ಭಾರೀ ಮಾದಕ ದ್ರವ್ಯ ಸಾಗಣೆ: ಗುಜರಾತಿನಲ್ಲಿ 600 ಕೋಟಿ ಮೌಲ್ಯದ 120 ಕೆಜಿ ಹೆರಾಯಿನ್ ವಶ…!

ಅಹ್ಮದಾಬಾದ್‌: ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ 120 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 600 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮೋರ್ಬಿಯ ಜಿಂಜುಡಾ ಗ್ರಾಮದಲ್ಲಿ ಕೋಟಿ ಮೌಲ್ಯದ 100 ಕೆಜಿಗೂ ಅಧಿಕ ಹೆರಾಯಿನ್ ವಶಪಡಿಸಿಕೊಂಡಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
“ಇದು ಗುಜರಾತ್ ಪೊಲೀಸರ ಮತ್ತೊಂದು ಸಾಧನೆಯಾಗಿದೆ. ಗುಜರಾತ್ ಪೊಲೀಸರು ಡ್ರಗ್ಸ್ ನಿರ್ಮೂಲನೆಗೆ ಮುಂಚೂಣಿಯಲ್ಲಿದೆ. ಗುಜರಾತ್ ಎಟಿಎಸ್ ಸುಮಾರು 120 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ” ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಕಚ್‌ನ ಮುಂಡ್ರಾ ಬಂದರಿನಿಂದ ಸುಮಾರು 21,000 ಕೋಟಿ ರೂಪಾಯಿ ಮೌಲ್ಯದ ಸುಮಾರು 3,000 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಶಪಡಿಸಿಕೊಂಡ ತಿಂಗಳ ನಂತರ ಈ ಬೆಳವಣಿಗೆಯಾಗಿದೆ.
ಅರೆ-ಸಂಸ್ಕರಿತ ಟಾಲ್ಕ್ ಕಲ್ಲುಗಳನ್ನು ಸಾಗಿಸಲು ಘೋಷಿಸಲಾದ ಎರಡು ಸರಕು ಕಂಟೈನರ್‌ಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ಕಂಡುಬಂದಿದೆ. ಡ್ರಗ್ಸ್ ಅಫ್ಘಾನಿಸ್ತಾನದಿಂದ ರವಾನೆಯಾಗಿದೆ.
ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಳಿ ಇರುವ ಪ್ರಕರಣದಲ್ಲಿ ಚೆನ್ನೈ ಮೂಲದ ದಂಪತಿ ಮತ್ತು ಕೊಯಮತ್ತೂರಿನಿಂದ ಮತ್ತೊಬ್ಬ ಆರೋಪಿಯನ್ನು ಡಿಆರ್‌ಐ ಬಂಧಿಸಿದೆ.
ವಶಪಡಿಸಿಕೊಂಡ ಹೆರಾಯಿನ್ ಅನ್ನು ಕಂದಹಾರ್ ಮೂಲದ ಹಸನ್ ಹುಸೇನ್ ಲಿಮಿಟೆಡ್ ರಫ್ತು ಮಾಡಿತ್ತು ಮತ್ತು ವಿಜಯವಾಡ ಮೂಲದ ಟ್ರೇಡಿಂಗ್ ಕಂಪನಿಯು ಇರಾನ್‌ನ ಬಂದರ್ ಅಬ್ಬಾಸ್ ಪೋರ್ಟ್ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ಆಮದು ಮಾಡಿಕೊಂಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement