ರಮಣಶ್ರೀ ಆಸ್ಪತ್ರೆ ವಿರುದ್ಧ ಪುನೀತ’ ಅಭಿಮಾನಿಗಳ ಆರೋಪ : ವೈದ್ಯರಿಗೆ ರಕ್ಷಣೆ ಕೋರಿ ಸಿಎಂ ಬೊಮ್ಮಾಯಿಗೆ ಫನಾ ಪತ್ರ

ಬೆಂಗಳೂರು: ಖ್ಯಾತ ನಟ ನಟ ಪುನೀತ್ ರಾಜಕುಮಾರ್ ಸಾವಿನ ಕುರಿತು ಆಸ್ಪತ್ರೆ ವೈದ್ಯರ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆ ರಾಜ್ಯ ಖಾಸಗಿ ಆಸ್ಪತ್ರೆಗಳ ಒಕ್ಕೂಟವು ( ಫನಾ) ಡಾ. ರಮಣರಾವ್ ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಾ. ರಮಣರಾವ್ ಅವರ ಕ್ಲಿನಿಕ್​ಗೆ ಪುನೀತರಾಜ್​ಕುಮಾರ್ ಮೊದಲು ಭೇಟಿ ನೀಡಿದ್ದರು. ಅಲ್ಲಿ ವೈದ್ಯ ಡಾ.ರಮಣರಾವ್ ಅವರ ಸೂಚನೆ ಮೇರೆಗೆ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಪುನೀತರಾಜ್​ಕುಮಾರ್ ಹೃದಯ ಸ್ತಂಭನದಿಂದ ನಿಧನರಾದರು. ಈ ವಿಚಾರದಲ್ಲಿ ವೈದ್ಯರ ಕರ್ತವ್ಯಲೋಪವಿದೆ ಎಂದು ಕೆಲ ಅಭಿಮಾನಿಗಳು ದೂರುತ್ತಿದ್ದಾರೆ.
ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ಗಮನ ಸೆಳೆದಿರುವ ಫನಾ ಅಧ್ಯಕ್ಷ ಡಾ. ಪ್ರಸನ್ನ, ಸಾವಿನ ಬಗ್ಗೆ ಚರ್ಚೆಯಿಂದ ವೈದ್ಯಕೀಯ ಗೌಪ್ಯತೆ ಉಲ್ಲಂಘನೆಯಾಗುತ್ತಿದೆ. ಈ ವಿಚಾರದಲ್ಲಿ ಎಫ್​ಐಆರ್ ಅಥವಾ ಪಿಸಿಆರ್ ದಾಖಲಿಸುವ ಮುನ್ನ ಸುಪ್ರೀಂಕೋರ್ಟ್​ ರೂಪಿಸಿರುವ ನಿಯಮಾವಳಿಗಳನ್ನು ಗಮನಿಸಬೇಕು ಎಂದು ಹೇಳಿದ್ದಾರೆ.
ಪುನೀತ್ ಸಾವಿನ ಬಗ್ಗೆ ನಡೆದಿರುವ ಚರ್ಚೆಗಳು ವೈದ್ಯಕೀಯ ಗೌಪ್ಯತೆಯ ಉಲ್ಲಂಘನೆ ಮಾಡಿದೆ. ವೈದ್ಯಕೀಯ ಚಿಕಿತ್ಸೆ, ವೈದ್ಯಕೀಯ ವೃತ್ತಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಬಾರದೆಂಬ ನಿಯಮವಿದೆ. ಚರ್ಚೆಯಿಂದ ಸುಪ್ರೀಂಕೋರ್ಟ್​ ನಿಯಮಾವಳಿಗಳು ಉಲ್ಲಂಘನೆಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.
ವೈದ್ಯರಿಗೆ ಅವರದ್ದೇ ಆದ ಇತಿ ಮಿತಿಗಳಿದೆ, ಜೀವ ಉಳಿಸುವುದು ಎಲ್ಲಾ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಎಫ್​ಐಆರ್ ಅಥವಾ ಪಿಸಿಆರ್ ದಾಖಲಿಸುವ ಮುನ್ನ ಸುಪ್ರೀಂಕೋರ್ಟ್​ ರೂಪಿಸಿರುವ ನಿಯಮಾವಳಿಗಳನ್ನು ಗಮನಿಸಬೇಕು ಎಂದು ಹೇಳಿದ್ದಾರೆ.
ನಟ ಪುನೀತ್​ಗೆ ಚಿಕಿತ್ಸೆ ನೀಡಿದ್ದ ವೈದ್ಯಕೀಯ ಸಿಬ್ಬಂದಿಗೆ ರಾಜ್ಯ ಸರ್ಕಾರ ರಕ್ಷಣೆ ಒದಗಿಸಬೇಕು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಡಾ. ಪ್ರಸನ್ನ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement