ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅತಿಯಾದ ವಾಯು ಮಾಲಿನ್ಯ ಉಂಟಾದ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಿಂದ ಹೊರಗೆ ಬರಬೇಡಿ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲಹೆ ನೀಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದೆಹಲಿಯ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ತಮ್ಮ ವಾಹನ ಬಳಕೆಯನ್ನು ಕನಿಷ್ಠ 30 ಪ್ರತಿಶತದಷ್ಟು ಕಡಿತಗೊಳಿಸುವಂತೆ ಸೂಚಿಸಿದೆ. ನಗರದ ನಾಗರಿಕರು ತಮ್ಮ ಹೊರಗಿನ ಚಟುವಟಿಕೆಗಳನ್ನು ಮಿತಿಗೊಳಿಸಲು ಮತ್ತು ನಗರದಲ್ಲಿ ಗಾಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ತಿಳಿಸಲಾಗಿದೆ. ಈ ಋತುವಿನಲ್ಲಿ ದೆಹಲಿಯು ತನ್ನ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕ (AQI) ಮಟ್ಟ ತಲುಪಿದೆ. 24-ಗಂಟೆಗಳ ಸರಾಸರಿ 471 ನೊಂದಿಗೆ ದಾಖಲಿಸಿದ ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈ ಸೂಚನೆ ಬಂದಿದೆ.
ಅಲ್ಲದೆ, ತುರ್ತು ಪ್ರತಿಕ್ರಿಯೆಗಳ ಗುಂಪನ್ನ ಪರಿಚಯಿಸಿದ್ದು, ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕ ಅನಿಲಗಳ ಉತ್ಪಾದನೆಯನ್ನ ಕಡಿಮೆ ಮಾಡುವಂತೆ ಸೂಚಿಸಿದೆ. ಇನ್ನು ನಿಜವಾಗಿಯೂ ಅಗತ್ಯವಿಲ್ಲದಿದ್ದರೆ, ತಮ್ಮ ಮನೆಗಳಿಂದ ಹೊರ ಬರದಂತೆ ನಾಗರಿಕರಿಗೆ ಸಲಹೆ ನೀಡಿದೆ.
ಹೆಚ್ಚುವರಿಯಾಗಿ, ದೆಹಲಿಯ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಯ ‘ತುರ್ತು’ ವರ್ಗದ ಅಡಿಯಲ್ಲಿ ಕ್ರಮಗಳನ್ನು ಜಾರಿಗೆ ತರಲು ಸಂಬಂಧಪಟ್ಟ ಏಜೆನ್ಸಿಗಳನ್ನು ಕೇಳಲಾಗಿದೆ, ಪರಿಸ್ಥಿತಿಯ ತೀವ್ರತೆಗೆ ಅನುಗುಣವಾಗಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಮಾಲಿನ್ಯ-ವಿರೋಧಿ ಕ್ರಮಗಳ ಒಂದು ಸೆಟ್ ತಯಾರಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಶುಕ್ರವಾರ, ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುವುದನ್ನು ನಿಯಂತ್ರಿಸಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅನುಷ್ಠಾನದ ಕುರಿತು ಸಭೆ ನಡೆಯಿತು.
ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಯ ಉಪಸಮಿತಿಯು ಕಚೇರಿಗಳಿಗೆ ವಾಹನ ಬಳಕೆಯನ್ನು ಮಿತಿಗೊಳಿಸಲು, ನಾಗರಿಕರು ತಮ್ಮ ಹೊರಗೆ ಬರದಂತೆ ಚಟುವಟಿಕೆಗಳನ್ನು ನಿರ್ಬಂಧಿಸಲು ಮತ್ತು ಏಜೆನ್ಸಿಗಳನ್ನು ಸಮರೋಪಾದಿಯಲ್ಲಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಕೇಳಿಕೊಳ್ಳಲಾಯಿತು. ಜನರು ಮನೆಯಿಂದ ಕೆಲಸ ಮಾಡಲು, ಮತ್ತು ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಸಮಿತಿಯು ಸೂಚಿಸಿದೆ.
ದೆಹಲಿ-ಎನ್ ಸಿಆರ್ ನಿವಾಸಿಗಳನ್ನ ಉಸಿರುಗಟ್ಟಿಸಿದ ಮತ್ತು ದಿನವಿಡೀ ಕಣ್ಣಿನ ಕಿರಿಕಿರಿಗೆ ಕಾರಣವಾದ ವಿಷಕಾರಿ ಹೊಗೆಯ ದಟ್ಟ ಮಬ್ಬು ಮುಂದಿನ ಒಂದು ವಾರದವರೆಗೆ ಉಳಿಯುವ ಸಾಧ್ಯತೆಯಿದೆ. ಯಾಕಂದ್ರೆ, ಹವಾಮಾನ ಪರಿಸ್ಥಿತಿಗಳು ನವೆಂಬರ್ 18ರವರೆಗೆ ಮಾಲಿನ್ಯಕಾರಕಗಳ ಹರಡುವಿಕೆಗೆ ಹೆಚ್ಚು ಅನನುಕೂಲಕರವಾಗಿರುತ್ತದೆ ಎಂದು ಮಂಡಳಿ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ