ಮೈಕ್ರೋಸಾಫ್ಟ್​ ಮಾಲೀಕ ಬಿಲ್​ ಗೇಟ್ಸ್​ಗೆ ಟ್ವಟ್ಟರಿನಲ್ಲಿ ಮದುವೆ ಪ್ರಪೋಸ್‌ ಮಾಡಿದ ಕುವೈತಿ ಗಾಯಕಿ..!

ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​​ (Bill Gates) ತಮ್ಮ ಪತ್ನಿ ಮೆಲಿಂಡಾ ಅವರಿಂದ ಈಗ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಪತ್ನಿಯಿಂದ ದೂರವಾದ ಬಿಲ್​ ಗೇಟ್ಸ್​ರಿಗೆ ಈಗೊಂದು ಮದುವೆ ಪ್ರಸ್ತಾಪ ಬಂದಿದೆ. ಕುವೈತ್​​ನ ನಟಿ, ಗಾಯಕಿ ಶಾಮ್ಸ್ ಬಂದರ್ ಅಲ್-ಅಸ್ಲಾಮಿ ಬಿಲ್​ ಅವರು ಬಿಲ್‌ ಗೇಟ್ಸ್​​ ಅವರನ್ನು ಮದುವೆಯಾಗುವ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಅಸ್ಲಾಮಿಯವರಿಗೆ ಈಗ 41ವರ್ಷ. ಅವರು 66 ವರ್ಷದ, ಬಿಲ್​ ಗೇಟ್ಸ್​ ಅವರನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸುವ ಮೂಲಕ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಲ್​ಗೇಟ್ಸ್, ಜಗತ್ತಿಗೆ ಮುಂದಿನ ದಿನಗಳಲ್ಲಿ ಕಾಡಬಹುದಾದ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದರು. ಅದನ್ನು ಪ್ರಕಟಿಸಿದ್ದ ಅಂತಾರಾಷ್ಟ್ರೀಯ ಮಾಧ್ಯಮದ ಸ್ಕ್ರೀನ್​ಶಾಟ್​ ಶೇರ್ ಮಾಡಿಕೊಂಡಿರುವ ಟ್ವಿಟರ್ ಬಳಕೆದಾರರೊಬ್ಬರು, ಮುಂಬರುವ ದಿನಗಳಲ್ಲಿ ಸಿಡುಬಿನಂಥ ಸಾಂಕ್ರಾಮಿಕ ವೈರಸ್​​ಗಳ ಮೂಲಕ ಉಗ್ರರು ದಾಳಿ ನಡೆಸಬಹುದು. ದಾಳಿಗಳು ನಡೆದರೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲು ಹಣ ಮೀಸಲಿಡಬೇಕು ಎಂದು ಟ್ವೀಟ್​ ಮಾಡಿದ್ದರು.

ಆ ಟ್ವೀಟ್​​ನ್ನು ರೀಟ್ವೀಟ್​ ಮಾಡಿರುವ ಗಾಯಕಿ ಶಾಮ್ಸ್​ ಬಂದಲ್‌ ಅರೇಬಿಕ್​​ ಭಾಷೆಯಲ್ಲಿ ಈ ವ್ಯಕ್ತಿ (ಬಿಲ್​ ಗೇಟ್ಸ್​) ತುಂಬ ಸುಂದರವಾಗಿದ್ದಾರೆ. ಎಲೆಕ್ಟ್ರಾನಿಕ್​ ಯುಗದ ಪ್ರವಾದಿಯಾಗಿದ್ದಾರೆ. ಮುಂದೇನಾಗಬಹುದು ಎಂದು ಅವರು ಭವಿಷ್ಯವಾಣಿ ಹೇಳುತ್ತಿರುವುದು ನನಗೆ ತುಂಬ ಇಷ್ಟವಾಯಿತು. ನಾನು ಅವರನ್ನು ಮದುವೆಯಾಗಲು ಸಿದ್ಧನಿದ್ದೇನೆ ಮತ್ತು ನನ್ನ ಪ್ರಪೋಸಲ್​​ ಅವರು ಒಪ್ಪಿಕೊಳ್ಳುವ ಬಗ್ಗೆ ನಿಮಗೇನು ಅನ್ನಿಸುತ್ತದೆ ಎಂದು ಕೇಳಿದ್ದಾರೆ.
ಶಾಮ್ಸ್​ ಟ್ವೀಟ್​ ಮಾಡುತ್ತಿದ್ದಂತೆ ಅದನ್ನು ಅರೇಬಿಕ್​ ಸ್ಥಳೀಯ ಮಾಧ್ಯಮಗಳು ಇದನ್ನು ವರದಿ ಮಾಡಿದ್ದು ಈಗ ಇದು ದೊಡ್ಡ ಸುದ್ದಿಯಾಗಿದೆ. ಅದರ ಹೊರತಾಗಿ ಸೋಷಿಯಲ್​ ಮೀಡಿಯಾಗಳಲ್ಲೂ ಕೂಡ ನಟಿಯ ಟ್ವೀಟ್​ ಭಾರೀ ವೈರಲ್​ ಆಗಿದೆ.
ಈ ಟ್ವೀಟ್​​ನ್ನು ಶಾಮ್ಸ್​ ನವೆಂಬರ್ 6ರಂದು ಮಾಡಿದ್ದರು. ಟ್ವೀಟ್ ವೈರಲ್​ ಆದ ನಂತರ ಅದನ್ನು ನೋಡಿ ಶಾಮ್ಸ್​ ತಮ್ಮ ಟ್ವೀಟ್​ಗೆ ಸ್ಪಷ್ಟನೆ ನೀಡಿದ್ದಾರೆ. ಕೆಲವರಿಗೆ ಇದೊಂದು ಜೋಕ್​ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ತಿಳಿವಳಿಕೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement