5ಜಿ ಪರೀಕ್ಷೆಗಾಗಿ ವಿ, ರಿಲಯನ್ಸ್‌ಗೆ ಪರವಾನಗಿ ನೀಡಿದ ದೂರ ಸಂಪರ್ಕ ಇಲಾಖೆ

ನವದೆಹಲಿ: ಗುಜರಾತ್‌ನಲ್ಲಿ 5ಜಿ ಪರೀಕ್ಷೆಗಾಗಿ ದೂರಸಂಪರ್ಕ ಇಲಾಖೆ (ಡಿಒಟಿ) 2021ರ ವೊಡಾಫೋನ್ ಐಡಿಯಾಸಂಸ್ಥೆ ಹಾಗೂ ರಿಲಾಯನ್ಸ್ ಜಿಯೋ ಇನ್ಫೋಕಾಮ್‌ ಪರವಾನಗಿ ಮತ್ತು ತರಂಗಗುಚ್ಛವನ್ನು ಹಂಚಿಕೆ ಮಾಡಿದೆ. ಈ ಕುರಿತ ವಿವರವನ್ನು ಕೇಂದ್ರ ಸರ್ಕಾರದ ಸಂಪರ್ಕ ಇಲಾಖೆ ಹಂಚಿಕೊಂಡಿದೆ.
ವೊಡಾಫೋನ್ ಐಡಿಯಾ ಲಿಮಿಟೆಡ್‌ಗೆ ಗಾಂಧಿನಗರದ (ನಗರ ಪ್ರದೇಶ), ಮನ್ಸಾ(ಉಪನಗರ) ಮತ್ತು ಉನಾವದಲ್ಲಿ (ಗ್ರಾಮೀಣ) – ಉಪಕರಣಗಳ ಪೂರೈಕೆದಾರನಾಗಿ ನೋಕಿಯಾಗೆ ಪರವಾನಗಿ ನೀಡಲಾಗಿದೆ.
ರಿಲಾಯನ್ಸ್ ಜಿಯೋ ಇನ್ಫೋಕಾಮ್‌ಗೆ ಜಾಮ್‌ನಗರದಲ್ಲಿ (ಉಪನಗರ/ಗ್ರಾಮೀಣ) – ಉಪಕರಣಗಳ ಪೂರೈಕೆದಾರನಾಗಿ ಸ್ಯಾಮ್ ಸಂಗ್ಗೆ ಪರವಾನಗಿ ನೀಡಲಾಗಿದೆ.
ಗಾಂಧಿನಗರದ ಮಹಾತ್ಮಾ ಮಂದಿರ 5ಜಿ ಸ್ಥಳ’ದಲ್ಲಿ ತಂಡವು ಡೇಟಾ ವೇಗವನ್ನು ಪರಿಶೀಲಿಸಿತು. ಈ ವೇಗವು ಸುಮಾರು 1.5 ಜಿಬಿಪಿಎಸ್ ಇರುವುದು ಕಂಡುಬಂದಿದೆ – ಇದು 4ಜಿಗಿಂತ ಸುಮಾರು 100 ಪಟ್ಟು ವೇಗವಾಗಿದೆ. ನಾನ್-ಸ್ಟ್ಯಾಂಡ್ ಅಲೋನ್ 5ಜಿ ಮೋಡ್‌ನಲ್ಲಿ ವೇಗ ಪರೀಕ್ಷೆ ಮಾಡಲಾಯಿತು.
ಗುಜರಾತ್ ʻಎಲ್‌ಎಸ್‌ಎʼ, ʻಡಿಒಟಿʼ ತಂಡವು ಸ್ಥಳದಲ್ಲಿ ಪರೀಕ್ಷಿಸಿತು. ಬಳಕೆಯ ಪ್ರಕರಣಗಳನ್ನು ಸ್ಟ್ಯಾಂಡ್ ಅಲೋನ್ 5ಜಿ ಮೋಡ್ ಬಳಸಿ ಪರೀಕ್ಷಿಸಲಾಯಿತು.

ನಿಮ್ಮ ಕಾಮೆಂಟ್ ಬರೆಯಿರಿ

advertisement