ಕೋವಿಡ್-19 ಸಾಂಕ್ರಾಮಿಕವು ಜನರ ಜೀವನ ವಿಧಾನವನ್ನು ಬದಲಾಯಿಸಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡರು.
ನಿಯಮಿತ ತಾಪಮಾನ ತಪಾಸಣೆ, ಪ್ರತಿ ಗಂಟೆಗೆ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಮತ್ತು ಹೊರಗೆ ಕಾಲಿಟ್ಟಾಗಲೆಲ್ಲಾ ಫೇಸ್ ಮಾಸ್ಕ್ ಧರಿಸುವುದು ಈಗ ಸಾಮಾನ್ಯ ಅಭ್ಯಾಸವಾಗಿದೆ. ಇದು ಹೇಗೆ ನಮ್ಮ ಜೀವನ ಕ್ರಮದಲ್ಲಿ ಅಭ್ಯಾಸವಾಗಿದೆ ಎಂಬುದಕ್ಕೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ಪುಟ್ಟ ಮಗುವಿನ ವಿಡಿಯೊವೇ ನಿದರ್ಶನವಾಗಿದೆ.
ವಿಡಿಯೊದಲ್ಲಿ, ಪುಟ್ಟ ಹುಡುಗಿಯೊಬ್ಬಳು ಸೀದಾ ಭದ್ರತಾ ಸಿಬ್ಬಂದಿ ಇದ್ದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು ಮತ್ತು ಅವರು ತನ್ನ ತಾಪಮಾನ ಪರೀಕ್ಷಿಸಲು ಮರೆತಿದ್ದಾರೆ ಎಂದು ಜ್ಞಾಪಿಸುವ ಸಲುವಾಗಿ ಈ ಪುಟ್ಟ ಮಗು ಅವರಿಗೆ ತನ್ನ ಕೈಗಳನ್ನು ತೋರಿಸುತ್ತಾಳೆ.
ಅಲ್ಲದೆ ತನ್ನ ಬಳಯಿದ್ದ ಆಟಿಕೆಯ ತಾಪಮಾನವನ್ನೂ ಸಹ ಪರೀಕ್ಷಿಸಲು ಒತ್ತಾಯಿಸುತ್ತಾಳೆ. ಈ ವಿಡಿಯೋ ಅಂತರ್ಜಾಲದಲ್ಲಿ ಸಾವಿರಾರು ಹೃದಯಗಳನ್ನು ಗೆದ್ದಿದೆ. ಈ ವಿಡಿಯೋವನ್ನು ದಿನೇಶ್ ಜೋಶಿ ಎಂಬ ಹೆಸರಿನ ಟ್ವಿಟ್ಟರ್ ಪೋಸ್ಟ್ ಮಾಡಿದ್ದು, “ಜವಾಬ್ದಾರಿಯುತ ನಾಗರಿಕನು ಹೀಗಿರಬೇಕು” ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ