ಛತ್ತೀಸ್ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶುಕ್ರವಾರ ದೀಪಾವಳಿಯ ಗೋವರ್ಧನ ಪೂಜೆಯ ಸಂದರ್ಭದಲ್ಲಿ ‘ಸೋತ ಪ್ರಹಾರ್’ ಎಂದು ಕರೆಯಲ್ಪಡುವ ಆಚರಣೆಯ ಭಾಗವಾಗಿ ದುರ್ಗ್ನಲ್ಲಿ ತನ್ನ ಕೈಗೆ ಛಾಟಿಯಿಂದ ಹೊಡೆಸಿಕೊಳ್ಳುತ್ತಿರುವ ವಿಡಿಯೀ ಈಗ ವೈರಲ್ ಆಗಿದೆ.
ಮುಖ್ಯಮಂತ್ರಿ ಬಘೇಲ್ ಅವರು ತಮ್ಮ ಬಲಗೈ ಚಾಚಿ ನಿಂತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮುಷ್ಟಿ ಬಿಗಿ ಹಿಡಿದ ಬಾಘೇಲ್ ಬಲಗೈಗೆ ವ್ಯಕ್ತಿಯೊಬ್ಬ ಹಗ್ಗದಂತಹ ವಸ್ತುವಿನಿಂದ ಅನೇಕ ಸಲ ಹೊಡೆದಿದ್ದಾರೆ. ಸಾಕಷ್ಟು ಗಟ್ಟಿಯಾಗಿ ಚಾವಟಿಯಿಂದ ಹೊಡೆಯುತ್ತಿದ್ದರೂ ಸಹ ಛತ್ತೀಸಗಡ ಮುಖ್ಯಮಂತ್ರಿ ಬಘೇಲ್ ನಗು ಮುಖದಿಂದ ನಿಂತಿರುವುದು ಕಂಡುಬಂದಿದೆ ಮತ್ತು ಚಾವಟಿ ಏಟು ಮುಗಿದ ನಂತರ ಚಾವಟಿಯಲ್ಲಿ ಹೊಡೆದ ವ್ಯಕ್ತಿಯನ್ನು ತಬ್ಬಿಕೊಂಡರು. ಇಡೀ ಆಚರಣೆಯ ಉದ್ದಕ್ಕೂ ಅವರಿದ್ದರು.
ಛತ್ತೀಸ್ಗಡ ಮುಖ್ಯಮಂತ್ರಿ ತಮಗೆ ಚಾಟಿ ಬೀಸಿರುವ ವಿಡಿಯೋವನ್ನು ಶೇರ್ ಮಾಡಿದ್ದು, “ರಾಜ್ಯದ ಜನತೆಗೆ ದೀಪಾವಳಿಯ ಶುಭ ಹಾರೈಕೆಗಳು ಮತ್ತು ಅದೃಷ್ಟಕ್ಕಾಗಿ ಇಂದು ಜಾಂಜಗಿರಿಯಲ್ಲಿ ಸೋತ್ ಪ್ರಹಾರ (ಸ್ಟ್ರೈಕ್) ಮಾಡುವ ಸಂಪ್ರದಾಯವನ್ನು ಆಡಲಾಯಿತು. ಎಲ್ಲಾ ಅಡೆತಡೆಗಳು ನಾಶವಾಗಲಿ” ಎಂದು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕ್ರಮವಾಗಿ 5 ಮತ್ತು 10 ರೂಪಾಯಿಗಳಷ್ಟು ಕಡಿತಗೊಳಿಸಿದ ಎರಡು ದಿನಗಳ ನಂತರ, ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಶುಕ್ರವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿನ ಉಪಚುನಾವಣೆ ಫಲಿತಾಂಶಗಳಲ್ಲಿ ಬಿಜೆಪಿ ಅಸ್ಸಾಂನಲ್ಲಿ ಯಶಸ್ಸನ್ನು ಸಾಧಿಸಿದೆ ಆದರೆ ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ದೊಡ್ಡ ಸೋಲನ್ನು ಅನುಭವಿಸಿದೆ. ಇದರಿಂದಾಗಿ ಇಂಧನ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
30ರಷ್ಟು ಹೆಚ್ಚಿಸಿ ನಂತರ 5 ರೂ.ಗೆ ಇಳಿಸುತ್ತಾರೆ. ಒಂದು ಉಪಚುನಾವಣೆಯಲ್ಲಿನ ಸೋಲಿನಿಂದಾಗಿ 5 ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 5 ರೂ. ಕಡಿಮೆಯಾಗಿದೆ, ನೀವು ಅವರನ್ನು ಸೋಲಿಸಿದರೆ ಬೆಲೆಗಳು ಒಂದೇ ರೀತಿ ಕಡಿಮೆಯಾಗುತ್ತವೆ ಎಂದು ಮುಖ್ಯಮಂತ್ರಿ ಬಘೇಲ್ ಹೇಳಿದರು. ಕೇಂದ್ರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡಿದ ನಂತರ ಯುಪಿಎ ಆಡಳಿತವಿರುವ ಛತ್ತೀಸ್ಗಢವು ರಾಜ್ಯವು ವಿಧಿಸುವ ಇಂಧನ ಬೆಲೆಗಳ ಮೇಲಿನ ವ್ಯಾಟ್ನಲ್ಲಿ ಕಡಿತವನ್ನು ಘೋಷಿಸಿಲ್ಲ
ನಿಮ್ಮ ಕಾಮೆಂಟ್ ಬರೆಯಿರಿ