ರಾಯಚೂರಿನ ಹಚ್ಚಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ

ರಾಯಚೂರು: ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸ್ಕ್ರ್ಯಾಪ್ ಯಾರ್ಡಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದ ವಾಯು ಮಾಲಿನ್ಯ ಉಂಟಾಗಿದೆ.
ಸಮೀಪದಲ್ಲಿ ಹಾ ಕಸಕ್ಕೆ ಬೆಂಕಿ ಹಚ್ಚಿದ್ದು ಇದಕ್ಕೆ ತಗುಲಿದೆ ಎನ್ನಲಾಗಿದೆ.
ಚಿನ್ನದ ಗಣಿಗೆ ಸಮೀಪದಲ್ಲಿನ ಟೈರ್‌ಗಳಿಗೂ ಬೆಂಕಿ ತಗುಲಿ, ಧಗಧಗಿಸಿ ಹೊತ್ತಿ ಉರಿಯುತ್ತಿದೆ. ಕಳೆದ ಎರಡು ಗಂಟೆಯಿಂದ ಟೈರ್ ಗೆ ತಗುಲಿರುವಂತ ಬೆಂಕಿ ಹೊತ್ತಿ ಉರಿಯುತ್ತಿದ್ದು, ಬೆಂಕಿ ನಂದಿಸುವುದಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಯಾರ್ಡ್ ನಲ್ಲಿ ಸುಮಾರು 500ಕ್ಕೂ ಅಧಿಕ ಹಳೆಯ ಟೈರ್ ಗಳನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ.
ಭಾರೀ ಪ್ರಮಾಣದ ಹೊಗೆ ಹೊರಸೂಸುತ್ತಿದ್ದು, ಸುತ್ತಲಿನ ನಿವಾಸಿಗಳು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಸ್ಥಳದ ಪಕ್ಕದಲ್ಲೇ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ.

0 / 5. 0

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ನಿಮ್ಮ ಕಾಮೆಂಟ್ ಬರೆಯಿರಿ

advertisement