ಜಾರ್ಖಂಡ್‌: ಕುಖ್ಯಾತ ನಕ್ಸಲ್ ನಾಯಕ ಕಿಶನ್‌ ದಾ-ಪತ್ನಿ ಸೆರೆ, ಈತನ ತಲೆಗೆ 1 ಕೋಟಿ ರೂ. ಬಹುಮಾನವಿತ್ತು..!

ರಾಂಚಿ: ಜಾರ್ಖಂಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಮಾವೊವಾದಿ ನಾಯಕ ಪ್ರಶಾಂತ್ ಬೋಸ್ ಅಲಿಯಾಸ್ ಕಿಶನ್ ದಾ ನನ್ನು ಬಂಧಿಸಿದ್ದಾರೆ.
ಈತನ ತಲೆಗೆ ೧ ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು. ಪ್ರಶಾಂತ್ ಬೋಸ್ ಜೊತೆಗೆ ಈತನ ಪತ್ನಿ ಶೀಲಾ ಮರಾಂಡಿಯನ್ನು ಸಹ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
75 ವರ್ಷದ ಬೋಸ್, ನಿಷೇಧಿತ ಸಿಪಿಐ (ಮಾವೋವಾದಿ) ಪಾಲಿಟ್‌ಬ್ಯೂರೋ ಸದಸ್ಯರಾಗಿದ್ದಾರೆ. ಹಾಗೂ ಸಿಪಿಐ (ಮಾವೋವಾದಿ) ಪೂರ್ವ ಪ್ರಾದೇಶಿಕ ಬ್ಯೂರೋದ ಕಾರ್ಯದರ್ಶಿ.ಪಶ್ಚಿಮ ಬಂಗಾಳದಲ್ಲಿ ಜನಿಸಿದ ಬೋಸ್, ಅಲಿಯಾಸ್ ಕಿಶನ್ ದಾ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ದಂಗೆಕೋರರ ಚಟುವಟಿಕೆಗಳ ಉಸ್ತುವಾರಿ ವಹಿಸಿದ್ದರು ಮತ್ತು ಸರಂದಾ ಅರಣ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ನಂಬಲಾಗಿದೆ.
ಶೀಲಾ ಮರಾಂಡಿ ಸಿಪಿಐ (ಮಾವೊವಾದಿ) ಸದಸ್ಯೆಯಾಗಿದ್ದಾಳೆ. ಬಂಧಿತ ನಕ್ಸಲ್ ಹಲವು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುಪ್ತಚರ ಇಲಾಖೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಬೋಸ್‌ನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement