ಮಕ್ಕಳಿಗೆ ಝೈಕೋವ್-ಡಿ ಕೋವಿಡ್ ಲಸಿಕೆ: ಸರ್ಕಾರಕ್ಕೆ 1 ಡೋಸಿನ ಬೆಲೆ 265 ರೂ.

ನವದೆಹಲಿ: ಔಷಧ ತಯಾರಕ ಸಂಸ್ಥೆ ಝೈಡಸ್ ಕ್ಯಾಡಿಲಾ ತಾನು ಸರ್ಕಾರಕ್ಕೆ ಒಂದು ಕೋಟಿ ಡೋಸ್ ಗಳನ್ನು ಪ್ರತಿ ಡೋಸ್ ಗೆ 265 ರೂ.ಗಳಿಗೆ ಪೂರೈಕೆ ಮಾಡುತ್ತಿರುವುದಾಗಿ ಹೇಳಿದೆ.
ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾಗಿದ್ದು ಒಂದು ಕೋಟಿ ಡೋಸ್ ಗಳನ್ನು ಪೂರೈಕೆ ಮಾಡುವುದಕ್ಕೆ ಸರ್ಕಾರದಿಂದ ಆರ್ಡರ್ ಬಂದಿದೆ ಎಂದು ಕಂಪನಿ ತಿಳಿಸಿದೆ.
ಸೂಜಿ-ಮುಕ್ತ ಲಸಿಕೆ ಜಿಎಸ್ ಟಿ ರಹಿತವಾಗಿ ಪ್ರತಿ ಡೋಸ್ ಗೆ 93 ರೂಪಾಯಿಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ. ಸಾಂಪ್ರದಾಯಿಕ ಸಿರೆಂಜ್ ಗಳ ಬದಲಾಗಿ ಸೂಜಿ ರಹಿತ ಅಪ್ಲಿಕೇಟರ್ ಗಳನ್ನು ಬಳಕೆ ಮಾಡಿ ಈ ಲಸಿಕೆಯನ್ನು ನೀಡಲಾಗುತ್ತದೆ. 28 ದಿನಗಳ ಅಂತರದಲ್ಲಿ ಮೂರು ಡೋಸುಗಳನ್ನು ನೀಡಲಾಗುತ್ತದೆ.
ಈ ಅಪ್ಲಿಕೇಟರ್ ಗಳನ್ನು ಫಾರ್ಮಾ ಜೆಟ್ ಎಂದು ಹೇಳಲಾಗಿದ್ದು, ಇದರಿಂದ ಅಡ್ಡಪರಿಣಾಮಗಳೂ ಕಡಿಮೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಝೈಕೋವ್-ಡಿಯ ಮೂಲಕ ಸರ್ಕಾರದ ಲಸಿಕೆ ಯೋಜನೆಗೆ ಸಹಕರಿಸುವುದಕ್ಕಾಗಿ ನಾವು ಸಿದ್ಧರಿದ್ದೇವೆ. ಸೂಜಿ ಮುಕ್ತ ಲಸಿಕೆ ಹೆಚ್ಚು ಮಂದಿಗೆ ಲಸಿಕೆ ಪಡೆಯುವುದಕ್ಕೆ ಉತ್ತೇಜನ ನೀಡಲಿದೆ. 12 ರಿಂದ 18 ವರ್ಷಗಳ ವರೆಗಿನ ಮಕ್ಕಳಿಗೆ ಲಸಿಕೆ ನೀಡಬಹುದಾಗಿದೆ ಎಂದು ಝೈಡಸ್ ಕ್ಯಾಡಿಲಾದ ವ್ಯವಸ್ಥಾಪಕ ನಿರ್ದೇಶಕ ಶರ್ವಿಲ್ ಪಟೇಲ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement