ಮಹಾರಾಷ್ಟ್ರ: 6 ತಿಂಗಳಲ್ಲಿ ತಾಯಿಯಿಲ್ಲದ ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಸೇರಿದಂತೆ 400 ಮಂದಿಯಿಂದ ಅತ್ಯಾಚಾರ..!

ಔರಂಗಾಬಾದ್ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 16 ವರ್ಷದ ಬಾಲಕಿಯ ಮೇಲೆ 400 ಮಂದಿ ಅತ್ಯಾಚಾರವೆಸಗಿದ್ದಾರೆ.
ಆಕೆ ದೂರು ದಾಖಲಿಸಲು ಪ್ರಯತ್ನಿಸಿದಾಗ ಪೋಲೀಸರೂ ಸಹ ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆಕೆ ಈಗ ಎರಡು ತಿಂಗಳ ಗರ್ಭಿಣಿ ಎಂದು ಹೇಳಲಾಗಿದೆ.
ಈ ವಾರ ಆಕೆ ಪೊಲೀಸರಿಗೆ ದೂರು ನೀಡಿದ ನಂತರ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅತ್ಯಾಚಾರ ಮತ್ತು ಕಿರುಕುಳ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಪ್ರಕರಣದ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಬೀಡ್‌ನ ಪೊಲೀಸ್ ವರಿಷ್ಠಾಧಿಕಾರಿ ರಾಜಾ ರಾಮಸಾಮಿ ಭಾನುವಾರ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಪ್ರಾಪ್ತ ಬಾಲಕಿ ನೀಡಿದ ದೂರಿನ ಪ್ರಕಾರ, ಆಕೆ ತನ್ನ ತಾಯಿಯನ್ನು ಕಳೆದು ಒಂದೆರಡು ವರ್ಷಗಳಾಯಿತು. ಎಂಟು ತಿಂಗಳ ಹಿಂದೆ ಆಕೆಯ ತಂದೆ ಅಪ್ರಾಪ್ತ ವಯಸ್ಸಿನಲ್ಲಿಯೇ ಆಕೆ ಮದುವೆ ಮಾಡಿದ್ದರು. ಆದರೆ, ಆಕೆಯ ಪತಿ ಮತ್ತು ಅತ್ತೆ-ಮಾವಂದಿರು ಥಳಿಸಿ ಕೆಟ್ಟದಾಗಿ ನಡೆಸಿಕೊಂಡರು ಎನ್ನಲಾಗಿದೆ.
ಇದರಿಂದ ಆಕೆ ಓಡಿಹೋಗಿ ಮತ್ತೆ ತಂದೆಯೊಂದಿಗೆ ವಾಸವಾಗಲು ಬಂದಿರುವುದಾಗಿ ಹೇಳಿದ್ದಾಳೆ. ಆದರೆ ಆಕೆಯ ತಂದೆ ಅವಳನ್ನು ವಾಪಸ್‌ ಸೇರಿಸಿಕೊಳ್ಳದ ಕಾರಣ, ಅವಳು ಬೀಡ್ ಜಿಲ್ಲೆಯ ಅಂಬಾಜೋಗೈ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಗೆ ಹೋದಳು. ಈ ಸಮಯದಲ್ಲಿ ಅವಳು ಲೈಂಗಿಕ ಶೋಷಣೆಯನ್ನು ಎದುರಿಸಲು ಪ್ರಾರಂಭಿಸಿದಳು ಎಂದು ದೂರಿನಲ್ಲಿ ಹೇಳಿದ್ದಾಳೆ.
ಅಂಬೆಜೋಗಿಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಲೋಕಮತ್‌ ವರದಿ ಮಾಡಿದೆ. ಅದರ ನಂತರ, ಪೊಲೀಸರು ಸೇರಿದಂತೆ ನೂರಾರು ಜನರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಒಟ್ಟಾರೆಯಾಗಿ, ಅವಳು 400 ವಿಭಿನ್ನ ಜನರಿಂದ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾಳೆ. ಈಗ ಎರಡು ತಿಂಗಳ ಗರ್ಭಿಣಿ. ಭ್ರೂಣವನ್ನು ಗರ್ಭಪಾತ ಮಾಡುವ ಮಕ್ಕಳ ಕಲ್ಯಾಣ ಸಮಿತಿಯ ಪ್ರಕ್ರಿಯೆ ನಡೆಯುತ್ತಿದೆ. ಅವಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ ಹೇಳಿಕೆಯಲ್ಲಿ, “ನನ್ನನ್ನು ಅನೇಕ ಜನರು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ. ಅಂಬಾಜೋಗಿ ಠಾಣೆಗೆ ದೂರು ನೀಡಲು ಹಲವು ಬಾರಿ ಹೋದರೂ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ಒಬ್ಬ ಪೋಲೀಸನಿಂದ ನನಗೆ ಕಿರುಕುಳವಾಯಿತು ಎಂದು ತಿಳಿಸಿದ್ದಾಳೆ.
ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376, 376 (N), 376 (3), 376 (D) (A) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆ ಅಡಿಯಲ್ಲಿ ಈ ವಾರ ಪೊಲೀಸ್ ದೂರು ಮತ್ತು ಪ್ರಕರಣ ದಾಖಲಾಗಿದೆ. ಇದೀಗ ತನಿಖೆ ನಡೆಯುತ್ತಿದ್ದು, ಈವರೆಗೆ ಮೂವರನ್ನು ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement