ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣ ದಿಢೀರ್‌ ಹೆಚ್ಚಳ: ಮಾಲ್ ಗಳು ಬಂದ್, ಮತ್ತೆ ಲಾಕ್ಡೌನ್ ಜಾರಿ

ಬೀಜಿಂಗ್: ಚೀನಾದಲ್ಲಿ ರಾಜಧಾನಿ ಬೀಜಿಂಗ್‌ ಸೇರಿದಂತೆ ಹಲವೆಡೆ ಮತ್ತೆ ದಿಢೀರನೆ ಕೋವಿಡ್ ಪ್ರಕರಣಗಳು ಹೆಚ್ಚಾದ ಪರಿಣಾಮ ಅಧಿಕಾರಿಗಳು ಮಾಲ್ ಗಳನ್ನು ಬಂದ್ ಮಾಡಿಸಿದ್ದು, ಹಲವಾರು ಮಳಿಗೆಗಳನ್ನು ಲಾಕ್ ಡೌನ್ ಮಾಡಿರುವುದಾಗಿ ವರದಿಗಳು ಹೇಳಿವೆ.
ಬೀಜಿಂಗ್ ಕೇಂದ್ರ ಜಿಲ್ಲೆಗಳಾದ ಚೋಯಾಂಗ್ ಮತ್ತು ಹೈಡಿಯನ್ ನಲ್ಲಿ ಗುರುವಾರ ಬೆಳಗ್ಗೆ ಆರು ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿಗಳ ಸಂಪರ್ಕದಿಂದ ಕೋವಿಡ್ ಹರಡಿರುವುದಾಗಿ ವರದಿ ತಿಳಿಸಿದೆ.
ಡಾಂಗ್ ಚೆಂಗ್ ನಲ್ಲಿರುವ ಮಾಲ್ ಅನ್ನು ಬಂದ್ ಮಾಡಲಾಗಿದೆ ಎಂದು ಬೀಜಿಂಗ್ ಯೂತ್ ಡೈಲಿ ವರದಿ ಮಾಡಿದೆ. ಮಾಲ್ ನೊಳಗಿರುವ ಎಲ್ಲಾ ಗ್ರಾಹಕರು ಮತ್ತು ಸಿಬಂದಿಗಳು ಪೂರ್ಣ ಪ್ರಮಾಣದ ಪರೀಕ್ಷೆ ನಡೆಸುವವರೆಗೆ ಅವರು ಹೊರ ಹೋಗುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾದವರ ಜತೆ ಸುಮಾರು 280 ಮಂದಿ ನಿಕಟ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಚೋಯಾಂಗ್ ಮತ್ತು ಹೈಡಿಯಾನ್ ಜಿಲ್ಲೆಗಳಲ್ಲಿ ಸುಮಾರು 12 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement