ಎಬಿಪಿ-ಸಿವೋಟರ್- ಐಎಎನ್‌ಎಸ್‌ ಸಮೀಕ್ಷೆ: ಉತ್ತರ ಪ್ರದೇಶ ಚುನಾವಣೆಯಲ್ಲಿ 108 ಸ್ಥಾನ ಕಳೆದುಕೊಳ್ಳಲಿರುವ ಬಿಜೆಪಿ..ಆದ್ರೂ ಅಧಿಕಾರಕ್ಕೆ

ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಪಕ್ಷವಾಗಿ ಸಮೀಕ್ಷೆಯಲ್ಲಿ ಕಂಡುಬರುತ್ತಿದೆ. ಆದರೆ ಸಮಾಜವಾದಿ ಪಕ್ಷವು ವೇಗವಾಗಿ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿದ್ದು, ಬಿಜೆಪಿ ಈಗ 108 ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ ಎಂದು ಎಬಿಪಿ-ಸಿವೋಟರ್- ಐಎಎನ್‌ಎಸ್‌ ಸಮೀಕ್ಷೆ ಹೇಳಿದೆ.
ಆದರೆ ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಪ್ರಬಲವಾದ ಪುನರಾಗಮನವನ್ನು ಮಾಡುತ್ತಿದೆ ಎಂದು ಅದು ಹೇಳಿದೆ.
ಎಬಿಪಿ-ಸಿವೋಟರ್- ಐಎಎನ್‌ಎಸ್‌ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ 2022 ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ನೆಚ್ಚಿನ ಪಕ್ಷವಾಗಿದ್ದರೂ ಸ್ನ್ಯಾಪ್ ಪೋಲ್ ಪ್ರಕಾರ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ಪಕ್ಷಗಳ ನಡುವಿನ ಸ್ಥಾನಗಳ ಅಂತರವು ಗನಾರ್ಹವಾಗಿ ಕಡಿಮೆಯಾಗುತ್ತಿದೆ.
ಐದು-ರಾಜ್ಯ ಸ್ನ್ಯಾಪ್ ಪೋಲ್ ಅನ್ನು 690 ಸ್ಥಾನಗಳ 1,07,193 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಬಿಜೆಪಿಗೆ 217 ಸ್ಥಾನಗಳು: 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ, ಬಿಜೆಪಿ ಮತ್ತು ಅದರ ಮೈತ್ರಿ ಪಾಲುದಾರರು 217 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, 2017 ರ ಚುನಾವಣೆಯಲ್ಲಿ ಗೆದ್ದ 325 ಸ್ಥಾನಗಳಿಂದ 108 ಸ್ಥಾನಗಳು ಕಡಿಮೆ ಪಡೆಯಲಿದ್ದು, ಇದನ್ನು ಸಮಾಜವಾದಿ ಪಕ್ಷ ಕಸಿದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ ಜನಪ್ರಿಯತೆಯಲ್ಲಿ ವೇಗವಾಗಿ ಏರುತ್ತಿದೆ ಮತ್ತು ಈಗ 156 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಈಗ ಬಿಜೆಪಿ ಮತ್ತು ಎಸ್‌ಪಿ ನಡುವೆ ಕದನ ಸ್ಪಷ್ಟವಾಗಿದ್ದು, ಇವೆರಡರ ನಡುವಿನ ಅಂತರ ಕೇವಲ 60 ಸ್ಥಾನಗಳಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ. ಉತ್ತರ ಪ್ರದೇಶದಲ್ಲಿ, ಬಿಜೆಪಿ ತನ್ನ ಮತ ಪಾಲನ್ನು ಹಿಡಿದಿಟ್ಟುಕೊಂಡಿದ್ದು, ಕೇವಲ ಶೇಕಡಾ 0.7 ರಷ್ಟು ಕುಸಿತದೊಂದಿಗೆ ಶೇಕಡಾ 40.7 ರಷ್ಟು ಮತಗಳಿಸುವ ಸಾಧ್ಯತೆ ಕಂಡುಬರುತ್ತಿದೆ. ಆದರೆ ಸಮಾಜದವಾದಿ ಪಕ್ಷ ಪಡೆಯುವ ಮತಗಳ ಪ್ರಮಾಣಶೇಕಡಾ 7.1 ರಷ್ಟು ಹೆಚ್ಚಾಗುವುದರಿಂದ ಬಿಜೆಪಿಯು 108 ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಆಪರೇಶನ್‌ ಸಿಂಧೂರ ದಾಳಿ ನಂತ್ರ 2019ರ ʼಪುಲ್ವಾಮಾ ಭಯೋತ್ಪಾದಕ ದಾಳಿʼಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ..!

ಉತ್ತರಾಖಂಡದಲ್ಲಿ ಬಿಜೆಪಿ ಮುನ್ನಡೆ:
ಉತ್ತರಾಖಂಡದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ 57 ಸ್ಥಾನಗಳಲ್ಲಿ ಬಿಜೆಪಿ 19 ಸ್ಥಾನಗಳನ್ನು ಕಳೆದುಕೊಳ್ಳಲಿದ್ದರೂ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಮುಟ್ಟುವ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದೆ. ಕಾಂಗ್ರೆಸ್‌ 21 ಸ್ಥಾನಗಳ ಮುನ್ನಡೆಯೊಂದಿಗೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತದೆ ಎಂದು ಅದು ಹೇಳಿದೆ.
ಪಂಜಾಬ್‌ನಲ್ಲಿಯೂ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ನಡುವಿನ ಅಂತರ ಕಡಿಮೆಯಾಗುತ್ತಿದೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿ ಇನ್ನೂ 51 ಸ್ಥಾನಗಳೊಂದಿಗೆ ಮುಂದಿದೆ, ಆದರೆ ಕಾಂಗ್ರೆಸ್ 46 ಸ್ಥಾನಗಳೊಂದಿಗೆ ಅಂತರವನ್ನು ಕಡಿಮೆ ಮಾಡಿದೆ. ಅಕಾಲಿದಳ 20 ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಗೋವಾದಲ್ಲಿ ಬಿಜೆಪಿ 21 ಸ್ಥಾನಗಳಲ್ಲಿ ಮುನ್ನಡೆ:
ಗೋವಾದಲ್ಲಿ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಇತರರು 10, ಎಎಪಿ 5 ಮತ್ತು ಕಾಂಗ್ರೆಸ್ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಸಮೀಕ್ಷೆ ಹೇಳಿದೆ.
ಮಣಿಪುರದಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಪ್ರಮುಖ ಸುದ್ದಿ :-   ಯುದ್ಧ ನಿಲ್ಲಿಸುವಂತೆ ಅಮೆರಿಕಕ್ಕೆ ಪಾಕಿಸ್ತಾನ ಗೋಗರೆದಿದ್ದೇಕೆ..? ಭಾರತದ ಬ್ರಹ್ಮೋಸ್‌ ಶಕ್ತಿಗೆ ಪಾಕ್‌ ಪರಮಾಣು ಶಸ್ತ್ರಾಗಾರದ ಬಳಿಯ ಮಿಲಿಟರಿ ನೆಲೆಗಳು ಧ್ವಂಸ ; ಪಾಕ್‌ ಕಂಗಾಲು...!

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement