ಪ್ರಯಾಣಿಕರೇ ಹುಷಾರ್‌… ಇನ್ಮುಂದೆ ಸಾರಿಗೆ ಬಸ್‌ಗಳಲ್ಲಿ ಮೊಬೈಲ್‌ನಲ್ಲಿ ಹಾಡುಗಳನ್ನು ಜೋರಾಗಿ ಹಾಕಿದ್ರೆ ಅರ್ಧದಲ್ಲೇ ಇಳಿಸ್ತಾರೆ..!

 

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಮೊಬೈಲ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಪ್ಲೇ ಮಾಡುವುದನ್ನು ನಿಷೇಧಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರಿಗೆ ಆಗುವ ಕಿರಿಕಿರಿ ತಪ್ಪಿಸಲು ಈ ಆದೇಶ ಜಾರಿಗೆ ತಂದಿದೆ. ಪ್ರಯಾಣಿಕರು ಕೇಳಬೇಕೆಂದಿದ್ದರೆ ಇಯರ್‌ ಫೋನ್‌ಗಳನ್ನು ಹಾಕಿ ಇತರರಿಗೆ ತೊಂದರೆಯಾಗದಂತೆ ಕೇಳಬಹುದು.
ಸಾರ್ವಜನಿಕರು ಬಸ್ಸಿನಲ್ಲಿ ಮೊಬೈಲ್ ಮೂಲಕ ಜೋರಾಗಿ ಹಾಡು, ವಾರ್ತೆ, ಸಿನಿಮಾ ಇತ್ಯಾದಿ ಹಾಕುವುದನ್ನು  ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ ರಿಟ್ ಅರ್ಜಿಯನ್ನು ಆಧರಿಸಿ ಕರ್ನಾಟಕ ಹೈಕೋರ್ಟ್ ನಿಷೇಧ ಹೇರಲು ನಿರ್ಧರಿಸಿದೆ. ‘ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ದಾಖಲಾಗಿತ್ತು. ಬಸ್‌ಗಳ ಒಳಗೆ ಜೋರಾಗಿ ಹಾಡುಗಳು ಮತ್ತು ವಿಡಿಯೊಗಳನ್ನು ಪ್ಲೇ ಮಾಡಲು ಮೊಬೈಲ್ ಫೋನ್‌ಗಳ ಬಳಕೆ ನಿರ್ಬಂಧಿಸಬೇಕು ಎಂದು ಅದು ಹೇಳಿದೆ.
ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡು, ಕರ್ನಾಟಕ ಹೈಕೋರ್ಟ್ ಆದೇಶವು ಬಸ್‌ನಲ್ಲಿರುವ ಕರ್ತವ್ಯ ನಿರತ ಸಿಬ್ಬಂದಿ ಮೊಬೈಲ್‌ಗಳಲ್ಲಿ ಹಾಡುಗಳು, ವಿಡಿಯೊಗಳು ಸೇರಿದಂತೆ ಯಾವುದೇ ಶಬ್ದಗಳನ್ನು ಜೋರಾಗಿ ಹಾಕದಂತೆ, ಸಹ ಪ್ರಯಾಣಿಕರಿಗೆ ತೊಂದರೆ ಉಂಟುಮಾಡದಂತೆ ಜನರನ್ನು ವಿನಂತಿಸಬೇಕು ಎಂದು ಹೇಳಿದೆ.
ಪ್ರಯಾಣಿಕರು ಸೂಚನೆಗಳನ್ನು ಕೇಳದಿದ್ದರೆ, ಅಧಿಕಾರಿಗಳು ಪ್ರಯಾಣಿಕರನ್ನು ಬಸ್‌ನಿಂದ ಇಳಿಸಬಹುದು” ಎಂದು ಹೈಕೋರ್ಟ್ ಹೇಳಿದೆ.
ಈಗ ಈ ಸಂಬಂಧ ಆದೇಶ ಹೊರಡಿಸಿದ್ದು, ಒಂದು ವೇಳೆ ಪ್ರಯಾಣಿಕರು ನಿಯಮ ಉಲ್ಲಂಘಿಸಿದರೆ, ಅಂತಹವರನ್ನು ಬಸ್ ಸಿಬ್ಬಂದಿ ಬಸ್ ನಿಂದ ಇಳಿಸಬೇಕು, ಅಂತಹ ಪ್ರಯಾಣಿಕರು ಪಾವತಿಸಿದ ದುಡನ್ನು ಹಿಂತಿರುಗಿಸುವಂತಿಲ್ಲ ಎಂದು ಶಿವಯೋಗಿ ಕಳಸದ ಆದೇಶಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement