ರಾಜ್ಯದಲ್ಲಿ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಏರಿಕೆಗೆ ತಾತ್ಕಾಲಿಕ ತಡೆ

ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳ ತಿಂಡಿ ತಿನಿಸುಗಳ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ.
ದರ ಏರಿಕೆ ಕುರಿತಂತೆ ಹೋಟೆಲ್ ಸಂಘ ನಿರ್ಧರಿಸಿದ್ದರೂ ಬಹುತೇಕ ಹೋಟೆಲ್‌ಗಳು ದರ ಏರಿಕೆ ಮಾಡಲು ಹಿಂದೇಟು ಹಾಕಿವೆ. ತಿಂಡಿ, ಊಟ ಸೇರಿದಂತೆ ಚಹಾ, ಕಾಫಿಗಳ ಬೆಲೆಯಲ್ಲಿ ಶೇ ೧೦ರ ವರೆಗೂ ಏರಿಕೆ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ಪ್ರಕಟಣೆ ನೀಡಿತ್ತು. ವಾಣಿಜ್ಯ ಅಡುಗೆ ದರ ಹೆಚ್ಚಳ, ದಿನಸಿ, ತರಕಾರಿ ಬೆಲೆ ಏರಿಕೆ ಹಿನ್ನೆಲೆ ಊಟ, ತಿಂಡಿಗಳ ಬೆಲೆಯಲ್ಲಿ ಹೆಚ್ಚಳದ ಕಾರಣದಿಂದ ತಿಂಡಿ-ತಿನಿಸುಗಳ ದರ ಏರಿಕೆ ಮಾಡುತ್ತಿರುವುದಾಗಿ ತಿಳಿಸಿತ್ತು.
ಆದರೆ ಕೆಲವು ಹೋಟೆಲ್ ಮಾತ್ರ ನಿನ್ನೆಯಿಂದಲೇ ಹೊಸ ದರ ಜಾರಿಗೆ ತಂದಿದ್ದು, ಬಹುತೇಕ ದರ್ಶಿನಿ, ಸಣ್ಣಪುಟ್ಟ ಹಾಗೂ ಸ್ಟಾರ್ ಹೋಟೆಲ್‌ಗಳು ಒಂದೆರಡು ವಾರ ಕಾದು ನೋಡಲು ಮುಂದಾಗಿವೆ.
ಕೋವಿಡ್ ಹಿನ್ನೆಲೆ ಲಾಕ್ ಡೌನ್ ಬಳಿಕ ಮತ್ತೆ ಗ್ರಾಹಕರು ಬಂದು ಉದ್ಯಮ ಚೇತರಿಸಿಕೊಳ್ಳಲು ಇಷ್ಟು ಸಮಯ ಬೇಕಾಗಿದೆ. ಈಗ ಮತ್ತೆ ದರ ಹೆಚ್ಚಳ ಮಾಡಿದರೆ ಗ್ರಾಹಕರ ಕೊರತೆ ಹೆಚ್ಚಾಗಬಹುದು ಎಂಬ ಆತಂಕ ಹೋಟೆಲ್ ಮಾಲೀಕರನ್ನು ಕಾಡುತ್ತಿದೆ. ಹೀಗಾಗಿ ಅನೇಕ ಹೊಟೆಲ್‌ನವರು ದರ ಏರಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಪೆಟ್ರೋಲ್ ಬೆಲೆ ಕಡಿಮೆಯಾದಂತೆ ಅಡುಗೆ ಅನಿಲ ದರದಲ್ಲೂ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಹೋಟೆಲ್ ತಿನಿಸುಗಳ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಆದರೆ ಹೆಚ್ಚಿಸುವುದು ಬಿಡುವುದು ಆಯಾ ಹೋಟೆಲ್ ಮಾಲೀಕರಿಗೆ ಬಿಟ್ಟಿದ್ದು ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement