ಉಗಾಂಡಾ: ಕಂಪಾಲಾದಲ್ಲಿ”ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ ತಂಡ ತಂದಿದ್ದ ಹೊಟೇಲ್‌ ಸಮೀಪವೇ ಸರಣಿ ಬಾಂಬ್ ಸ್ಫೋಟ: ಎಲ್ಲರೂ ಸುರಕ್ಷಿತ

ಉಗಾಂಡಾ ರಾಜಧಾನಿಯಯಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಹಲವಾರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಭಾರತೀಯ ಪ್ಯಾರಾ-ಬ್ಯಾಡ್ಮಿಂಟನ್ ತಂಡ ತಂಗಿದ್ದ ಹೋಟೆಲಿನ ಪಕ್ಕದಲ್ಲಿಯೇ ಈ ಸ್ಫೋಟಗಳು ಸಂಭವಿಸಿದ್ದು, ತಂಡ ಯಾವುದೇ ಅಪಾಯವಾಗದೆ ಬಚಾವ್‌ ಆಗಿದೆ.
ಉಗಾಂಡಾದ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್ ನ್ಯಾಷನಲ್ 2021ರಲ್ಲಿ ಭಾಗವಹಿಸಲು ಭಾರತದ ಪ್ರಮೋದ ಭಗತ್, ಮನೋಜ್ ಸರ್ಕಾರ್ ಅವರನ್ನೊಳಗೊಂಡ ಭಾರತ ತಂಡ ತೆರಳಿದೆ. ಭಾರತೀಯ ಶಟ್ಲರ್ʼಗಳು ಹೋಟೆಲ್ ತಂಗಿದ್ದ ಹೊಟೇಲ್‌ ಕೇವಲ ನೂರು ಮೀಟರ್‌ ಸಮೀಪದಲ್ಲಿಯೇ ಈ ಸ್ಫೋಟ ಸಂಭವಿಸಿದೆ. ಈ ಘಟನೆ ಬಗ್ಗೆ ಪ್ಯಾರಾ-ಬ್ಯಾಡ್ಮಿಂಟನ್ ಇಂಡಿಯಾ ತನ್ನ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಆಟಗಾರರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

ತಂಡದೊಂದಿಗೆ ಪ್ರಯಾಣಿಸಿದ ಪ್ರಮೋದ್ ಭಗತ್ ಅವರು ಇತ್ತೀಚೆಗೆ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗಳನ್ನು ಪಡೆದರು. “ನನ್ನ ಕುಟುಂಬದೊಂದಿಗೆ ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ ಗೌರವ. ಇದು ನನಗೆ ಉತ್ತಮ ಪ್ರದರ್ಶನ ನೀಡಲು ಮತ್ತು ಭಾರತಕ್ಕೆ ಹೆಚ್ಚಿನ ಪದಕಗಳನ್ನು ಗೆಲ್ಲಲು ಪ್ರೇರೇಪಿಸುತ್ತದೆ ಎಂದು ಅವರು ಮೂರು ದಿನಗಳ ಹಿಂದೆ ಟ್ವಿಟರ್‌ನಲ್ಲಿ ಹೇಳಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement