ಈಜಿಪ್ಟ್: ಚೇಳುಗಳ ಕಡಿತಕ್ಕೆ ಮೂವರು ಸಾವು, 500 ಜನರು ಅಸ್ವಸ್ಥ..!

ಬಲವಾದ ಚಂಡಮಾರುತ ನಂತರ ಸಂಭವಿಸಿದ ಮಳೆ ದುರಂತದ ನಂತರ ಈಜಿಪ್ಟ್ (Egypt)ನ ದಕ್ಷಿಣ ನಗರ ಅಸ್ವಾನ್ ಪ್ರದೇಶದಲ್ಲಿ ಚೇಳುಗಳ ಹಾವಳಿಯಿಂದ 500ಕ್ಕೂ ಹೆಚ್ಚು ಜನರನ್ನು ಚೇಳುಗಳು ಕಚ್ಚಿದ್ದು, ಅವುಗಳ ಪೈಕಿ ಮೂವರು ಸಾವಿಗೀಡಾಗಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಚೇಳುಗಳು ಕಚ್ಚಿ ಮೂವರು ಸತ್ತಿದ್ದಾರೆ. ಆದರೆ ಅಸ್ವಾನ್ ಪ್ರದೇಶದ ಗವರ್ನರ್ ಮೇಜರ್ ಜನರಲ್ ಅಶ್ರಫ್ ಅತಿಯಾ ಅವರು ಮೂವರು ಸತ್ತಿದ್ದಾರೆ ಎಂಬ ಸುದ್ದಿಯನ್ನು ನಿರಾಕರಿಸಿದ್ದಾರೆ. ಚೇಳು ಕಡಿತದಿಂದ 500ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೆ ಯಾರೂ ಸತ್ತಿಲ್ಲ ಎಂದು ಹೇಳಿದ್ದಾರೆ.
ಪರ್ವತಗಳು ಮತ್ತು ಮರುಭೂಮಿಗಳ ಸಮೀಪವಿರುವ ಹಳ್ಳಿಗಳಲ್ಲಿನ ವೈದ್ಯಕೀಯ ಕೇಂದ್ರಗಳಿಗೆ ಹೆಚ್ಚುವರಿ ಪ್ರಮಾಣದ ಎಂಟಿ-ವೆನಮ್ ಅನ್ನು ಒದಗಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಅಲ್-ಅಹ್ರಾಮ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಈಜಿಪ್ಟ್‌ನ ಪರ್ವತ ಪ್ರದೇಶಗಳಲ್ಲಿ ಭಾರೀ ಮಳೆಯ ಸಮಯದಲ್ಲಿ ಚೇಳುಗಳು ನಿಯಮಿತವಾಗಿ ಬೀದಿಗಳಲ್ಲಿ ಮತ್ತು ಮನೆಗಳಿಗೆ ಬಂದು ಸೇರುತ್ತಿವೆ ಎಂದು ಅವರು ಹೇಳಿದರು.
ಶುಕ್ರವಾರ, ನವೆಂಬರ್ 12, 2021 ರಂದು, ಅಸ್ವಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಲವಾದ ಚಂಡಮಾರುತವಿತ್ತು. ಈ ಪ್ರದೇಶಗಳು ಕೆಂಪು ಸಮುದ್ರ ಶ್ರೇಣಿಗಳ ಪಕ್ಕದಲ್ಲಿವೆ. ಅಂದರೆ, ಕೆಲವು ಪ್ರದೇಶಗಳು ಶುಷ್ಕವಾಗಿವೆ, ಕೆಲವು ಹಸಿರು ಮತ್ತು ಕೆಲವು ಮರುಭೂಮಿಗಳಾಗಿವೆ. ಮಳೆ ಮತ್ತು ಪ್ರವಾಹದಿಂದಾಗಿ ನೀರು ಭೂಮಿಗಿಳಿದಿಗಾಗ ನೆಲದೊಳಗಿದ್ದ ಚೇಳುಗಳು ಹೊರಬಂದಿವೆ. ಚಂಡ ಮಾರುತಕ್ಕೆ ಅಸ್ವಾನ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶವು ಧ್ವಂಸಗೊಂಡಿದ್ದು, ಮರಗಳು, ಮನೆಗಳು ಕುಸಿದಿವೆ. ಇಂಟರ್ನೆಟ್ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement