆ ಪ್ರಷ್ಠದ ಕೆಳ ಭಾಗದಲ್ಲಿ ಬಾಲವಿದ್ದು, ಅದರ ಕೊನೆಯಲ್ಲಿ ಚೆಂಡಿನ ಆಕಾರವಿದೆ. ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ‘ಬಾಲ ಮತ್ತು ಆ ಮಾಶದ ಚೆಂಡನ್ನು ಯಶಸ್ವಿಯಾಗಿ ತೆಗೆದುಹಾಕುವಲ್ಲಿ ಯಶಸ್ವಿಯಾದರು. ಕುತೂಹಲವೆಂದರೆ, ಮಗುವಿನ ಜನನದ ತನಕ ಬೆಳವಣಿಗೆಯನ್ನು ಗುರುತಿಸಲಾಗಿಲ್ಲ.
ಶಸ್ತ್ರಚಿಕಿತ್ಸೆಯ ಮೊದಲು, ವೈದ್ಯರು ಪರೀಕ್ಷಿಸಿದರು ಈ ಬೆಳವಣಿಗೆಯು ನಿಜವಾದ ಮಾನವ ಬಾಲದ ಅಪರೂಪದ ಉದಾಹರಣೆಯಾಗಿದೆ ಎಂದು ತಿಳಿಸಿದರು.
ಈ ಪ್ರಕರಣವು ಅತ್ಯಂತ ವಿರಳವಾಗಿದೆ ಏಕೆಂದರೆ ನಿಜವಾದ ಮೂಳೆಗಳಿಲ್ಲದ ಬಾಲಗಳೊಂದಿಗೆ ಈವರೆಗೆ ಕೇವಲ 40 ಜನಿಸಿದ ಬಗ್ಗೆ ದಾಖಲೆಗಳಿವೆ.
ಫೋರ್ಟಲೆಜಾ ನಗರದ ಆಲ್ಬರ್ಟ್ ಸಬಿನ್ ಮಕ್ಕಳ ಆಸ್ಪತ್ರೆಯಲ್ಲಿ ಮಗು ಜನಿಸುವ ವೇಳೆಗೆ ‘ಬಾಲ’ 12 ಸೆಂ.ಮೀ ಉದ್ದವಿತ್ತು. ಮತ್ತು ತುದಿಯಲ್ಲಿ 4 ಸೆಂ.ಮೀ ವ್ಯಾಸದ ಚೆಂಡಿನಕಾರದಲ್ಲಿ ಮಾಂಸದ ಬೆಳವಣಿಗೆಯಾಗಿತ್ತು ಎಂದು ವೈದ್ಯಕೀಯ ಜರ್ನಲ್‌ನಲ್ಲಿನ ವರದಿಯಲ್ಲಿ ತಿಳಿಸಲಾಗಿದೆ.
ಅಪರಿಚಿತ ಶಿಶುವನ್ನು 35 ವಾರಗಳಲ್ಲಿ ಯಾವುದೇ ತೊಂದರೆಗಳಿಲ್ಲದೆ ಹೆರಿಗೆ ಮಾಡಲಾಗಿದೆ ಎಂದು ವರದಿ ಹೇಳುತ್ತದೆ. ಹೆರಿಗೆಯ ಮೊದಲು, ಅಲ್ಟ್ರಾಸೌಂಡ್ ಮಗುವಿನ ನರಮಂಡಲಕ್ಕೆ ಬಾಲವನ್ನು ಜೋಡಿಸುವ ಬಗ್ಗೆ ಯಾವುದೇ ಸೂಚನೆ ಹಾಗೂ ಸಾಕ್ಷ್ಯವನ್ನು ಬಹಿರಂಗಪಡಿಸಲಿಲ್ಲ.
ನವಜಾತ ಶಿಶುಗಳಲ್ಲಿ ನಿಜವಾದ ಮಾನವ ಬಾಲದ ಉಪಸ್ಥಿತಿಯು ಅಪರೂಪದ ಜನ್ಮಜಾತ ಅಸಂಗತತೆಯಾಗಿದೆ ಮತ್ತು ದೈಹಿಕ ಮತ್ತು ವಿಕಿರಣಶಾಸ್ತ್ರದ ಪರೀಕ್ಷೆಗಳ ಮೂಲಕ ಸಮಗ್ರ ರೀತಿಯಲ್ಲಿ ತನಿಖೆ ಮಾಡಬೇಕು” ಎಂದು ಜರ್ನಲ್ ಲೇಖನವು ಉಲ್ಲೇಖಿಸುತ್ತದೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement