ಕರ್ನಾಟಕದ ವಿಧಾನ ಪರಿಷತ್ 25 ಕ್ಷೇತ್ರಗಳಿಗೆ ಡಿ. 10ಕ್ಕೆ ಚುನಾವಣೆ; ಚುನಾವಣೆ ನಡೆಯಲಿರುವ ಸ್ಥಾನಗಳ ವಿವರ

ಬೆಂಗಳೂರು: ಮುಂದಿನ ಜನವರಿ 5ಕ್ಕೆ ತೆರವಾಗುವ ಕರ್ನಾಟಕದ ವಿಧಾನ ಪರಿಷತ್​​ನ 25 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ 10ರಂದು ಮತದಾನ ನಡೆಯಲಿದೆ ಎಂದು ಪ್ರಕಟಿಸಿದೆ.
ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 16ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ.
ಡಿಸೆಂಬರ್ 10ರ ಶುಕ್ರವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಮಾಡಬಹುದಾಗಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. 25 ಸ್ಥಾನಗಳಲ್ಲಿ ಬಿಜೆಪಿ – 6, ಕಾಂಗ್ರೆಸ್​​- 14, ಜೆಡಿಎಸ್​​​ -4 ಹಾಗೂ ಪಕ್ಷೇತರ – 1 ಸ್ಥಾನಗಳಿವೆ.
ಚುನಾವಣೆ ನಡೆಯಲಿರುವ ಸ್ಥಾನಗಳು ಹಾಗೂ ಜಿಲ್ಲಾವಾರು ಮಾಹತಿ ಇಂತಿದೆ: ಬೀದರ್ 1 , ಕಲಬುರ್ಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಮೈಸೂರು ,2, ಚಿಕ್ಕಮಗಳೂರು 1, ಹಾಸನ1, ತುಮಕೂರು 1, ಮಂಡ್ಯ1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1 ಹಾಗೂ ಕೊಡಗು ಜಿಲ್ಲೆಯ ಒಂದು ಕ್ಷೇತ್ರ ಸೇರಿದಂತೆ ಒಟ್ಟು ವಿಧಾನ ಪರಿಷತ್​​ನ 25 ಕ್ಷೇತ್ರಗಳಿಗೆ ಡಿ. 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ

ಪ್ರಮುಖ ಸುದ್ದಿ :-   ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ

 

ಜನವರಿ 5ಕ್ಕೆ ತೆರವಾಗುವ ವಿಧಾನ ಪರಿಷತ್ ಸ್ಥಾನಗಳು:

ಬಿಜೆಪಿ:
ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ
ಎಂ.ಕೆ. ಪ್ರಾಣೇಶ್ (ಉಪ ಸಭಾಪತಿ)- ಚಿಕ್ಕಮಗಳೂರು ಸ್ಥಳೀಯ ಸಂಸ್ಥೆ
ಮಹಾಂತೇಶ್ ಕವಟಗಿಮಠ (ಸರ್ಕಾರಿ ಮುಖ್ಯ ಸಚೇತಕ)-ಬೆಳಗಾವಿ ಸ್ಥಳೀಯ ಸಂಸ್ಥೆ
ಬಿ.ಜಿ. ಪಾಟೀಲ್-ಕಲಬುರಗಿ ಸ್ಥಳೀಯ ಸಂಸ್ಥೆ
ಪ್ರದೀಪ್ ಶೆಟ್ಟರ್- ಧಾರವಾಡ ಸ್ಥಳೀಯ ಸಂಸ್ಥೆ
ಸುನೀಲ್ ಸುಬ್ರಮಣಿ- ಕೊಡಗು ಸ್ಥಳೀಯ ಸಂಸ್ಥೆ

ಪಕ್ಷೇತರ:
ವಿವೇಕರಾವ್ ಪಾಟೀಲ್ – ಬೆಳಗಾವಿ ಸ್ಥಳೀಯ ಸಂಸ್ಥೆ

ಕಾಂಗ್ರೆಸ್:
ಎಸ್.ಆರ್. ಪಾಟೀಲ್ (ವಿಪಕ್ಷ ನಾಯಕ)- ವಿಜಯಪುರ ಸ್ಥಳೀಯ ಸಂಸ್ಥೆ
ಎಂ. ನಾರಾಯಣಸ್ವಾಮಿ (ವಿಪಕ್ಷ ಮುಖ್ಯ ಸಚೇತಕ)-ಬೆಂಗಳೂರು ಸ್ಥಳೀಯ ಸಂಸ್ಥೆ
ಪ್ರತಾಪ್ ಚಂದ್ರ ಶೆಟ್ಟಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ
ಶ್ರೀಕಾಂತ್ ಘೋಟ್ನೇಕರ್- ಉತ್ತರ ಕನ್ನಡ ಸ್ಥಳೀಯ ಸಂಸ್ಥೆ
ಶ್ರೀನಿವಾಸ್ ಮಾನೆ- ಧಾರವಾಡ ಸ್ಥಳೀಯ ಸಂಸ್ಥೆ
ಧರ್ಮಸೇನ-ಮೈಸೂರು ಸ್ಥಳೀಯ ಸಂಸ್ಥೆ
ವಿಜಯ್ ಸಿಂಗ್- ಬೀದರ್ ಸ್ಥಳೀಯ ಸಂಸ್ಥೆ
ಬಸವರಾಜ್ ಪಾಟೀಲ್ ಇಟಗಿ- ರಾಯಚೂರು ಸ್ಥಳೀಯ ಸಂಸ್ಥೆ
ಕೆ.ಸಿ. ಕೊಂಡಯ್ಯ-ಬಳ್ಳಾರಿ ಸ್ಥಳೀಯ ಸಂಸ್ಥೆ
ಆರ್. ಪ್ರಸನ್ನಕುಮಾರ್- ಶಿವಮೊಗ್ಗ ಸ್ಥಳೀಯ ಸಂಸ್ಥೆ
ಎಂ.ಎ. ಗೋಪಾಲಸ್ವಾಮಿ-ಹಾಸನ ಸ್ಥಳೀಯ ಸಂಸ್ಥೆ
ಎಸ್. ರವಿ- ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆ
ರಘು ಆಚಾರ್- ಚಿತ್ರದುರ್ಗ ಸ್ಥಳೀಯ ಸಂಸ್ಥೆ
ಸುನೀಲ್ ಗೌಡ ಪಾಟೀಲ್- ವಿಜಯಪುರ ಸ್ಥಳೀಯ ಸಂಸ್ಥೆ

ಪ್ರಮುಖ ಸುದ್ದಿ :-   ಚುನಾವಣೆ ವೇಳೆಯೇ ಬಿಜೆಪಿಗೆ ಗುಡ್‌ಬೈ ಹೇಳಿದ ಸಂಸದ ಕರಡಿ ಸಂಗಣ್ಣ : ಕಾಂಗ್ರೆಸ್‌ ಸೇರ್ಪಡೆ

ಜೆಡಿಎಸ್:
ಎನ್. ಅಪ್ಪಾಜಿ ಗೌಡ (ಜೆಡಿಎಸ್ ಮುಖ್ಯ ಸಚೇತಕ)-ಮಂಡ್ಯ ಸ್ಥಳೀಯ ಸಂಸ್ಥೆ
ಸಂದೇಶ್ ನಾಗರಾಜ್-ಮೈಸೂರು ಸ್ಥಳೀಯ ಸಂಸ್ಥೆ
ಸಿ.ಆರ್. ಮನೋಹರ್- ಕೋಲಾರ ಸ್ಥಳೀಯ ಸಂಸ್ಥೆ
ಕಾಂತರಾಜು- ತುಮಕೂರು ಸ್ಥಳೀಯ ಸಂಸ್ಥೆ.

ಮತ್ತಷ್ಟು ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ  Press Note of Karnataka Legislative Council from 20 Local Authorities’ Constituencies

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement