ಭಾರತದಲ್ಲಿ ಇದೇ ಮೊದಲ ಬಾರಿಗೆ ಅಪರೂಪದ ಗುಲಾಬಿ ಚಿರತೆ ಪತ್ತೆ..!

ಪಾಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜಸ್ಥಾನದ ಪಾಳಿ ಜಿಲ್ಲೆಯ ರಣಕ್​ಪುರ ಪ್ರದೇಶದಲ್ಲಿ ಅಪರೂಪದ ಗುಲಾಬಿ ಚಿರತೆಯನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಚಿರತೆ ಸಾಮಾನ್ಯವಾಗಿ ಮಸುಕಾದ ಹಳದಿ ಬಣ್ಣ ಅಥವಾ ಹಳದಿ- ಕಂದು ಬಣ್ಣವನ್ನು ಹೊಂದಿರುತ್ತದೆ. ಪತ್ತೆಯಾದ ಗುಲಾಬಿ ಚಿರತೆ ಕೆಂಪು ಕಂದು ಮಿಶ್ರಿತ ಚರ್ಮವನ್ನು ಹೊಂದಿರುವುದು ವಿಶೇಷವಾಗಿದೆ.

ರಣಕ್​ಪುರ ಮತ್ತು ಕುಂಭಲ್​ಗಢದ ಸ್ಥಳೀಯರು ಈ ಹಿಂದೆ ಈ ಚಿರತೆಯನ್ನು ನೋಡಿರುವುದಾಗಿ ಹೇಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಸ್ಟ್ರಾಬೆರಿ ಬಣ್ಣದ ಚಿರತೆಯನ್ನು ಅನೇಕ ಸಲ ರಣಕ್‌ಪುರ ಮತ್ತು ಕುಂಭಲ್‌ಘರ್‌ನಲ್ಲಿ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳಿಗೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿರುವುದಾಗಿ ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಉದಯಪುರ ಮೂಲದ ವ್ಯನ್ಯಜೀವಿ ಸಂರಕ್ಷಣಾಧಿಕಾರಿ ಮತ್ತು ಛಾಯಾಗ್ರಾಹಕ ಹಿತೇಶ್ ಮೋಟ್ವಾನಿ ಅವರು ನಾಲ್ಕು ದಿನದ ಹುಡುಕಾಟದ ನಂತರ ಚಿರತೆಯ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಚಿರತೆಯ ವಯಸ್ಸು ಐದರಿಂದ ಆರು ವರ್ಷವಿರಬಹುದು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕುಂಭಲ್​ಗಢ ಅರಣ್ಯ ಪ್ರದೇಶವು ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿದೆ. ಇದು 600 ಚದರ ಕಿಲೋಮೀಟರ್​ಗಳಷ್ಟು ವ್ಯಾಪಿಸಿದೆ. ಭಾರತೀಯ ಚಿರತೆ, ತೋಳ, ಪಟ್ಟೆ ಕತ್ತೆಕಿರುಬ, ಗೋಲ್ಡನ್ ನರಿ ಹೀಗೆ ವಿವಿಧ ಜಾತಿಯ ಪ್ರಾಣಿಗಳ ವಾಸಿಸುವ ನೆಲೆಯಾಗಿದೆ. ಇದೇ ಮೊದಲಿ ಬಾರಿಗೆ ಭಾರತದಲ್ಲಿ ಗುಲಾಬಿ ಚಿರತೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ 2012ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗುಲಾಬಿ ಬಣ್ಣದ ಕೋಟ್​ನಲ್ಲಿ ಚುಕ್ಕೆಗಳಿರುವ ಚಿರತೆ ಕಾಣಿಸಿಕೊಂಡಿರುವುದು ವರದಿಯಾಗಿತ್ತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement