ಅದೇನ್‌ ಭಯ-ಭಕ್ತಿ..: ದೇವರ ಪಾದಮುಟ್ಟಿ ನಮಸ್ಕರಿಸಿ ಅದೇ ದೇವರ ಹುಂಡಿ ಕದ್ದ ಕಳ್ಳ…! ಈ ವಿಡಿಯೊ ವೀಕ್ಷಿಸಿ

ಥಾಣೆ: ದೇವಸ್ಥಾನದಲ್ಲಿ ಹುಂಡಿ ಕದಿಯಲು ಬಂದಿದ್ದ ಕಳ್ಳನೊಬ್ಬ ಕಳ್ಳತನಕ್ಕೂ ಮುನ್ನ ಆತ ಮಾಡಿದ ಕೆಲಸಕ್ಕೆ ಅಚ್ಚರಿಪಡಲೇಬೇಕು..
ಕಳ್ಳನಿಗೂ ಭಯ-ಭಕ್ತಿ ಇದೆಯಾ ಎಂದು ಕೇಳಬೇಡಿ. ಯಾಕೆಂದರೆ ಈ ಕಳ್ಳ ಹುಂಡಿ ಕದಿಯುವಾಗ ದೇವರ ಪಾದ ಮುಟ್ಟಿ ನಮಸ್ಕರಿಸಿ ನಂತರ ಅದೇ ದೇವರ ಹುಂಡಿ ಕದ್ದಿದ್ದಾನೆ..! ಈ ದೃಶ್ಯ ದೇಗುಲದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ.
ಮಹಾರಾಷ್ಟ್ರದ ಥಾಣೆಯ ಖೋಪಾಟ್ ಬಸ್ ಡಿಪೋ ಬಳಿಯಿರುವ ಆಂಜನೇಯ ದೇವಸ್ಥಾನದಲ್ಲಿ ಈ ಘಟನೆ ನಡೆದ್ದು, ವಿಡಿಯೋದಲ್ಲಿ ಯುವಕನೊಬ್ಬ ದೇಗುಲಕ್ಕೆ ಪ್ರವೇಶಿಸುತ್ತಾನೆ. ನಂತರ ಯಾರಿಗೂ ಅನುಮಾನ ಬರದಂತೆ ತನ್ನ ಮೊಬೈಲ್​ ಕ್ಯಾಮರಾದಲ್ಲಿ ದೇವರ ಫೋಟೋಗಳನ್ನು ತೆಗೆಯುತ್ತಾನೆ. ಅತ್ತ ಇತ್ತ ಯಾರಾದರೂ ಇದ್ದಾರೆಯೇ ಎಂದು ತಿರುಗಿ ನೋಡುತ್ತಾನೆ. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ನಂತರ ಆಂಜನೇಯನ ವಿಗ್ರಹದ ಬಳಿ ಬಂದು ದೇವರ ಪಾದ ಮುಟ್ಟಿ ನಮಸ್ಕರಿಸುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ಹುಂಡಿಯೊಂದನ್ನು ಎತ್ತಿಕೊಂಡು ಒರಾರಿಯಾಗುತ್ತಾನೆ..!

ಈ ದೇಗುಲದಲ್ಲಿ ಸದಾ ಪೂಜಾರಿಯೊಬ್ಬರು ಇರುತ್ತಾರೆ. ಆದರೆ ಯಾವುದೋ ಕೆಲಸದ ನಿಮಿತ್ತ ಅವರು ಸ್ವಲ್ಪ ಸಮಯ ಹೊರಗಡೆ ಹೋದಾಗ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಯುವಕ ದೇಗಲಕ್ಕೆ ಬಂದುಈ ಕೃತ್ಯವೆಸಗಿದ್ದಾನೆ, ಆ ಹುಂಡಿಯಲ್ಲಿ ಅಂದಾಜು 1 ಸಾವಿರ ರೂಪಾಯಿ ಇರಬಹುದು ಎಂದು ಪೂಜಾರಿ ಪೊಲೀಸರಿಗೆ ತಿಳಿಸಿದ್ದಾರೆ.
ಹುಂಡಿ ಕದಿಯಲು ಬಂದಿದ್ದು ಇಬ್ಬರು ಬಂದಿದ್ದರಂತೆ. ಮತ್ತೊಬ್ಬ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ. ಮತ್ತೊಬ್ಬ ದೇಗುಲದ ಹೊರಗಡೆ ಯಾರಾದರೂ ಬರುತ್ತಾರೆಯೇ ಎಂದು ನೋಡುತ್ತಿದ್ದನಂತೆ. ಇಬ್ಬರೂ ಸಂಚು ರೂಪಿಸಿ ದೇಗುಲದ ಹುಂಡಿ ಕದ್ದಿದ್ದಾರೆ.
ಆದರೆ ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ವಿಡಿಯೋವನ್ನೇ ಪೊಲೀಸರು ಆ ಊರಿನ ಜನರಿಗೆ ತೋರಿಸಿ ಕಳ್ಳರ ಮಾಹಿತಿ ಕಲೆಹಾಕಿದ್ದಾರೆ. ಕಳ್ಳರು ಅದೇ ಗ್ರಾಮದವರು ಗೊತ್ತಾದ ನಂತರ ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ತಾವು ಹಣ ಕದ್ದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಕಳ್ಳನ ದೈವ ಭಕ್ತಿ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇವರಿಗೆ ಪಾದಮುಟ್ಟಿ ನಮಸ್ಕಾರ ಮಾಡಿ ಅದೇ ದೇವರ ಹುಂಡಿ ಕದ್ದ ಬಗ್ಗೆಯೂ ಅವರದ್ದೇ ಆದ ಅಭಿಪ್ರಾಯ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement