ಕೇರಳದ ವಯನಾಡ್ ಜಿಲ್ಲೆಯಲ್ಲಿ ನೊರೊ ವೈರಸ್ ಸೋಂಕು ಪತ್ತೆ..!

ವಯನಾಡು : ಕೊರೊನಾ ವೈರಸ್‌ ಸೋಂಕಿನ ಆರ್ಭಟದ ಮಧ್ಯೆಯೇ, ಝಿಕಾ ವೈರಸ್‌ ನಂತರ ಕೇರಳದಲ್ಲಿ ಈಗ ನೊರೊ ವೈರಸ್‌ ಪತ್ತೆಯಾಗಿದೆ. ನೊರೊ ವೈರಸ್‌ (Norovirus) ಪ್ರಕರಣದ ಕೇರಳದಲ್ಲಿ ದೃಢಪಟ್ಟಿದೆ.
ವಯನಾಡಿನ ವೈತಿರಿ ಜಿಲ್ಲೆಯ ಪೊಕೋಡ್‌ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಮಾರಣಾಂತಿಕ ವೈರಸ್‌ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕಲುಷಿತ ನೀರು ಮತ್ತು ಆಹಾರದಿಂದ ಹರಡುವ ಪ್ರಾಣಿಗಳಿಂದ ನೊರೊ ವೈರಸ್‌ ಸೋಂಕು ಹರಡುತ್ತದೆ. ಎರಡು ವಾರಗಳ ಹಿಂದೆ ವಯನಾಡ್ ಜಿಲ್ಲೆಯ ವೈತಿರಿ ಬಳಿಯ ಪೂಕೋಡ್‌ ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಇದು ದೃಢಪಟ್ಟಿದೆ ಎಂಬುದನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ ದೃಢಪಡಿಸಿದ್ದಾರೆ. ನೊರೊವೈರಸ್ ಸೋಂಕು ರೋಗಿಯ ಜಠರ, ಕರುಳಿನ ಕಾಯಿಲೆ ಉಂಟುಮಾಡುತ್ತದೆ, ಇದರಲ್ಲಿ ಹೊಟ್ಟೆ ಮತ್ತು ಕರುಳಿನ ಒಳಪದರದ ಉರಿಯೂತ, ತೀವ್ರ ವಾಂತಿ, ಅತಿಸಾರವನ್ನು ಉಂಟು ಮಾಡುತ್ತದೆ, ಕುಡಿಯುವ ನೀರಿನ ಮೂಲಕವೇ ಈ ವೈರಸ್‌ ಸೋಂಕು ಅತಿಯಾಗಿ ಹರಡುತ್ತದೆ. ನೊರೊ ವೈರಸ್‌ ಸೋಂಕು ದೃಢಪಟ್ಟರೆ ಶೀಘ್ರದಲ್ಲಿಯೇ ಗುಣಪಡಿಸಬಹುದಾಗಿದೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.
ಆದರೆ ಜನರು ನೊರೊ ವೈರಸ್‌ ಸೋಂಕಿನ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಕೇರಳದ ಆರೋಗ್ಯ ಸಚಿವಾಲಯ ನೊರೊ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಸೋಂಕಿಗೆ ಒಳಗಾದವರು ಮನೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯಬೇಕಾಗಿದೆ. ಹೆಚ್ಚು ವಿಶ್ರಾಂತಿ ಪಡೆಯಬೇಕು, ಮೌಖಿಕ ಪುನರ್ಜಲೀಕರಣ ದ್ರಾವಣಗಳು (ORS) ಮತ್ತು ಕುದಿಸಿದ ನೀರನ್ನು ಕುಡಿಯಬೇಕು ಎಂದು ಸೂಚಿಸಲಾಗಿದೆ.
ಆಹಾರ ಸೇವನೆಯ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಶೌಚಾಲಯಕ್ಕೆ ತೆರಳಿದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಪ್ರಾಣಿಗಳು ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಕುಡಿಯುವ ನೀರಿನ ಮೂಲಗಳು, ಬಾವಿಗಳು ಮತ್ತು ಶೇಖರಣಾ ಟ್ಯಾಂಕ್‌ಗಳನ್ನು ಬ್ಲೀಚಿಂಗ್ ಪೌಡರ್‌ನೊಂದಿಗೆ ಕ್ಲೋರಿನೇಷನ್ ಮಾಡಬೇಕು. ಜನರು ಗೃಹ ಬಳಕೆಗಾಗಿ ಕ್ಲೋರಿನೇಟೆಡ್ ನೀರನ್ನು ಬಳಸಬೇಕು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement